ಮುಂಬೈ : ಕ್ರಿಕೆಟ್ ಸ್ಟಾರ್ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಗಳಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ ಅಂತೆ. ಅಷ್ಟೇ ಅಲ್ಲ, ಬೀದಿನಾಯಿಗಳು ಮತ್ತು ಇತರ ಅನಾಥ ಪ್ರಾಣಿಗಳ ಶುಶ್ರೂಷೆ ಮಾಡಲು ಆಶ್ರಯ ಕೇಂದ್ರವನ್ನು ತೆರೆಯುವುದು ಅನುಷ್ಕಾರ ಕನಸಂತೆ. ಈ ಕನಸನ್ನು ಈಗ ಕೊಹ್ಲಿ ಸಾತ್ಕಾರಗೊಳಿಸಲಿದ್ದಾರೆ.
ಪ್ರಾಣಿಪ್ರಿಯರು ಮತ್ತು ಸಂರಕ್ಷಕರು ಏಪ್ರಿಲ್ 4 ನೇ ತಾರೀಖನ್ನು ‘ವರ್ಲ್ಡ್ ಸ್ಟ್ರೇ ಅನಿಮಲ್ಸ್ ಡೇ’ ಎಂದು ಆಚರಿಸುತ್ತಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ತಮ್ಮ ಸೇವಾ ಟ್ರಸ್ಟ್​ನಿಂದ ಮುಂಬೈನ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳನ್ನು ಸ್ಠಾಪಿಸುವ ತಮ್ಮ ಯೋಜನೆ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕೊಹ್ಲಿ, “ಅನುಷ್ಕಾ ತಮ್ಮ ಪ್ರಾಣಿಪ್ರೇಮದಿಂದ ಮತ್ತು ನಿರಂತರ ಪ್ರಾಣಿ ಹಕ್ಕುಗಳ ಸಮರ್ಥನೆ ಮಾಡುವ ಮೂಲಕ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದ” ಸೂಚಿಸಿದ್ದಾರೆ.
ಇದನ್ನೂ ಓದಿ:ಬೀದಿಯಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​
ವಿರಾಟ್ ಕೊಹ್ಲಿ ಫೌಂಡೇಶನ್ ಮುಂಬೈನ ಮಲಾಡ್ ಮತ್ತು ಬೊಯ್ಸರ್​ನಲ್ಲಿ ಎರಡು ಪ್ರಾಣಿ ಆಶ್ರಯ ಕೇಂದ್ರಗಳನ್ನು ತೆರೆಯಲಿದೆ. ವಿವಾಲ್ಡಿಸ್ ಅನಿಮಲ್​ ಹೆಲ್ತ್​ ಮತ್ತು ಸ್ಥಳೀಯ ಎನ್​ಜಿಒ ಆವಾಜ್​​ನ ಸಹಯೋಗದಲ್ಲಿ ಬೀದಿ ಪ್ರಾಣಿಗಳಿಗೆ ಸುರಕ್ಷಿತವಾದ ಜಾಗವನ್ನು ಒದಗಿಸಿ, ವೈದ್ಯಕೀಯ ಸಹಾಯ ದೊರಕಿಸುವ ಯೋಜನೆ ಕೊಹ್ಲಿ ಅವರದ್ದು.
ಮಲಾಡ್ ಕೇಂದ್ರವು ತಾತ್ಕಾಲಿಕ ಪುನರ್ವಸತಿ ಕೇಂದ್ರವಾಗಲಿದ್ದು, ಗಾಯಗೊಂಡಿರುವ ಪ್ರಾಣಿಗಳನ್ನು – ಮುಖ್ಯವಾಗಿ ನಾಯಿಗಳು ಮತ್ತು ಬೆಕ್ಕುಗಳು – ಚೇತರಿಸಿಕೊಳ್ಳುವವರೆಗೆ ಇಟ್ಟುಕೊಂಡು ವೈದ್ಯಕೀಯ ಶುಶ್ರೂಷೆ ಮಾಡಲಾಗುವುದು. ಬೋಯಿಸಾರ್‌ನಲ್ಲಿನ ಕೇಂದ್ರವು ಶಾಶ್ವತ ಆಶ್ರಯವಾಗಲಿದ್ದು, ಇಲ್ಲಿ ಕುರುಡು ಪ್ರಾಣಿಗಳು, ಪಾರ್ಶ್ವವಾಯು ಅಥವಾ ಬೇರೆ ಜೀವಿತಾವಧಿಯ ಕಾಯಿಲೆಗಳಿಂದ ಅಥವಾ ವೃದ್ಧಾಪ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಕಾಪಾಡಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾದಿಂದಾಗಿ ಮುಂಬೈನ ಐಪಿಎಲ್​ ಪಂದ್ಯಗಳನ್ನು ಬೇರೆಡೆ ನಡೆಸಲಾಗುತ್ತಾ ? ಇಲ್ಲಿದೆ ಉತ್ತರ…
“ಅಯ್ಯಪ್ಪಸ್ವಾಮಿ ಭಕ್ತರನ್ನು ಲಾಠಿಗಳಿಂದ ಸ್ವಾಗತಿಸಲಾಗಿದೆ” – ಕೇರಳದಲ್ಲಿ ಮೋದಿ
VIDEO| ಎರಡು ಬೆರಳಲ್ಲಿ 234 ಬುಗುರಿ ತಿರುಗಿಸಿ ಚುನಾವಣಾ ಪ್ರಚಾರ!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
