ಮಧ್ಯಪ್ರದೇಶ:ಮಹಿಳೆಯೊಬ್ಬಳು ರಾಶಿ ರಾಶಿ ಪಿಸ್ತೂಲ್​ಗಳನ್ನು ನೀರಿನಲ್ಲಿ ತೊಳೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ವಿಡಿಯೋ ಬೆನ್ನತ್ತಿದ ಪೊಲೀಸರು ಇದೀಗ ಅಕ್ರಮ ಪಿಸ್ತೂಲ್ ದಂಧೆ ನಡೆಸುತ್ತಿದ್ದವರ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿದ್ದಲ್ಲದೇ, ಅಕ್ರಮವಾಗಿ ತೆರೆದಿದ್ದ ಪಿಸ್ತೂಲ್ ಕಾರ್ಖಾನೆಯನ್ನು ಕೂಡ ಮುಚ್ಚಿಸಿದ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ವಿಶ್ವದ ಅತಿ ದುಬಾರಿ ನೀರು ಕುಡಿಯುತ್ತಾರಾ ನೀತಾ ಅಂಬಾನಿ?! ಬೆಲೆ ಕೇಳಿದ್ರೆ ಹುಬ್ಬೇರುತ್ತೆ
ವಿಡಿಯೋದಲ್ಲಿ ಪಿಸ್ತೂಲ್​ಗಳನ್ನು ಶುಭ್ರವಾಗಿ ಕಾಣುವಂತೆ ತೊಳೆಯುತ್ತಿದ್ದ ಮಹಿಳೆ, ಆಕೆಯ ಪತಿ ಮತ್ತು ಮಾವನನ್ನು ಇದೀಗ ಪೊಲೀಸರು ಅಕ್ರಮ ಪಿಸ್ತೂಲ್ ದಂಧೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಮೊರೆನಾ ಜಿಲ್ಲೆಯ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ತಡ ತಮ್ಮ ತಂಡದೊಂದಿಗೆ ಚುರುಕು ತನಿಖೆ ಕೈಗೊಂಡ ಅಧಿಕಾರಿಗಳು, ಇದೀಗ ಅಕ್ರಮದ ಜಾಲವನ್ನು ಪತ್ತೆಹಚ್ಚಿ, ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.
ಶುಕ್ರವಾರ (ಆ.9) ಸಂಜೆ, ಪೊಲೀಸರು ಶಂಕಿತ ಫ್ಯಾಕ್ಟರಿ ಮೇಲೆ ರಾತ್ರಿ 8 ಗಂಟೆಗೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಮಹಿಳೆಯ ಪತಿ ಶಕ್ತಿ ಕಪೂರ್ ಸಖ್ವಾರ್ ಮತ್ತು ಆಕೆಯ ಮಾವ ಬಿಹಾರಿಲಾಲ್, ತಾವು ಅಕ್ರಮವಾಗಿ ಸಾಗಿಸಲು ವ್ಯವಸ್ಥೆ ಮಾಡಿಕೊಂಡಿದ್ದ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಅಷ್ಟರೊಳಗೆ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಪೊಲೀಸರು ಶಕ್ತಿ ಕಪೂರ್‌ಗೆ ಸೇರಿದ 315 ಬೋರ್ ಮತ್ತು 32 ಬೋರ್ ಪಿಸ್ತೂಲ್‌ಗಳು ಸೇರಿದಂತೆ ಅರೆ ತಯಾರಿಸಿದ ಬಂದೂಕುಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಜಪೋರಿಜಿಯಾ ಅಣುವಿದ್ಯುತ್​ ಕೇಂದ್ರದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ! ಉಕ್ರೇನ್​ ಹೆದರಿಸಲು ರಷ್ಯಾ ಸ್ಫೋಟಿಸಿತೇ?
ಶಕ್ತಿ ಕಪೂರ್ ಮತ್ತು ಬಿಹಾರಿಲಾಲ್ ಸಖ್ವಾರ್ ಇಬ್ಬರನ್ನೂ ಅಂಬಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಕೋರ್ಟ್​ ಆದೇಶದಂತೆ ಬಿಹಾರಿಲಾಲ್​ನನ್ನು ಜೈಲಿಗೆ ಕಳುಹಿಸಿದ್ದಾರೆ. ಆದ್ರೆ, ಶಕ್ತಿ ಕಪೂರ್​ನನ್ನು ಮಾತ್ರ ಒಂದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅಕ್ರಮ ಶಸ್ತ್ರಾಸ್ತ್ರಗಳ ಜಾಲ ಎಲ್ಲೆಲ್ಲಿದೆ? ಎಲ್ಲಿಗೆ ಇದನ್ನೆಲ್ಲಾ ರವಾನಿಸುತ್ತಿದ್ದೀರಿ? ಎಂದು ಅಧಿಕಾರಿಗಳು ಆರೋಪಿಗಳಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರೆದಿದೆ,(ಏಜೆನ್ಸೀಸ್).
ಹಿಂಡನ್​ಬರ್ಗ್ ಹಿಡನ್ ಅಜೆಂಡಾ: ಅದಾನಿ ಷೇರುಗಳು 7% ದಿಢೀರ್​ ಕುಸಿತ! ಹೂಡಿಕೆದಾರರಿಗೆ 53 ಕೋಟಿ ರೂ. ನಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
