ಕೊಲಂಬೋ:ನಿನ್ನೆ (ಸೆ.11) ನಡೆದ ಏಷ್ಯಾ ಕಪ್​ ಟೂರ್ನಿಯ ಸೂಪರ್​ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 228 ರನ್​ಗಳ ಭಾರೀ ಅಂತರದಲ್ಲಿ ಅದ್ಧೂರಿ ಗೆಲುವು ದಾಖಲಿಸಿದೆ. ಭಾನುವಾರ ಆರಂಭವಾದ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡು ಸೋಮವಾರದ ಮೀಸಲು ದಿನದಂದು ನಡೆದರೂ ತಮ್ಮ ಲಕ್ಷ್ಯವನ್ನು ಕಳೆದುಕೊಳ್ಳದ ಭಾರತ ತಂಡ ಪ್ರಚಂಡ ಜಯ ಸಾಧಿಸಿತು.
ಪಾಕ್​ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ವಿರಾಟ್​ ಕೊಹ್ಲಿ (122 ರನ್​, 94 ಎಸೆತ, 9 ಬೌಂಡರಿ, 3 ಸಿಕ್ಸರ್​) ಮತ್ತು ಕನ್ನಡಿಗ ಕೆ.ಎಲ್​. ರಾಹುಲ್​ (111 ರನ್​, 106 ಎಸೆತ, 12 ಬೌಂಡರಿ, 2 ಸಿಕ್ಸರ್​) ಅಜೇಯ 233 ರನ್​ ಜೊತೆಯಾಟದಿಂದಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ರೋಹಿತ್​ ಶರ್ಮ (56) ಮತ್ತು ಶುಭಮನ್​ ಗಿಲ್​ (58) ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಪಾಕ್​ ವಿರುದ್ಧ ಹೈವೋಲ್ಟೇಜ್​ ಪಂದ್ಯವನ್ನು ಗೆದ್ದ ಬಳಿಕ ಭಾರತ ತಂಡದ ಆಟಗಾರರು ಸ್ವಿಮ್ಮಿಂಗ್​ಪೂಲ್​ನಲ್ಲಿ ಸಖತ್​ ಎಂಜಾಯ್​ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿರಾಟ್​ ಕೊಹ್ಲಿ, ರವಿಂದ್ರ ಜಡೇಜಾ, ರೋಹಿತ್​ ಶರ್ಮ, ಶುಭಮನ್​ ಗಿಲ್​ ಸೇರಿದಂತೆ ಇತರೆ ಆಟಗಾರರು ತಾವು ತಂಗಿರುವ ಹೋಟೆಲ್​ನ ಸ್ವಿಮ್ಮಿಂಗ್​ಪೂಲ್​ನಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಅದರಲ್ಲೂ ಕೊಹ್ಲಿ, ರೋಹಿತ್​ ಮತ್ತು ಜಡೇಜಾ ತಮ್ಮ ಡಾನ್ಸ್​ ಸ್ಕಿಲ್​ ಅನ್ನು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ:ಗಣೇಶ ಹಬ್ಬ; ಯಾವ ಧರ್ಮದವರಿಗೂ ತೊಂದರೆಯಾಗಬಾರದೆಂದು ಸಿದ್ದರಾಮಯ್ಯ ಎಚ್ಚರಿಕೆ
A memorable victory followed by a much-deserved recovery session ahead of today’s Super 4s encounter 😃👌
Here’s a quick round-up of#TeamIndia‘s remarkable win over Pakistan in Colombo 🎥 🙌#AsiaCup2023|#INDvPAKpic.twitter.com/h0n4yeIZbN
— BCCI (@BCCI)September 12, 2023

ಈ ಒಂದು ಕ್ಷಣ ಕ್ರೀಡಾಲೋಕದಲ್ಲಿ ಬಹುದಿನಗಳವರೆಗೆ ನೆನಪಿನಲ್ಲಿ ಉಳಿಯಲಿದೆ. ಅತ್ಯದ್ಭುತ ಗೆಲುವಿನ ಬಳಿಕ ನಾಯಕ ರೋಹಿತ್​ ಶರ್ಮ ಅವರು ತಮ್ಮ ಇಡೀ ತಂಡವನ್ನು ಕೊಂಡಾಡಿದರು. ಅದರಲ್ಲೂ ಕೆ.ಎಲ್​. ರಾಹುಲ್​, ವಿರಾಟ್​ ಕೊಹ್ಲಿ ಮತ್ತು ಕುಲದೀಪ್​ ಯಾದವ್​ಗಾಗಿ ವಿಶೇಷ ಪದಗಳನ್ನು ಮೀಸಲಿಟ್ಟರು.
ನಿನ್ನೆಯಿಂದಲೇ ಅದ್ಭುತ ಪ್ರದರ್ಶನ ನೀಡಿದೆವು. ನಾವು ಪ್ರಾರಂಭಿಸಿದಾಗ ನಮ್ಮ ವಿಕೆಟ್ ಚೆನ್ನಾಗಿದೆ ಎಂದು ನಮಗೆ ತಿಳಿದಿತ್ತು ಮತ್ತು ನಾವು ಮಳೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿತ್ತು. ಇಬ್ಬರು ಅನುಭವಿ (ಕೊಹ್ಲಿ ಮತ್ತು ರಾಹುಲ್)ಗಳು ಉತ್ತಮ ಆಟವಾಡಿದರು. ಆರಂಭದಲ್ಲೇ ಸಾಕಷ್ಟು ಪಾಸಿಟಿವ್ ಅಂಶವಿತ್ತು. ಇದಾದ ಬಳಿಕ ವಿರಾಟ್​ ಮತ್ತು ರಾಹುಲ್​​ರಿಂದಲೂ ಅದು ಮುಂದುವರಿಯಿತು. ವಿರಾಟ್​ ಇನ್ನಿಂಗ್ಸ್​ ಮಾತ್ರ ಅದ್ಭುತವಾಗಿತ್ತು ಮತ್ತು ಗಾಯದಿಂದ ಹೊರಬಂದ ರಾಹುಲ್​ ಆಟವು ಅಮೋಘವಾಗಿತ್ತು ಎಂದು ರೋಹಿತ್​ ಹೇಳಿದರು.
ಪಂದ್ಯದ ವಿಚಾರಕ್ಕೆ ಬಂದರೆ, ಮೀಸಲು ದಿನ ಸೋಮವಾರ 147 ರನ್​ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಿನ ದಾಖಲೆಯ ಜತೆಯಾಟದ ನೆರವಿನಿಂದ 2 ವಿಕೆಟ್​ಗೆ 356 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 32 ಓವರ್​ಗಳಲ್ಲಿ 128 ರನ್​ಗಳ ನಿಕೃಷ್ಟ ಮೊತ್ತಕ್ಕೆ ಕುಸಿದ ಪಾಕ್ ಅತಿ ದೊಡ್ಡ ಅಂತರದ ಮುಖಭಂಗ ಅನುಭವಿಸಿತು.
ನಾಯಕ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಭಾನುವಾರ ಭದ್ರ ಆರಂಭ ಒದಗಿಸಿದ್ದು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಪ್ರತಿಯಾಗಿ ಚೇಸಿಂಗ್ ನಡೆಸಿದ ಪಾಕಿಸ್ತಾನ 11 ಓವರ್​ಗಳಲ್ಲಿ 2 ವಿಕೆಟ್​ಗೆ 44 ರನ್​ಗಳಿಸಿದಾಗ ಮಳೆ ಆಡಚಣೆ ತಂದಿತ್ತು. ಬಳಿಕ ಮಳೆ ಬಿಡುವು ಕೊಟ್ಟು ಆಟ ನಡೆದಾಗ ಪಾಕ್ ಗುರಿ ಬೆನ್ನಟ್ಟಲಾಗದೆ ಕೈಚೆಲ್ಲಿತು. ಬೌಲಿಂಗ್​ನಲ್ಲಿ ಕುಲ್​ದೀಪ್ ಯಾದವ್ 25ಕ್ಕೆ 5 ವಿಕೆಟ್ ಕಬಳಿಸಿ ಪಾಕ್ ಬೆನ್ನೆಲುಬು ಮುರಿದರು.
ಇದನ್ನೂ ಓದಿ:ಗಣೇಶ ಚತುರ್ಥಿಯಂದೇ ನೂತನ ಸಂಸತ್​ ಭವನಕ್ಕೆ ಎಂಟ್ರಿ, ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್
ಕೊಹ್ಲಿ-ರಾಹುಲ್ ಬಿರುಸಿನಾಟ: ಶುಭಮಾನ್ ಗಿಲ್ ವಿಕೆಟ್ ಬಳಿಕ 3ನೇ ವಿಕೆಟ್​ಗೆ 24 ರನ್ ಪೇರಿಸಿ ಕ್ರೀಸ್​ನಲ್ಲಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರಾಹುಲ್ 24.1 ಓವರ್​ಗಳಿಂದಲೇ ಬ್ಯಾಟಿಂಗ್ ಮುಂದುವರಿಸಿದರು. 3ನೇ ವಿಕೆಟ್​ಗೆ ಇವರಿಬ್ಬರೂ 233 ರನ್ ಕಲೆಹಾಕಿದರು. ಸ್ಪಿನ್ನರ್ ಶಾದಾಬ್ ಖಾನ್ ಹಾಗೂ ಅರೆಕಾಲಿಕ ಬೌಲರ್ ಇಫ್ತಿಕರ್ ಅಹ್ಮದ್ ಅವರನ್ನು ಟಾರ್ಗೆಟ್ ಮಾಡಿದ ರಾಹುಲ್, 60 ಎಸೆತಗಳಲ್ಲಿ, ಕೊಹ್ಲಿ 55 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಇಲ್ಲಿಂದ ರನ್​ಗಳಿಕೆಗೆ ಚುರುಕು ಮುಟ್ಟಿಸಿದ ಈ ಜೋಡಿ ಪಾಕ್ ಬೌಲರ್​ಗಳನ್ನು ಬೆಂಡೆತ್ತಿದ್ದರು. ಏಕದಿನ ಕ್ರಿಕೆಟ್​ನಲ್ಲಿ 6ನೇ ಶತಕ ಸಿಡಿಸಿದ ರಾಹುಲ್ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು. ವಿರಾಟ್ ಕೊಹ್ಲಿ ಅನುಭವಿ ಆಟದ ಮೂಲಕ ತಂಡದ 84 ಎಸೆತದಲ್ಲಿ ಶತಕ ಪೂರೈಸಿದರು. ಸ್ಲಾಗ್ ಓವರ್​ಗಳಲ್ಲಿ ರನ್ ಮಳೆ ಜತೆಗೆ ಆಕ್ರಮಣಕಾರಿ ಹೊಡೆತಗಳ ಮೂಲಕ ಇವರಿಬ್ಬರೂ ಅಂತಿಮ ಐದು ಓವರ್​ಗಳಲ್ಲಿ 56 ರನ್ ಕಸಿದು ಅಬ್ಬರಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ಕಠಿಣ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್(25ಕ್ಕೆ 5) ಮಾರಕ ದಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ವೈಫಲ್ಯ ಕಂಡಿತು. ಇಮಾಮ್ ಉಲ್ ಹಕ್​ರನ್ನು ಎಲ್​ಬಿ ಬಲೆಗೆ ಬೀಳಿಸಿದ ಬುಮ್ರಾ ಮೊದಲ ಯಶಸ್ಸು ತಂದರು. ಬಾಬರ್ ಅಜಮ್ (10), ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ಫಖರ್ ಜಮಾನ್ (27) ಹಾಗೂ ಅಘಾ ಸಲ್ಮಾನ್ (23) 4ನೇ ವಿಕೆಟ್​ಗೆ 30 ರನ್​ಗಳಿಸಿದ್ದು ಹೊರತುಪಡಿಸಿ, ಇಫ್ತಿಕರ್ ಅಹ್ಮದ್ (23) ತುಸು ರನ್ ಕಲೆಹಾಕಿದ್ದು ಬಿಟ್ಟರೆ ಇತರ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಧಾನವಾಗಿ ಕ್ರೀಸಿಗೆ ಗಟ್ಟಿಯಾದ ಫಖರ್ ಅವರ ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡ ಕುಸಿತಕ್ಕೆ ಮುನ್ನುಡಿ ಬರೆದ ಕುಲದೀಪ್, ಮಧ್ಯಮ ಕ್ರಮಾಂಕದ ಬೆನ್ನೆಲುಬನ್ನು ಮುರಿದರು. ಸ್ಪಿನ್ ಜಾಲದ ಎದುರು ರನ್​ಗಳಿಸಲು ಪರದಾಡಿದ ಫಹೀಮ್ ಆಶ್ರಫ್ (4 ) ವಿಕೆಟ್ ಕಬಳಿಸಿದ ಕುಲದೀಪ್ ಪಾಕ್ ಇನಿಂಗ್ಸ್​ಗೆ ತೆರೆ ಎಳೆದರು.(ಏಜೆನ್ಸೀಸ್​)
ಗಾಯದಿಂದ ಬಳಲಿದ ಪಾಕ್​ ಆಟಗಾರ: ಕನ್ನಡಿಗ ರಾಹುಲ್​ ನಡೆಯನ್ನು ಮೆಚ್ಚಿಕೊಂಡ ಕ್ರೀಡಾ ಜಗತ್ತು!

ಇಂಗ್ಲಿಷನ್ನು ಕೆಲಸಕ್ಕೆ ಇಟ್ಟುಕೊಳ್ಳಿ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ: ಹಂಸಲೇಖ ಹೇಳಿಕೆ

ಗಣೇಶ ಹಬ್ಬ; ಯಾವ ಧರ್ಮದವರಿಗೂ ತೊಂದರೆಯಾಗಬಾರದೆಂದು ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 6 =
Remember me
