ನವದೆಹಲಿ:ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್‌-8 ಪಂದ್ಯದಲ್ಲಿ ಭಾರತ 50 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್​ ಸನಿಹಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಗಲ್ಲಿ ಕ್ರಿಕೆಟ್​ನಲ್ಲಿ ಚೆಂಡನ್ನು ಹುಡುಕಿದಂತೆ ಸ್ಟೇಡಿಯಂನ ಸ್ಟ್ಯಾಂಡ್​ವೊಂದರ ಒಳಗಡೆ ನುಗ್ಗಿ ಚೆಂಡು ಹುಡುಕುತ್ತಿರುವ ವಿಡಿಯೊವೊಂದು ವೈರಲ್​ ಆಗಿದೆ.
ಶನಿವಾರ (ಜೂನ್ 22) ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ 196 ರನ್ ಗಳ ಗುರಿ ನೀಡಲಾಯಿತು. ಆದರೆ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ವಿರುದ್ಧ ಭಾರತ 50 ರನ್‌ಗಳ ಜಯದೊಂದಿಗೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾರತದ ನಿವ್ವಳ ರನ್ ರೇಟ್ ಕೂಡ 4 ಅಂಕಗಳೊಂದಿಗೆ ಉತ್ತಮವಾಗಿದೆ. ಇದೇ ವೇಳೆ ಈ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ.
ಕ್ರಿಕೆಟ್ ಲೋಕದ ಲೆಜೆಂಡರಿ ಕ್ರಿಕೆಟಿಗ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಬಾಲ್ ಗಾಗಿ ಗ್ಯಾಲರಿಯಲ್ಲಿದ್ದ ಸ್ಟ್ಯಾಂಡ್ ಗೆ ತೆರಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Virat Kohli 🐐 finding the ball.
– Gully cricket vibes. 😂❤️pic.twitter.com/gPNi3bTsUr
— Sɪᴋᴀɴᴅᴀʀ 🇮🇳🚩 (@SoldierAnish)June 22, 2024

ನಾಯಕ ರೋಹಿತ್ ಶರ್ಮಾ 18ನೇ ಓವರ್ ಅನ್ನು ಸ್ಪಿನ್ನರ್ ಅಕ್ಷರ್ ಪಟೇಲ್ ಗೆ ಒಪ್ಪಿಸಿದರು. ಈ ಓವರ್‌ನ ಕೊನೆಯ ಚೆಂಡನ್ನು ರಿಶಾದ್‌ ಹೊಸೇನ್‌ ಭಾರಿ ಸಿಕ್ಸರ್‌ ಬಾರಿಸಿದರು. ಈ ಆರು ನೆಲದ ಮೇಲೆ ಹಾಕಲಾದ ಸ್ಟ್ಯಾಂಡ್‌ಗಳ ಕೆಳಗೆ ಹೋಯಿತು. ಆದರೆ ಚೆಂಡನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಇದರೊಂದಿಗೆ ಕಿಂಗ್ ಕೊಹ್ಲಿ ತಮ್ಮ ಸ್ಟಾರ್ ಪಟ್ಟವನ್ನು ಬದಿಗಿಟ್ಟು ಟೇಬಲ್ ಕೆಳಗೆ ನುಗ್ಗಿ ಚೆಂಡನ್ನು ತೆಗೆದುಕೋಂಡು ಬರುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೆಟ್ಟಿಗರು ಈ ವಿಡಿಯೋವನ್ನು ಶೇರ್ ಮಾಡಿ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರೆ ಇದನ್ನು ನೋಡುತ್ತಿದ್ದರೆ ನನಗೆ ಗಲ್ಲಿ ಕ್ರಿಕೆಟ್ ನೆನಪಾಗುತ್ತದೆ ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
