ಮುಂಬೈ :ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಕ್ರಿಕೆಟಿಗ ವಿರಾಟ್ ಕೋಹ್ಲಿ ಅವರ ಪುಟ್ಟ ಮಗಳು ವಮಿಕಾಗೆ 6 ತಿಂಗಳು ಪೂರೈಸಿದೆ. ಕಳೆದ ಜನವರಿ 11 ರಂದು ಜನಿಸಿದ ಬೇಬಿ ವಮಿಕಾಳ 6 ನೇ ತಿಂಗಳ ಹುಟ್ಟಿದಹಬ್ಬವನ್ನು ವಿರುಷ್ಕಾ ದಂಪತಿಯು, ಇಂಗ್ಲೆಂಡಿನ ಪಾರ್ಕೊಂದಕ್ಕೆ ಪಿಕ್​ನಿಕ್​ ಕರೆದುಕೊಂಡು ಹೋಗಿ ಆಚರಿಸಿದ್ದಾರೆ.
ಮಗುವಿನೊಂದಿಗೆ ಅನುಷ್ಕಾ ಮತ್ತು ವಿರಾಟ್​ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಝಲಕ್ ನೀಡುವ ಚಿತ್ರಗಳನ್ನು ಅನುಷ್ಕಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ಅವಳ ಒಂದು ನಗೆ ನಮ್ಮ ಸುತ್ತಲ ಜಗತ್ತನ್ನು ಬದಲಾಯಿಸಬಲ್ಲದು!” ಎಂದು ಟಿಪ್ಪಣಿ ಬರೆದಿರುವ ಅನುಷ್ಕಾ, “ಹ್ಯಾಪಿ 6 ಮಂತ್ಸ್​ ಟು ಅಸ್ ತ್ರೀ!” ಎಂದಿದ್ದಾರೆ.


A post shared by AnushkaSharma1588 (@anushkasharma)
ಜೂನ್​ನಲ್ಲಿ ವರ್ಲ್ಡ್​ ಚಾಂಪಿಯನ್​ಶಿಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಇಂಗ್ಲೆಂಡಿಗೆ ಹೋಗಬೇಕಾದರೆ, ಪತ್ನಿ ಮತ್ತು ಪುತ್ರಿಯನ್ನೂ ಕೊಹ್ಲಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ, ಸಾಮಾಜಿಕ ಮಾಧ್ಯಮದಲ್ಲಿ ಮಗುವಿನ ಮುಖವನ್ನು ಜಾಹೀರುಗೊಳಿಸದಿರುವ ನಿರ್ಧಾರವನ್ನು ವಿರುಷ್ಕಾ ದಂಪತಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಜನಸಂಖ್ಯೆ ನಿಯಂತ್ರಿಸಲು ಸಜ್ಜಾಯ್ತು ಈ ರಾಜ್ಯ! 2026 ರೊಳಗೆ ಜನನ ದರ ಇಳಿಸುವ ಗುರಿ

ನಟ, ಮಿಮಿಕ್ರಿ ಕಲಾವಿದ ಮಾಧವ್ ಮೋಘೆ ಇನ್ನಿಲ್ಲ

ನಟ ರಾಮ್ ಕಪೂರ್ ಹೊಸ ಕಾರು – ಪಾರ್ಶೆ 911 ಕಾರ್ರೆರಾ ಎಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − ten =
Remember me
