ಮುಂಬೈ:ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ, ಬ್ಯಾಟ್ಸ್​ಮನ್​​ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್​ ಹೊಂದಿದ್ದು, ಅವರು ಹಾಕುವ ಪೋಸ್ಟ್​ಗಳಿಂದ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಹಣ ಗಳಿಸುತ್ತಿದ್ದಾರೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ವೈರಲ್​ ಆಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಕುರಿತು ವಿರಾಟ್​ ಕೊಹ್ಲಿ ಸ್ಪಷ್ಟನೆ ನೀಡಿದ್ದು, ಇದು ಶುದ್ದ ಸುಳ್ಳು ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
While I am grateful and indebted to all that I’ve received in life, the news that has been making rounds about my social media earnings is not true. 🙏
ಇದನ್ನೂ ಓದಿ:ತನಿಖೆಯಾಗದೆ ಗುತ್ತಿಗೆದಾರರ ಬಾಕಿ ಮೊತ್ತ್ತ ಪಾವತಿಸಲಾಗದು: ಸಿಎಂ ಸಿದ್ದರಾಮಯ್ಯ
ಈ ಕುರಿತು ಟ್ವೀಟ್​ ಮಾಡಿರುವ ಕೊಹ್ಲಿ ಈವರೆಗೂ ನಾನು ಜೀವನದಲ್ಲಿ ಸ್ವೀಕರಿಸಿರುವ ಪ್ರತಿಯೊಂದಕ್ಕೂ ಕೃತಜ್ಞ ಮತ್ತು ಋಣಿಯಾಗಿದ್ದೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಹಣ ಗಳಿಸುತ್ತಿದ್ದೇನೆ ಎಂಬ ವಿಚಾರ ಸುಳ್ಳು ಎಂದು ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್​ ಕೊಹ್ಲಿ ಹಾಕುವ ಒಂದು ಪೋಸ್ಟ್​ಗೆ 9-15 ಕೋಟಿ ರೂಪಾಯಿ ಹಣ ಗಳಿಸುತ್ತಾರೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ವೈರಲ್​ ಆಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯೊಂದನ್ನೂ ಸಹ ಹುಟ್ಟು ಹಾಕಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − two =
Remember me
