ನವದೆಹಲಿ:ಹಾವುಗಳು ನಿಧಿಗಳನ್ನು ಕಾಯುತ್ತವೆ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಆದರೆ, ಈಗ ಹಾವುಗಳು ಟೊಮ್ಯಾಟೋವನ್ನೂ ಸಹ ಕಾಯುತ್ತವೆ. ಏಕೆಂದರೆ, ಟೊಮ್ಯಾಟೋ ಈಗ ನಿಧಿಯಷ್ಟೇ ದುಬಾರಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ದೇಶದಲ್ಲಿ ಪ್ರತಿಕೂಲ ವಾತಾವರಣದಿಂದಾಗಿ ಟೊಮ್ಯಾಟೋ ಅನಿಶ್ಚಿತತೆ ಮುಂದುವರಿದಿದೆ. ಟೊಮ್ಯಾಟೋ ಬೆಲೆ ಗಗನಮುಖಿಯಾಗಿದ್ದು, ಏರಿಯಾಗಳಿಗೆ ಅನುಗುಣವಾಗಿ 100 ರಿಂದ 200ರೂ. ವರೆಗೂ ಏರಿಕೆಯಾಗಿದೆ. ಒಂದೆಡೆ ಗ್ರಾಹಕರಿಗೆ ಹೊರೆಯಾಗಿದ್ದರೆ, ಇನ್ನೊಂದೆಡೆ ಟೊಮ್ಯಾಟೋ ಬೆಳೆದ ರೈತರಿಗೆ ಖುಷಿ ತಂದಿದೆ. ಭಾರೀ ಬೇಡಿಕೆಯಿಂದ ಟೊಮ್ಯಾಟೋಗೆ ಚಿನ್ನದ ಬೆಲೆ ಬಂದಿದ್ದು, ಹಲವೆಡೆ ಟೊಮ್ಯಾಟೋ ಕಳ್ಳತನದಂತಹ ಪ್ರಕರಣಗಳು ನಡೆಯುತ್ತಿದೆ. ಹೀಗಾಗಿ ಟೊಮ್ಯಾಟೋ ಬೆಳೆ ರಕ್ಷಿಸಿಕೊಳ್ಳಲು ರೈತರು ನಾನಾ ಸರ್ಕಸ್​ ಮಾಡುತ್ತಿದ್ದಾರೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಕಾರುಗಳ ನಡುವೆ ಸರಣಿ ಅಪಘಾತ, ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆ ಸಾವು
ಉತ್ತರ ಪ್ರದೇಶದ ತರಕಾರಿ ಮಾರಾಟಗಾರನೊಬ್ಬ ಟೊಮ್ಯಾಟೋ ಕಾಯಲು ಬೌನ್ಸರ್​ಗಳನ್ನು ನೇಮಿಸಿದ್ದ ಸುದ್ದಿ ಕೆಲ ದಿನಗಳಿಂದ ವೈರಲ್​ ಆಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಸುದ್ದಿ ವೈರಲ್​ ಆಗಿದೆ. ಆದರೆ, ಈ ಬಾರಿ ಟೊಮ್ಯಾಟೋ ಕಾಯುತ್ತಿರುವುದು ಬೌನ್ಸರ್ಸ್​ ಅಲ್ಲ, ಬದಲಾಗಿ ವಿಷಕಾರಿ ನಾಗರ ಹಾವು. ಟೊಮ್ಯಾಟೋ ಮುಂದೆ ಹೆಡೆ ಬಿಚ್ಚಿ ಕುಳಿತಿರುವ ನಾಗರಹಾವು, ಟೊಮ್ಯಾಟೋ ಮುಟ್ಟಲು ಮುಂದೆ ಬರುವವರಿಗೆ ಬುಸುಗುಟ್ಟಿ, ಕಚ್ಚಲು ಹೋಗುತ್ತಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು mirzamdarif1 ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ವೈರಲ್​ ಆಗುತ್ತಿದೆ. ನಿಧಿಗಿಂತಲೂ ಬೆಲೆ ಬಾಳುವ ಟೊಮ್ಯಾಟೋವನ್ನು ಹಾವು ಕಾಯುತ್ತಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಎಂಥಾ ಕಾಲಪ್ಪ ಬಂತಪ್ಪಾ ಎಂದು ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.(ಏಜೆನ್ಸೀಸ್​)
A post shared by Mirza Md Arif (@mirzamdarif1)

ಇಳಿಮುಖದತ್ತ ಯಮುನಾ ನದಿಯ ನೀರಿನ ಮಟ್ಟ: ಮೆಟ್ರೋ ರೈಲಿನ ವೇಗಕ್ಕೆ ಹೇರಿದ್ದ ನಿರ್ಬಂಧ ತೆರವು

ಕಾರ್ಪೊರೇಟ್‍ ಲೋಕ ತೊರೆದು ಹೈನುಗಾರಿಕೆ ಶುರು ಮಾಡಿದ ಟೆಕ್ಕಿ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
