ನವದೆಹಲಿ:ಫೋಬ್ಸ್​ ನಿಯತಕಾಲಿಕ ಪ್ರಕಟಿಸುವ ವಿಶ್ವದ ಅತ್ಯಂತ ಶ್ರೀಮಂತ ನೂರು ಕ್ರೀಡಾಪಟುಗಳಲ್ಲಿ ಭಾರತದಿಂದ ವಿರಾಟ್​ ಕೊಹ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಜತೆಗೆ, ಈ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಕೂಡ ಕೊಹ್ಲಿ ಆಗಿದ್ದಾರೆ.
ಭಾರತೀಯ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕಳೆದ ಒಂದು ವರ್ಷದಲ್ಲಿ ಗಳಿಸಿರುವ ಆದಾಯ 26 ಮಿಲಿಯನ್ ಡಾಲರ್​ (ಅಂದಾಜು 196 ಕೋಟಿ ರೂ.) ಇದರಲ್ಲಿ 24 ಮಿಲಿಯನ್​ ಜಾಹೀರಾತು ಆದಾಯವಾಗಿದ್ದರೆ (181 ಕೋಟಿ ರೂ.), 2 ಮಿಲಿಯನ್​ ಡಾಲರ್​ ( 15 ಕೋಟಿ ರೂ.) ಸಂಬಳ ಹಾಗೂ ಪ್ರಶಸ್ತಿ ಮೊತ್ತವಾಗಿದೆ ಎಂದು ಫೋಬ್ಸ್​ ತಿಳಿಸಿದೆ.
ಇದನ್ನೂ ಓದಿ;ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆಯೇ ಉಚಿತ ಲ್ಯಾಪ್​ಟಾಪ್​…?
ಆದರೆ, ಕಳೆದ ಸಾಲಿಗೆ ಹೋಲಿಸಿದರೆ ವಿರಾಟ್​ ಕೊಹ್ಲಿ ಸ್ಥಾನದಲ್ಲಿ ಭಾರಿ ಏರಿಕೆ ಕಂಡಿದೆ. ಈ ಬಾರಿ 30 ಸ್ಥಾನಗಳಷ್ಟು ಮೇಲೆ ಬಂದಿದ್ದು, 66ನೇ ಸ್ಥಾನದಲ್ಲಿದ್ದಾರೆ.ಈ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಹಿರಿಮೆ ಸತತ ಎರಡನೇ ವರ್ಷವೂ ಕೊಹ್ಲಿಯದ್ದಾಗಿದೆ. ಕಳೆದ ಬಾರಿ ಬೇರಾವ ಕ್ರಿಕೆಟಿಗನೂ ಅಗ್ರ 100ರ ಪಟ್ಟಿಗೆ ಸೇರಿರಲಿಲ್ಲ.
ಕ್ರೀಡಾಪಟುಗಳು 2019ರ ಜೂನ್​ನಿಂದ 2020ರ ಜೂನ್​ವರೆಗೆ ಗಳಿಸಿದ ಪ್ರಶಸ್ತಿ ಮೊತ್ತ, ಸಂಬಳ, ಒಪ್ಪಂದಗಳು ಜಾಹೀರಾತು ಆದಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಕೊಹ್ಲಿ 100ನೇ ಸ್ಥಾನದಲ್ಲಿದ್ದರು.
ಇದನ್ನೂ ಓದಿ;ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಿಗ ಶಾಲೆಗೆ; ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆದ ಶಿಕ್ಷಣ
ಪ್ರತಿ ವರ್ಷವೂ ಫುಟ್ಬಾಲ್​ ಆಟಗಾರರೇ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುತ್ತಿದ್ದರು. ಇದೇ ಮೊದಲ ಬಾರಿಗೆ ಟೆನಿಸ್​ ಆಟಗಾರ ರೋಜರ್​ ಫೆಡರರ್​ 802 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ 793 ಕೋಟಿ ರೂ.ಗಳೊಂದಿಗೆ ಫುಟ್ಬಾಲ್​ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೊ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ನಂತರದಲ್ಲಿ ಲಿಯೊನೆಲ್​ ಮೆಸ್ಸಿ 785 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್​ನ ನೇಮಾರ್​ 721 ಕೋಟಿ ರೂ. ಒಡೆಯರಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
