ಮುಂಬೈ:ಸ್ಟಾರ್ ಜೋಡಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಬೆಂಗಳೂರು ಮೂಲದ ವಿಮಾ ಸ್ಟಾರ್ಟ್ಅಪ್ ಗೋ ಡಿಜಿಟ್‌ನ ಮುಂಬರುವ ಷೇರು ಮಾರುಕಟ್ಟೆ ಪಟ್ಟಿಯೊಂದಿಗೆ ಭಾರೀ ಲಾಭವನ್ನು ಗಳಿಸಲು ಸಿದ್ಧರಾಗಿದ್ದಾರೆ.
ಅವರ ರೂ. 2.5 ಕೋಟಿ ಹೂಡಿಕೆಗೆ 263% ನಷ್ಟು ಲಾಭವನ್ನು ದೊರೆಯಬಹುದು. ಗೋ ಡಿಜಿಟ್​ನ ಐಪಿಒ ಬಿಡುಗಡೆ ಮಾಡಲಾಗುತ್ತಿದ್ದು, ಇದರಲ್ಲಿ ಷೇರಿನ ಬೆಲೆಯನ್ನು ರೂ. 272 ಗೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಇವರಿಬ್ಬರ ಹೂಡಿಕೆಯಾದ 2.5 ಕೋಟಿ ರೂಪಾಯಿಯು 9.06 ಕೋಟಿ ರೂಪಾಯಿಗೆ ಏರುತ್ತದೆ.
ಜನವರಿ 2020 ರಲ್ಲಿ, ಕೊಹ್ಲಿಯು ಖಾಸಗಿ ಪ್ಲೇಸ್‌ಮೆಂಟ್ ಮೂಲಕ 266,667 ಷೇರುಗಳನ್ನು ರೂ. 75 ಯುನಿಟ್ ಬೆಲೆಯಲ್ಲಿ ಖರೀದಿಸಿದ್ದಾರೆ. ಇದರ ಪರಿಣಾಮವಾಗಿ ಒಟ್ಟು ರೂ. 2 ಕೋಟಿ ಹೂಡಿಕೆಯಾಗಿದೆ.
ಇದೇ ಸಮಯದಲ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೂ. 50 ಲಕ್ಷ ಹೂಡಿಕೆ ಮಾಡಿದ್ದರು. ಈ ಕಂಪನಿಯ 66,667 ಷೇರುಗಳನ್ನು ಪ್ರತಿ ಷೇರಿಗೆ ರೂ. 75 ರಂತೆ ಖರೀದಿಸಿದ್ದರು.
ಕೊಹ್ಲಿ ರೂ. 5.25 ಕೋಟಿ ಲಾಭ ಗಳಿಸಿದರೆ, ಅನುಷ್ಕಾ ಶರ್ಮಾ ಅವರ ಲಾಭ ರೂ. 1.31 ಕೋಟಿ ಆಗುತ್ತದೆ. ದಂಪತಿಗಳಿಬ್ಬರ ಒಟ್ಟು ಲಾಭವು ರೂ. 6.56 ಕೋಟಿಗಳಾಗುವ ಸಾಧ್ಯತೆಯಿದೆ.
ಮುಂಬರುವ ರೂ. 2,615 ಕೋಟಿ ಮೊತ್ತದ ಐಪಿಒ ಚಂದಾದಾರಿಕೆಗಾಗಿ ಮೇ 15 ರಂದು ಆರಂಭವಾಗಿ, ಮೇ 17 ರಂದು ಮುಕ್ತಾಯಗೊಳ್ಳಲಿದೆ. ಈ ಐಪಿಒದಲ್ಲಿ ಪ್ರತಿ ಷೇರಿಗೆ ರೂ 258 ರಿಂದ ರೂ. 272 ರ ಬೆಲೆ ನಿಗದಿ ಮಾಡಲಾಗಿದೆ.
ಗೋ ಡಿಜಿಟ್‌ನ ಷೇರುಗಳು ಈಗಾಗಲೇ ಗ್ರೇ ಮಾರ್ಕೆಟ್​ನಲ್ಲಿ ರೂ 50 ರ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಅಂದರೆ ಗೋ ಡಿಜಿಟ್‌ನ ಷೇರುಗಳ ಬೆಲೆ ರೂ. 322 ರಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ. ಇದು ಐಪಿಒ ಬೆಲೆಗಿಂತ ಶೇಕಡಾ 18.39 ರಷ್ಟು ಹೆಚ್ಚಾಗಿದೆ.

3 ರೂಪಾಯಿಯ ಪೆನ್ನಿ ಸ್ಟಾಕ್ ನೀಡಿತು​ 5 ವರ್ಷಗಳಲ್ಲಿ 10000% ಲಾಭ: ಕಳೆದ 7 ದಿನಗಳಿಂದ ಈಗ ಅಪ್ಪರ್​ ಸರ್ಕ್ಯೂಟ್​ ಹಿಟ್​

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್​ಗೆ ಮತ್ತೊಂದು ಆಘಾತ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪ ರೂಪಿಸಲು ನ್ಯಾಯಾಲಯ ಆದೇಶ

ಹೂಡಿಕೆದಾರರನ್ನು ಶ್ರೀಮಂತಗೊಳಿಸುತ್ತಿವೆ ಎನರ್ಜಿ ಷೇರುಗಳು: ನಂಬರ್​ ಒನ್ ಕಂಪನಿಯ ಸ್ಟಾಕ್​ನಲ್ಲಿ 1 ಲಕ್ಷವಾಯ್ತು 16 ಕೋಟಿ ರೂಪಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 3 =
Remember me
