ನವದೆಹಲಿ:ಈ ಭೂಮಿಯ ಮೇಲೆ ನಮಗೆ ಗೊತ್ತಿಲ್ಲದಂತಹ ಅನೇಕ ವಿಚಿತ್ರ ಮತ್ತು ವಿಶಿಷ್ಟ ಜೀವಿಗಳು ಅಡಗಿವೆ. ಆಗೊಮ್ಮೆ ಈಗೊಮ್ಮೆ ಕೆಲವು ಹೊಸ ಜಾತಿಯ ಪ್ರಾಣಿಗಳು ಕಣ್ಣಿಗೆ ಬೀಳುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡುತ್ತವೆ. ಇಂತಹ ವಿಚಿತ್ರ ಜೀವಿಗಳ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚಿಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮೀನುಗಾರನಿಗೆ ವಿಚಿತ್ರ ಅನುಭವವಾಗಿದ್ದು, ನೀರಿನಿಂದ ದೋಣಿಯ ಮೇಲೇರಿದ ವಿಚಿತ್ರ ಪ್ರಾಣಿಯನ್ನು ನೋಡಿದ ಮೀನುಗಾರ ಒಂದು ಕ್ಷಣ ಆಶ್ಚರ್ಯಚಕಿತರಾದರು. ಅಷ್ಟಕ್ಕೂ ಆ ಪ್ರಾಣಿ ಯಾವುದು ಎಂಬುದನ್ನು ನಾವೀಗ ತಿಳಿಯೋಣ.
ವಿಡಿಯೋದಲ್ಲಿ ಏನಿದೆ?ಮೀನುಗಾರ ದೋಣಿಯಲ್ಲಿ ಪ್ರಯಾಣಿಸುತ್ತಿರುತ್ತಾನೆ. ಈ ವೇಳೆ ನೀರಿನಲ್ಲಿ ಈಜುತ್ತಿರುವ ಪ್ರಾಣಿಯೊಂದು ದೋಣಿಯ ಹತ್ತಿರ ಬರುವುದನ್ನು ನೋಡಿ ನಿಲ್ಲಿಸುತ್ತಾನೆ. ದೋಣಿಯ ಹತ್ತಿರ ಬರುವ ಜೀವಿ ಅದರ ಮೇಲೆ ಏರುತ್ತದೆ. ಒಂದು ಕ್ಷಣ ಮೀನುಗಾರನನ್ನು ದಿಟ್ಟಿಸಿ ನೋಡುತ್ತದೆ. ಬಳಿಕ ಅಲ್ಲಿಂದ ತೆರಳಿ ದೋಣಿಯ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಿದೆ. ಅಂತಿಮವಾಗಿ ದೋಣಿ ದಡಕ್ಕೆ ಬಂದಾಗ ಆ ಜೀವಿ ದೋಣಿಯಿಂದ ಇಳಿದು ಕಾಡಿನೊಳಗೆ ಹೋಗುತ್ತದೆ.
While the fisherman was walking on the lake, he noticed something floating in the water …
What kind of animal is it?pic.twitter.com/qNCkPCqPmS
— Figen (@TheFigen_)April 29, 2024

ಯಾವುದು ಆ ಜೀವಿ?ದೋಣಿಯೊಳಗೆ ಏರಿದ ಜೀವಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಸ್ಪೈಡರ್ ಮಂಕಿ ಎಂದು ತಿಳಿದುಬಂದಿದೆ. ಈ ಸ್ಪೈಡರ್ ಕೋತಿಗಳು ಮುಖ್ಯವಾಗಿ ಮೆಕ್ಸಿಕೋ, ಬ್ರೆಜಿಲ್ ಹಾಗೂ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಕಂಡುಬರುತ್ತವೆ. ಉದ್ದವಾದ ಬಾಲ ಮತ್ತು ಕೈಕಾಲುಗಳಿಂದಾಗಿ ಈ ಮಂಗಗಳು ವಿಚಿತ್ರವಾಗಿ ಕಾಣುತ್ತವೆ. ಈ ಮಂಗಗಳು ಹಣ್ಣುಗಳನ್ನು ತಿಂದು ಬದುಕುತ್ತವೆ. ಮುಖ್ಯವಾಗಿ ಆರ್ದ್ರ ಕಾಡುಗಳಲ್ಲಿ ವಾಸಿಸುತ್ತವೆ.
ಸ್ಪೈಡರ್​ ಕೋತಿಗಳಲ್ಲಿ ಹಲವು ಪ್ರಭೇದಗಳಿವೆ. ಆದರೆ, ಅವು ಪ್ರಸ್ತುತ ಅಳಿವಿನಂಚಿನಲ್ಲಿವೆ. ಇದೀಗ ಸ್ಪೈಡರ್​ ಕೋತಿಯನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದು, ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.(ಏಜೆನ್ಸೀಸ್​)
ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

ಮದುವೆಯಾಗದೇ ಮಗು ಮಾಡಿಕೊಳ್ಳಲು ಖ್ಯಾತ ನಟಿ ಮೆಹ್ರೀನ್ ಫಿರ್ಜಾದಾ ಏನ್​ ಮಾಡಿದ್ರು ನೋಡಿ!

ಐಪಿಎಲ್​ನಲ್ಲಿ ಅಟ್ಟರ್​ ಫ್ಲಾಪ್​ ಆದ್ರೂ ಟಿ20 ವಿಶ್ವಕಪ್​ಗೆ​ ಉಪನಾಯಕ! ಹಾರ್ದಿಕ್​ ಆಯ್ಕೆ ಹಿಂದಿದೆ ಈ ಕಾರಣ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:10 + twenty =
Remember me
