ಬೆಂಗಳೂರು: ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೊಸಹೊಸ ವಸ್ತುಗಳು ಲಗ್ಗೆ ಇಟ್ಟು ಹಳೆಯ ನೆನಪು ಮಾಸಿ ಹೋಗುವಂತಾಗಿದೆ. ಹೀಗೆ ವಿದ್ಯಾರ್ಥಿಗಳ ಹಾಗೂ ನೌಕರರ ಜತೆ ಬಾಂಧವ್ಯ ಹೊಂದಿದ್ದ ರೆನಾಲ್ಡ್ಸ್ ಪೆನ್ನು ಮಾರುಕಟ್ಟೆಯಿಂದ ಕಣ್ಮರೆಯಾಗುತ್ತಿವೆ. ರೆನಾಲ್ಡ್ಸ್ ತನ್ನ ಐಕಾನಿಕ್ ಬಾಲ್ ಪೆನ್, 045 ಅನ್ನು ನಿಲ್ಲಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್‌ ಆದ ನಂತರ ’90 ರ ದಶಕದವರು ನಿರಾಶೆಗೊಂಡರು. ಈ ಕುರಿತಾಗಿ ಕಂಪನಿ ಸ್ಪಷ್ಟನೆ ಕೊಟ್ಟಿದೆ.
1945ರಲ್ಲಿ ಅಮೆರಿಕದಲ್ಲಿ ವ್ಯವಹಾರ ಆರಂಭಿಸಿದ ರೇನಾಲ್ಡ್ಸ್ 1948ರಲ್ಲಿ ಯೂರೋಪಿಯನ್ ಮಾರುಕಟ್ಟೆ ಪ್ರವೇಶಿಸಿತು. 1959ರಲ್ಲಿ ಸೌತ್ ಆಫ್ರಿಕಾದಲ್ಲಿ ಶುರುವಾಯಿತು. ಬಳಿಕ ಮೆಕ್ಸಿಕೋ, ಫ್ರಾನ್ಸ್, ಭಾರತದಲ್ಲಿ ಇದರ ಅಂಗಸಂಸ್ಥೆಗಳು ಪ್ರಾರಂಭವಾದವು.
Reynolds 045 Fine Carbure will no longer be available in market, end of an era..💔pic.twitter.com/pSU4WoB5gt
— 90skid (@memorable_90s)August 24, 2023

ಅಮೆರಿಕ ಮೂಲದ ರೇನಾಲ್ಡ್ಸ್ ಪೆನ್ ಭಾರತೀಯರ ಪಾಲಿಗೆ ಭಾರತೀಯ ಕಂಪನಿಯೇ ಆಗಿದೆ. ಎಂಬತ್ತು, ತೊಂಬತ್ತರ ದಶಕದಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಪೆನ್ ರೇನಾಲ್ಡ್ಸ್​ನದ್ದಾಗಿದೆ. ರೆನಾಲ್ಡ್ಸ್ ಪೆನ್ನುಗಳಿಗೆ ಪಾರ್ಕರ್, ಪೈಲಟ್ ಮತ್ತು ಮಿತ್ಸುಬಿಷಿ ಸೇರಿದಂತೆ ಸುಮಾರು ಪೆನ್ನುಗಳು ಪ್ರತಿಸ್ಪರ್ಧಿಗಳಿದ್ದವು. ಆದರೆ ಜೇಬುಗಳಲ್ಲಿ ಇಟ್ಟುಕೊಂಡಾಗ ಈ ಪೆನ್‌ಗಳು ಸೋರಿಕೆಯಾಗಿ ಬಟ್ಟೆ, ಬ್ಯಾಗ್‌ ಎಲ್ಲವೂ ನೀಲಿ ಆಗುತ್ತಿದ್ದವು ಮತ್ತು ಬೆಲೆ ವಿಚಾರವಾಗಿ ದುಬಾರಿ ಕೂಡ ಆಗಿದ್ದವು. ಆದರೆ ರೆನಾಲ್ಡ್ಸ್ ಪೆನ್ನುಗಳಲ್ಲಿ ಈ ದೂರುಗಳೇ ಇರಲಿಲ್ಲ. ಆದರೆ, ರೇನಾಲ್ಡ್ಸ್​ನ ಜನಪ್ರಿಯ 045 ಪೆನ್ ಸರಬರಾಜು ನಿಂತುಹೋಗುತ್ತದೆ ಎಂಬಂತಹ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಈ ಕುರಿತಾಗಿ ಕಂಪನಿ ಸ್ಪಷ್ಟನೆ ನೀಡಿದೆ.
ಸುಳ್ಳು ಎಂದ ರೇನಾಲ್ಡ್ಸ್ ಕಂಪನಿ?;‘ ರೇನಾಲ್ಡ್ಸ್ ಪೆನ್ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು. ವಿವಿಧ ಮಾಧ್ಯಗಳಲ್ಲಿ ರೇನಾಲ್ಡ್ಸ್ ಬಗ್ಗೆ ಸುಳ್ಳು ಮಾಹಿತಿ ಹಬ್ಬಿದೆ. ಭಾರತದಲ್ಲಿ 45 ವರ್ಷ ವ್ಯವಹಾರದ ನಂಟು ಹೊಂದಿರುವ ರೇನಾಲ್ಡ್ಸ್ ಸಂಸ್ಥೆ ಗುಣಮಟ್ಟ ಮತ್ತು ನಾವೀನ್ಯತೆಗೆ ಆದ್ಯತೆ ಕೊಡುತ್ತಾ ಬಂದಿದೆ. ಭಾರತದಲ್ಲಿ ಬರವಣಿಗೆ ವ್ಯವಹಾರವನ್ನು ಬೆಳೆಸುವ ಮತ್ತು ವಿಸ್ತರಿಸುವ ಭವಿಷ್ಯದ ಯೋಜನೆ ಹೊಂದಿದ್ದೇವೆ. ಸರಿಯಾದ ಮಾಹಿತಿಗೆ ನಮ್ಮ ವೆಬ್​ಸೈಟ್ ಮತ್ತು ಸೋಷಿಯಲ್ ಮೀಡಿಯಾ ಚಾನಲ್​ಗಳನ್ನು ನೋಡಿ. ನೀವು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಅತಿಪ್ರಮುಖ ಆದ್ಯತೆಯಾಗಿದೆ’ ಎಂದು ರೇನಾಲ್ಡ್ಸ್ ಇಂಡಿಯಾ ಮ್ಯಾನೇಜ್ಮೆಂಟ್ ತನ್ನ ಇನ್ಸ್​ಟಾಗ್ರಾಮ್ ಖಾತೆಯಿಂದ ಹೇಳಿಕೆ ಬಿಡುಗಡೆ ಮಾಡಿದೆ.
ಐಕಾನಿಕ್ ಪೆನ್ನನ್ನು ಸ್ಥಗಿತಗೊಳಿಸುವ ಬಗ್ಗೆ ಊಹಾಪೋಹಗಳಿಗೆ ಕೊನೆ ಹಾಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ದೃಢವಾದ ಅಸ್ತಿತ್ವವನ್ನು ಕಾಯ್ದುಕೊಳ್ಳುವುದನ್ನು ಮುಂದುವರೆಸಿದೆ ಎಂದು ಕಂಪನಿಯು ದೃಢವಾಗಿ ಪ್ರತಿಪಾದಿಸಿದೆ.
ಕೇವಲ 750 ರೂ. ಸಾಲ ಮಾಡಿ ಮಗ ಪ್ರಾಣ ಕಳೆದುಕೊಂಡಿದ್ದಾನೆ; ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟ ಹೆತ್ತವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 16 =
Remember me
