ಮುಂಬೈ:ವಿರಾಟ್​ ಅನುಷ್ಕಾ ದಂಪತಿಗೆ ಸೋಮವಾರದಂದು ಹೆಣ್ಣು ಮಗುವಿನ ಜನನವಾಗಿದೆ. ನೆಚ್ಚಿನ ದಂಪತಿಯ ಮನೆಗೆ ಅದೃಷ್ಟ ಲಕ್ಷ್ಮಿ ಬಂದಿದ್ದಾಳೆಂದು ಅಭಿಮಾನಿಗಳೂ ಸಂತಸದಲ್ಲಿ ಮುಳುಗಿದ್ದಾರೆ. ಇದೀಗ ಅದೇ ಅಭಿಮಾನಿಗಳು ವಿರುಷ್ಕಾ ದಂಪತಿಯ ಮಗುವಿಗೆ ನಾಮಕರಣ ಮಾಡಲೂ ಮುಂದಾಗಿದ್ದಾರೆ. ಟ್ವಿಟ್ಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ ಮೂಲಕ ಹೆಸರಿನ ಸಲಹೆಯನ್ನು ದಂಪತಿಗೆ ನೀಡುತ್ತಿದ್ದಾರೆ.
ಇದನ್ನೂ ಓದಿ:ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಅರ್ಧದಲ್ಲೇ ಬಿಟ್ಟು ವಿರಾಟ್​ ಭಾರತಕ್ಕೆ ಬಂದಿದ್ದರು. ಅದೇ ಕಾರಣದಿಂದಾಗಿ ಮಗಳಿಗೆ ಸಿಡ್ನಿ ಎನ್ನುವ ಹೆಸರನ್ನೇ ಇಡಿ ಎಂದು ನೂರಾರು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ವಿರಾಟ್​+ಅನುಷ್ಕಾ ಸೇರಿಸಿ ವಿರುಷ್ಕಾ ಎಂದು ಇಟ್ಟರೂ ಚೆನ್ನಾಗಿರುತ್ತದೆ ಎಂದು ಅನೇಕರು ತಿಳಿಸಿದ್ದಾರೆ. ಎರಷ್ಕಾ ಎನ್ನುವ ಹೆಸರನ್ನು ಇಟ್ಟರೆ ಚೆನ್ನಾಗಿರುತ್ತದೆ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಅನುವಿ, ಅನುಮ, ಅಶ್ವಿನಿ ಎನ್ನುವ ಹೆಸರಿನೊಂದಿಗೇ ನಾಮಕರಣ ಮಾಡಿ ಎಂದು ಅನೇಕ ಅಭಿಮಾನಿಗಳು ದಂಪತಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನುದಂಪತಿಯ ಮಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿರುವ ಕೆಲವು ಅಭಿಮಾನಿಗಳು, “ದಯವಿಟ್ಟು ಅ ಅಕ್ಷರದಿಂದ ನಿಮ್ಮ ಮಗಳಿಗೆ ಹೆಸರಿಡಬೇಡಿ. ಮುಂದೆ ಕಾಲೇಜಿನಲ್ಲಿ ವೈವಾಗಳಿಗೆ ನಿಮ್ಮ ಮಗಳೇ ಮೊದಲು ಹೋಗಬೇಕಾಗುತ್ತದೆ” ಎಂದೂ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಸ್ವಾಮಿ ವಿವೇಕಾನಂದರು ಹೇಳಿದಂತೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ: ಪ್ರಧಾನಿ ಮೋದಿ
ವಿರಾಟ್​ ಅನುಷ್ಕಾ ದಂಪತಿ ತಂದೆ ತಾಯಿ ಆಗಿರುವುದಕ್ಕೆ ವಿಶ್ವದ ಕ್ರಿಕೆಟ್​ ಪ್ರಿಯರೆಲ್ಲರೂ ಶುಭ ಹಾರೈಸಿದ್ದಾರೆ. ಅದರ ಜತೆ ಭಾರತ ಚಿತ್ರರಂಗದ ಅಭಿಮಾನಿಗಳೂ ಕೂಡ ತಮ್ಮ ಮನೆಯಲ್ಲಿಯೇ ಮಗುವಿನ ಜನನವಾದಷ್ಟು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಸೆಲಬ್ರಿಟಿ ದಂಪತಿ ಮಗುವಿಗೆ ಯಾವ ಹೆಸರಿಡುತ್ತಾರೆ ಎನ್ನುವುದನ್ನು ಮಾತ್ರ ಕಾದು ನೋಡಬೇಕು. (ಏಜೆನ್ಸೀಸ್​)
ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − 5 =
Remember me
