ಮಹಾರಾಷ್ಟ್ರ:ಟೀಂ ಇಂಡಿಯಾದ ಆಟಗಾರ ವಿರಾಟ್​​ ಕೊಹ್ಲಿ ಅವರು ಒಂದಲ್ಲಾವೊಂದು ವಿಚಾರವಾಗಿ ಸೋಶಿಲ್​ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ದುಬಾರಿ ಬೆಲೆಯ ಮನೆಯನ್ನು ಕೊಹ್ಲಿ ಖರೀದಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡಾ ಕೊಹ್ಲಿ, ಅಲಿಬಾಗ್​​ನಲ್ಲಿ ಮನೆ ಖರೀದಿಸಿದ್ದರು. ಆದರೆ ಈಗ ಖರೀದಿ ಮಾಡಿರುವ ವಿಲ್ಲಾದ ಬೆಲೆ ಕೇಳಿದರೆ ಖಂಡಿತವಾಗಿಯೂ ನೀವು ಆಶ್ಚರ್ಯ ಪಡುವುದು ಹೌದು.
ಅವಾಸ್ ಲಿವಿಂಗ್‌ನಲ್ಲಿ ಕೊಹ್ಲಿ ಹೊಸ ವಿಲ್ಲಾ ಖರೀದಿಸಿದ್ದು, ಇದರ ಬೆಲೆ ಸುಮಾರು 6 ಕೋಟಿ ಯಾಗಿದ್ದು, ಈ ವಿಲ್ಲಾ 2000 ಚದರ ಅಡಿ ವಿಸ್ತೀರ್ಣ ಹೊಂದಿದೆ.ಹೊಸ ವಿಲ್ಲಾದ ನೋಂದಣಿ ಶುಲ್ಕಕ್ಕಾಗಿ ಕೊಹ್ಲಿ 36 ಲಕ್ಷ ರೂ. ಪಾವತಿಸಿದ್ದು, ಈ ಹೊಸ ವಿಲ್ಲಾದಲ್ಲಿ ಸರಿಸುಮಾರು 400 ಚದರ ಅಡಿ ಅಳತೆಯ ದೊಡ್ಡ ಈಜುಕೊಳವಿದೆ.
ಇದನ್ನೂ ಓದಿ:ಇದು ನನ್ನ ಕೊನೆಯ ಅಧಿವೇಶನ; ಬಿ.ಎಸ್ ಯಡಿಯೂರಪ್ಪ ವಿದಾಯದ ಭಾಷಣ
ಕೊಹ್ಲಿಯ ವಿಲ್ಲಾದ ಬಗ್ಗೆ ಮಾಹಿತಿ ನೀಡಿರುವ ಅವಾಸ್ ಲಿವಿಂಗ್​ನ ಕಾನೂನು ಸಲಹೆಗಾರ ಅಡ್ವೊಕೇಟ್ ಮಹೇಶ್ ಮ್ಹಾತ್ರೆ, ಕೊಹ್ಲಿ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದರಿಂದ ಅವರ ಸಹೋದರ ವಿಕಾಸ್ ಕೊಹ್ಲಿ ನೋಂದಣಿಯಂತಹ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಲಿಬಾಗ್‌ನಲ್ಲಿಯೇ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫಾರ್ಮ್ ಹೌಸ್ ಖರೀದಿಸಿದ್ದರು. ಖರೀದಿಗಾಗಿ ಕೊಹ್ಲಿ ಸುಮಾರು 19.24 ಕೋಟಿ ರೂಪಾಯಿ ಖರ್ಚು ಮಾಡಿದ್ದರು. 36 ಸಾವಿರದ 59 ಚದರ ಅಡಿ ವಿಸ್ತೀರ್ಣದ ಈ ಫಾರ್ಮ್ ಹೌಸ್ ಖರೀದಿಗಾಗಿ ಕೊಹ್ಲಿ, 1.15 ಕೋಟಿ ರೂಪಾಯಿಯನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಿದ್ದರು.
ವೈದ್ಯರ ಎಡವಟ್ಟು; ಎಡಗಾಲು ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 5 =
Remember me
