ಬೆಂಗಳೂರು:ಕ್ರಿಕೆಟ್​ ಎನ್ನುವುದು ಇಂದಿನ ಯುವ ಪೀಳಿಗೆಯಲ್ಲಿ ಸಖತ್​ ಕ್ರೇಜ್​​ ಹುಟ್ಟಿಸಿರುವ ಆಟವಾಗಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಕ್ರಿಕೆಟ್​​ ಗಮನ ಸೆಳೆಯುತ್ತದೆ. ಕ್ರಿಕೆಟ್​ ಆಟಗಾರರ ಆಟದ ವೈಖರಿ ಮಾತ್ರವಲ್ಲ ಅವರ ಪ್ರತಿಯೊಂದು ಹೆಜ್ಜೆಯನ್ನು ಫ್ಯಾನ್ಸ್​​ ಫಾಲೋ ಮಾಡುತ್ತಿರುತ್ತಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವಿಶ್ವಕಪ್​ ಪಂದ್ಯದಲ್ಲಿ ಆತಿಥೇಯ ಭಾರತ, ಎದುರಾಳಿ ನೆದರ್ಲೆಂಡ್ಸ್​ ವಿರುದ್ಧ 160 ರನ್​ಗಳ ಭಾರೀ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಜೇಯ ಓಟವನ್ನು ಮುಂದುವರಿಸಿದೆ. ನಿನ್ನೆ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸಂಘಟಿತ ಪ್ರದರ್ಶನವನ್ನು ನೀಡಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅರ್ಧಶತಕ ಬಾರಿಸಿದರು. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಶತಕ ಬಾರಿಸಿದರು. ಈ ಪಂದ್ಯ ಸ್ಮರಣೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.
ನಿನ್ನೆ ಪಂದ್ಯ ಪ್ರಾರಂಭವಾಗುವ ಮೊದಲು ಭಾರತ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪ್ರ್ಯಾಕ್ಟಿಸ್​​ ಮಾಡಿದ್ದಾರೆ. ಈ ವೇಳೆ ವಿರಾಟ್​​ ಕೊಹ್ಲಿ ಅವರಿಗೆ ಶುಭನಮ್​ ಗಿಲ್​ ಅವರು ಚಮಕ್​​ ಕೊಟ್ಟಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.
This Duo Is 🤣👌🏻pic.twitter.com/IGizc7ufcs
— RVCJ Media (@RVCJ_FB)November 13, 2023

ವಿಡಿಯೋದಲ್ಲಿ ಏನಿದೆ?:ಭಾರತ ತಂಡದ ಆಟಗಾರರು ಪ್ರಾಕ್ಟಿಸ್​​ ಮಾಡುತ್ತಿರುತ್ತಾರೆ. ಈ ವೇಳೆ ವಿರಾಟ್​​ ಬ್ಯಾಟ್​​ ಹಿಡಿದುಕೊಂಡು ಮುಂದೆ ಸಾಗುತ್ತಿದ್ದರು. ಈ ವೇಳೆ ಶುಭಮನ್​​ ಗಿಲ್ ಕಾಲನ್ನು ಮೇಲಕ್ಕೆ ಎತ್ತಿ ಎಕ್ಸಸೈಜ್​​ ಮಾಡುತ್ತಾ ಹಿಂದೆ ಇಂದ ಬರುತ್ತಾರೆ. ಈ ವೇಳೆ ವಿರಾಟ್​​ ಒಂದು ಕ್ಷಣ ಹೆದರಿ ನಿಲ್ಲುತ್ತಾರೆ. ಈ ವೇಳೆ ತಮಾಷೆಯಾಗಿ ವಿರಾಟ್, ಶುಭಮನ್​​ ಗಿಲ್ ಕಡೆ ​​ ಬ್ಯಾಟ್​​ ಬಿಸಿ ಹೊಡೆಯುವಂತೆ ಮಾಡುತ್ತಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಸೋ…ಫನ್ನಿ…. ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಈ ವಿಡಿಯೋ ವಿರಾಟ್​​ ಅಭಿಮಾನಿಗಳಿಗೆ ಸಖತ್​ ಇಷ್ಟವಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
