ಬೆಂಗಳೂರು:ತನ್ನ ನೆಚ್ಚಿನ ನಾಯಿ ಬುನ್ರೋ ಸತ್ತಿದ್ದಕ್ಕೆ ಕಂಬನಿ ಮಿಡಿದಿರುವ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಯ್ಲಿ, ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. ಬುನ್ರೋ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಅವರು, ದೇವರು ನಿನ್ನ ಆತ್ಮಕ್ಕೆ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.
“ನನ್ನೊಂದಿಗೆ ನೀನು 11 ವರ್ಷ ಕಾಲ ಇದ್ದೆ. ಆದರೀಗ ನಮ್ಮಿಂದ ದೂರವಾಗಿ ಬಾರದ ಲೋಕಕ್ಕೆ ಹೋಗಿದ್ದೀಯಾ. ಆದರೆ, ನಿನ್ನೊಂದಿಗೆ ಕಳೆದ ಅದ್ಭುತ ಕ್ಷಣಗಳು, ನೆನಪುಗಳು ಬದುಕಿನ ಕೊನೆವರೆಗೂ ನನ್ನ ಜತೆಯಲ್ಲೇ ಉಳಿಯಲಿವೆ. ದೇವರು ನಿನ್ನ ಆತ್ಮಕೆ ಶಾಂತಿ ನೀಡಲಿ. ರೆಸ್ಟ್ ಇನ್ ಪೀಸ್, ಬುನ್ರೋ (RIP)” ಎಂದು ಅಕ್ಷರ ಮೂಲಕ ಕೊಹ್ಲಿ ತನ್ನ ಗೆಳೆಯನಿಗೆ ವಿದಾಯ ಹೇಳಿದ್ದಾರೆ.
ಇದನ್ನೂ ಓದಿರಿಕುತುಬ್​ ಮಿನಾರ್​ ಗೋಡೆಗೆ ಕಾರು ಡಿಕ್ಕಿ, ಮುಂದೇನಾಯ್ತು?
ಇವರ ದುಃಖದಲ್ಲಿ ಭಾಗಿಯಾಗಿರುವ ಪತ್ನಿ , ನಟಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿ ಜತೆಗೆ ಬುನ್ರೋ ಇರುವ ಫೋಟೋ ಹಾಕಿ ಹೃದಯ ಎಮೋಜಿಗಳೊಂದಿಗೆ “RIP ಬುನ್ರೋ” ಎಂದಷ್ಟೇ ಬರೆದು ಕೊಂಡಿದ್ದಾರೆ.
ಟೀಂ ಇಂಡಿಯಾ ತಂಡದಲ್ಲಿ ಫಿಟ್ನೆಸ್ ಆಟಗಾರ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಗೆ ಜಿಮ್ ಪಾಟ್ನರ್ ಕೂಡ ಪ್ರೀತಿಯ ನಾಯಿಮರಿ. ಅದರೊಂದಿಗೆ ಕಳೆಯುತ್ತಿದ್ದ ಕ್ಷಣಗಳ ವಿಡಿಯೋವನ್ನೂ ವಿರಾಟ್ ಇನ್‌ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದರು. ಸದ್ಯ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೊಹ್ಲಿ ಪತ್ನಿ ಜತೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿರಿನಿಮ್ಮ ಜಿಲ್ಲೆಯ ಕರೊನಾ ಸ್ಥಿತಿ ಇಂದು ಹೇಗಿದೆ? ಇಲ್ಲಿದೆ ವಿವರ
https://www.instagram.com/p/B_1NpoMl4JJ/?utm_source=ig_embed
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
