ಬೆಂಗಳೂರು:ಮುದ್ದಾದ ಪ್ರಾಣಿಗಳ ಚಿನ್ನಾಟ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಆನೆ ಮರಿಗಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಆನೆ ಮರಿಗಳು ಯಾವಾಗಲು ತಾಯಿ ಆನೆ ಜೊತೆ ಇರುತ್ತಾ ತುಂಟಾಟ ಮಾಡುತ್ತಾ ಕಾಲ ಕಳೆಯುತ್ತವೆ.
ಪ್ರಸ್ತುತ ಈ ಕರೊನಾ ಸಂದರ್ಭದಲ್ಲಿ ಆನೆಮರಿಯೊಂದು ಚಿನ್ನಾಟವಾಡಿರುವುದು ನಾಗರಿಕ ಸಮಾಜಕ್ಕೆ ಪಾಠ ಹೇಳುವಂತಿದೆ. ಕಾಡಿನಲ್ಲಿ ಆನೆ ಮರಿಯೊಂದು ಏಕಾಂಗಿಯಾಗಿ ತುಂಟಾಟ ಆಡುತ್ತಾ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ.
Stay aloof,Play aloud & alone💕(Break the chain of CORONA)pic.twitter.com/jikOqxqQR8
— Susanta Nanda (@susantananda3)April 29, 2021

ಐಎಫ್​ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್​​ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಆನೆ ಮರಿಯ ಉದಾಹರಣೆಯೊಂದಿಗೆ ಒಬ್ಬರೇ ಸಂತೋಷದಿಂದ ಇದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಸದ್ಯ ಕಾಲ ಕಳೆಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಮುದ್ದಾದ ಆನೆ ಮರಿ ಹುಲ್ಲಿನ ಕಟ್ಟಿನೊಂದಿಗೆ ಚಿನ್ನಾಟ ಆಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.(ವೆಬ್​ ಡೆಸ್ಕ್)
ಕರೊನಾ ಎಫೆಕ್ಟ್: ರೈಲು ಪ್ರಯಾಣಿಕರಿಗೂ ಶಾಕ್​! ಈ ಎಲ್ಲ ರೈಲು ಸಂಚಾರ ಸ್ಥಗಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
