ನವದೆಹಲಿ:ಅಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್​ ಪಂದ್ಯದಲ್ಲಿ 122 ರನ್​ ಗಳಿಸುವ ಮೂಲಕ ಮೂರು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಶತಕ ದಾಖಲಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ವಿರಾಟ್ ಕೊಹ್ಲಿ ಟಿ-20 ರ‍್ಯಾಂಕಿಂಗ್​ನಲ್ಲಿ 599 ಅಂಕಗಳೊಂದಿಗೆ 29 ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟಿಂದ ಯಾವುದೇ ಶತಕ ದಾಖಲಾಗಿರಲಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಿದ್ದರು. ಇದಕ್ಕೆ ಉತ್ತರವಾಗಿ 33 ವರ್ಷದ ಕೊಹ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್​ ಸರಣಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕದ ಸಹಾಯದಿಂದ 276 ರನ್ ಗಳಿಸಿದ್ದರು. ಇದರೊಂದಿಗೆ ಎರಡನೇ ಅತ್ಯಧಿಕ ರನ್​​ ಸ್ಕೋರ್ ದಾಖಲಿಸಿದ್ದರು.
ವಿರಾಟ್​​ ಕೊಹ್ಲಿ ಇದುವರೆಗೆ 104 ಟಿ-20 ಪಂದ್ಯಗಳನ್ನು ಆಡಿದ್ದು, 51.94 ಸರಾಸರಿಯಲ್ಲಿ 3584 ರನ್ ದಾಖಲಿಸಿದ್ದಾರೆ. ಇತ್ತೀಚೆಗೆ ಅಪ್ಘಾನಿಸ್ತಾನ ವಿರುದ್ಧ 122 ರನ್ ಸಿಡಿಸುವ ಮೂಲಕ ಟಿ-20ಯಲ್ಲಿ ಮೊದಲ ಶತಕ ಪೂರೈಸಿದ್ದಾರೆ.(ಏಜೆನ್ಸೀಸ್)
Big rewards for star performers from the#AsiaCup2022in the latest update of the@MRFWorldwideICC Men's T20I Player Rankings 📈Details ⬇️https://t.co/B8UAn4Otze— ICC (@ICC)September 14, 2022
Big rewards for star performers from the#AsiaCup2022in the latest update of the@MRFWorldwideICC Men's T20I Player Rankings 📈Details ⬇️https://t.co/B8UAn4Otze
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
