ಮುಂಬೈ:ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಯೊಂದಿಗೆ ಜಿಮ್‌ನಲ್ಲಿ ಪಂಜಾಬಿ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರು ಜಿಮ್‌ನಲ್ಲಿ ಪಂಜಾಬಿ ಗಾಯಕ ಶುಭ್ ಅವರ ‘ಎಲಿವೇಟೆಡ್’ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ನಟಿ ಇನ್​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. “ಡ್ಯಾನ್ಸ್ ಪೆ ಚಾನ್ಸ್” ಎಂದು ಅನುಷ್ಕಾ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ವಿಶ್ವದ ಅತ್ಯುತ್ತಮ ಸೆಲೆಬ್ರಿಟಿ ಜೋಡಿ ಎಂದು ಅಭಿಮಾನಿಗಳು ಕಾಮೆಂಟ್​​ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?:ಇದರಲ್ಲಿ ದಂಪತಿ ಡ್ಯಾನ್ಸ್ ಚಾಲೆಂಜ್ ಮಾಡುವುದನ್ನು ಕಾಣಬಹುದು. ಅದೇ ರೀತಿ, ಯಾರು ಮೊದಲು ಕಾಲು ಮೊದಲು ಬಿಡುತ್ತಾರೋ ಅವರು ಸೋಲುತ್ತಾರೆ. ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಾ ವಿರಾಟ್​ ಅವರು ಮೊದಲು ಕಾಲು ಕೇಳಗೆ ಬಿಡುತ್ತಾರೆ. ನಂತರ ಇಬ್ಬರು ನಕ್ಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಸಾಮೂಹಿಕ ವಿವಾಹ; ಯುವತಿಯರಿಗೆ ಕನ್ಯತ್ವ ಪರೀಕ್ಷೆ …ಮುಂದೆನಾಯ್ತು..?ಭಾನುವಾರ, ಐಪಿಎಲ್ 2023 ರಲ್ಲಿ ರಾಜಸ್ತಾನ ರಾಯಲ್ಸ್​​ ವಿರುದ್ಧ ಆರ್‌ಸಿಬಿ ಜಯ ಸಾಧಿಸಿತು. ಸತತ ಎರಡನೇ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿದ್ದರು. ಅನುಷ್ಕಾ ಅವರು ಕ್ರಿಕೆಟ್​​ ಆಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದಾರೆ. ಪಂದ್ಯದ ವೇಳೆ ವಿರಾಟ್ ತಮ್ಮ ಪತ್ನಿಗೆ ಫ್ಲೈಯಿಂಗ್ ಕಿಸ್‌ ನೀಡಿದ್ದು ಆಕೆಯನ್ನು ನಾಚುವಂತೆ ಮಾಡಿದೆ. ಅಂತರ್ಜಾಲದಲ್ಲಿ ಈ ವಿಡಿಯೋ ಕೂಡಾ ವೈರಲ್ ಆಗಿದೆ.
A post shared by AnushkaSharma1588 (@anushkasharma)
ಬೆಂಗಳೂರಿನಲ್ಲಿ ರಣ ಬಿಸಿಲು; ತಾಪಕ್ಕೆ ಕರಗಿದ ʻಟಾಟಾ ಹ್ಯಾರಿಯರ್‌ʼಕಾರ್​ನ ಮುಂಭಾಗದ ಬಂಪರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − one =
Remember me
