ಕೇರಳ:ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ನೂರಾರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಹಲವರಿಗೆ ಗಾಯಗಳಾಗಿವೆ..ನೂರಾರು ಕುಟುಂಬಗಳು ಛಿದ್ರಗೊಂಡಿವೆ. ಈ ಮಧ್ಯೆ ಮಾತು ಬಾರದ ಮೂಖಪ್ರಾಣಿಗಳ ವೇದನೆ ಹೇಳತೀರದು. ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ದೃಶ್ಯಗಳು ಹೃದಯ ವಿದ್ರಾವಕವಾಗಿದೆ.
ವಯನಾಡಿನಲ್ಲಿ ಭೂಕುಸಿತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಜಿಲ್ಲೆಯ ಜನರ ವಿನಾಶಕಾರಿ ಪರಿಸ್ಥಿತಿಯನ್ನು ತೋರಿಸುತ್ತಿದೆ. ವಯನಾಡ್ ಭೂಕುಸಿತ ಪ್ರದೇಶದಿಂದ ಒಂದು ಹೃದಯಸ್ಪರ್ಶಿ ವೀಡಿಯೋ ಕೂಡ ಹೊರಹೊಮ್ಮಿದೆ, ಅಲ್ಲಿ ಭೂಕುಸಿತದ 6 ದಿನಗಳ ನಂತರ ನಾಯಿಯೊಂದು ತನ್ನ ಮಾಲೀಕರೊಂದಿಗೆ ಮತ್ತೆ ಸೇರುವುದನ್ನು ಕಾಣಬಹುದು.
Emotional Reunion !! After 6 Days Of Searching For His Owner. ❤️#WayanadLandslidepic.twitter.com/VC7d82yuEz
— St . Sinner. (@retheeshraj10)August 4, 2024

ವಯನಾಡ್ ದುರಂತದಿಂದಾಗಿ ಮಾನವರಗಿಂತ ಹೆಚ್ಚಾಗಿ ಮೂಖಪ್ರಾಣಿಗಳು ಕಷ್ಟಪಡುತ್ತಿವೆ. ಮನೆ, ಕುಟುಂಬದ ಜತೆ ಮಕ್ಕಳಂತೆ ಸಾಕಿದ ಸಾಕುಪ್ರಾಣಿಗಳನ್ನೂ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಾಯಿಯೊಂದರ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿದೆ.
ಭೂಕುಸಿತದಲ್ಲಿ ಕಳೆದುಹೋದ ನಾಯಿ ಆರು ದಿನಗಳ ನಂತರ ತನ್ನ ಮಾಲೀಕನನ್ನು ಪತ್ತೆ ಮಾಡಿದೆ. ನಾಯಿ ಮಾಲೀಕರ ತಲುಪಿದೆ. ತನ್ನ ಸಾಕು ನಾಯಿ ಕಾಣುತ್ತಿದ್ದಂತೆ ಮಹಿಳೆ ಮುದ್ದಿಸಿದ್ದಾಳೆ. ಸಾಕಷ್ಟು ಖುಷಿ ಪಟ್ಟಿದ್ದಾಳೆ. ಶ್ವಾನ ಕೂಡ ಮಹಿಳೆಯನ್ನು ಕಂಡು ಆಕೆಯನ್ನು ಅಪ್ಪಿಕೊಳ್ಳುವಂತೆ ಮಾಡಿದೆ. ಆರು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಹೆಂಡ್ತಿ, ಮಕ್ಕಳು ಸೇರಿದಂತೆ 16 ಮಂದಿಯನ್ನು ಕಳೆದುಕೊಂಡು ಒಂಟಿಯಾದ! ತನ್ನವರಿಗಾಗಿ ಹುಡುಕಾಡುತ್ತಿರುವ ದೃಶ್ಯ ಮನಕಲಕುತ್ತದೆ..

ನನ್ನ ಆಟೋದಲ್ಲಿ ಪ್ರಯಾಣಿಸಿ.. ನನಗೆ ಹಣ ಬೇಡ ವಯನಾಡು​ ಜನರಿಗೆ ಸಹಾಯ ಮಾಡಿ ಎಂದ ಮಹಿಳೆ

ಎದೆಯವರೆಗೂ ಮಣ್ಣು ಮುಚ್ಚಿತ್ತು, ರಕ್ಷಣೆಗೆ ಹಗ್ಗ ತರುವಷ್ಟರಲ್ಲಿ ಊರೇ ಇರಲಿಲ್ಲವೆಂದು ಕಣ್ಣೀರಿಟ್ಟ KSRTC ಬಸ್​ ಡ್ರೈವರ್!

ವಯನಾಡು ದುರಂತ; ಬೇರೆ ಊರಿಗೆ ಹೋಗಿ ಬರುವಷ್ಟರಲ್ಲಿ ಘಟನೆಯಲ್ಲಿ ಇಡೀ ಕುಟುಂಬವೇ ಸರ್ವನಾಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
