ಮುಂಬೈ:ವಾಸಿಸಲು ಸ್ಥಳವಿಲ್ಲದ ನಿರ್ಗತಿಕರು ರಸ್ತೆ ಬದಿಯಲ್ಲಿ, ಬಸ್​ ನಿಲ್ದಾಣ ಹಾಗೂ ಖಾಲಿ ಇರುವ ಪ್ರದೇಶಗಳಲ್ಲಿ ವಾಸವಾಗಿರುವುದನ್ನು ನಾವು ನೋಡಿದ್ದೇವೆ. ಆದ್ರೆ ರೈಲ್ವೆ ಹಳಿ ಮೇಲೆ ಬಿಡು ಬಿಟ್ಟಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಮಾಹಿಮ್ ಪ್ರದೇಶ ಸ್ಥಳೀಯರು ಅಕ್ರಮವಾಗಿ ರೈಲ್ವೆ ಹಳಿಯನ್ನು ಸುತ್ತುವರೆಸಿಕೊಂಡಿದ್ದಾರೆ. ರೈಲ್ವೆ ಹಳಿ ಮೇಲೆ ಜನರು ಅಡುಗೆ ಮಾಡುತ್ತಾ, ಬಟ್ಟೆ ಒಣಗಿಸಿದ್ದಾರೆ. ಇತ್ತ ಮಕ್ಕಳು ಓದುತ್ತಿರುವ ದೃಶ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವಸತಿರಹಿತ ಜನರು, ಭಿಕ್ಷಕರು ಅಲ್ಲಿಯೆ ವಾಸವಾಗಿರುವುದು ಕಂಡುಬಂದಿದೆ. ಆದರೆ ಈ ಟ್ರ್ಯಾಕ್​ನಲ್ಲಿ ರೈಲು ಸಂಚಾರ ಮಾಡುತ್ತಿದ್ಯಾ? ಇಲ್ಲವಾ? ಎನ್ನುವ ಮಾಹಿತಿ ಇಲ್ಲ.
📍 Mahim JunctionA new colony is setting up this will be home for thiefs, murderer, criminals, terrorist and what not kindly take action@MumbaiPolice@grpmumbai@mybmc@RailMinIndiapic.twitter.com/z9EDRSEtSL
— Aamchi Mumbai (आमची मुंबई ) (@_Aamchi_Mumbai)January 31, 2024

ಸಮಾಜಿಕ ಜಾಲತಾಣದಲ್ಲಿ ಹರಿದಾಡುವ ದೃಶ್ಯವನ್ನು ಕಂಡು ರೈಲ್ವೆ ಸಂರಕ್ಷಣೆ ಪಡೆ ಅಲ್ಲಿ ವಾಸಿಸುವ ನಿರ್ಗತಿಕರನ್ನು ತೆರುವುಗೊಳಿಸಿದ್ದರು. ಆದರೆ ಮತ್ತೆ ಭಾನುವಾರ ಮಕ್ಕಳು ಓಡಾಡುವ ಹಾಗೂ ಜನರು ಮಲಗಿರುವ ಬಟ್ಟೆ ಒಣಗಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಇದು ಇಲ್ಲಿ ಮುಗಿಯಲಾರದ ಸಮಸ್ಯೆಯಾಗಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಟ್ರೈನ್​​ ಬಂದ್ರೆ ಏನು ಮಾಡುತ್ತಾರೆ? ಈ ಟ್ರ್ಯಾಕ್​ ಮೇಲೆ ರೈಲು ಬರಲ್ವಾ? ಅಧಿಕಾರಿಗಳನ್ನ ಅಪಹಾಸ್ಯ ಮಾಡಿದ್ದಾರೆ ರೈಲ್ವೆ ಹಳಿಯ ಚಟುವಟಿಕೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗನ್ನು ಟೀಕಿಸಿದ್ದಾರೆ.
ರೈಲ್ವೆ ಸಂರಕ್ಷಣ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ರೈಲ್ವೆ ಹಳಿಯಲ್ಲಿ ಅನಧಿಕೃತ ಚಟುವಟಿಕೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಅಧಿಕಾರದಿಂದ ತಗೆಯಲಾಗಿದೆ. ರೈಲ್ವೆ ಆವರಣದ ಸುರಕ್ಷತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ರೈಲ್ವೆ ಅಧಿಕಾರಿಗಳ ಸಮಸ್ಯೆಯನ್ನು ತಿಳಿಸಿದ್ದಾರೆ. ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಿಸ್ ಸ್ಟ್ರೀಟ್; ಈ ಬೀದಿಯಲ್ಲಿ ಸಿಗುತ್ತೆ ಸಿಹಿ ಮುತ್ತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 19 =
Remember me
