ಬೆಂಗಳೂರು:ಬಾಲಿವುಡ್ ನಟಿ ಅನುಷ್ಕಾ ಶರ್ಮಾ 36ನೇ ವಸಂತಕ್ಕೆ ಕಾಲಿರಿಸಿದ್ದು, ಮೇ 1 ಬುಧವಾರ ಆಕೆಯ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಸ್ನೇಹಿತರ ಜೊತೆ ಬೆಂಗಳೂರಿನ ಸ್ಟಾರ್​ ಹೋಟೆಲ್​ನಲ್ಲಿ ಅದ್ದೂರಿಯಾಗಿ ಡಿನ್ನರ್​ ಪಾರ್ಟಿ ಮಾಡಿದರು.
ಇದನ್ನೂ ಓದಿ:ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ಪಶ್ಚಿಮ ಬಂಗಾಳದ ರಾಜಭವನ ನೀಡಿದ ಪ್ರತಿಕ್ರಿಯೆ ಏನು?
ಪತ್ನಿಯ ಹುಟ್ಟಿದ ದಿನದ ಸಂಭ್ರಮಾಚರಣೆಯ ಫೋಟೋಗಳನ್ನು ವಿರಾಟ್ ಈಗ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅದ್ದೂರಿ ಉಪಾಹಾರ ಗೃಹ ಲುಪಾದಲ್ಲಿ ಡಿನ್ನರ್​ ಪಾರ್ಟಿ ಆಯೋಜಿಸಿದ್ದು, ವಿರಾಟ್​ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ನಲ್ಲಿ ಇದರ ಫೋಟೋ ಪೋಸ್ಟ್ ಮಾಡಿದ್ದಾರೆ.
‘ಅನುಷ್ಕಾ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ಸವಿಭೋಜನ ಒದಗಿಸಿದ್ದಕ್ಕೆ ಹೋಟೆಲ್​ ಮುಖ್ಯಸ್ಥ ಮನು ಚಂದ್ರಗೆ ಧನ್ಯವಾದಗಳು. ನಮ್ಮ ಜೀವನದ ಅತ್ಯುತ್ತಮ ಆಹಾರ ಅನುಭವಗಳಲ್ಲಿ ಇದೂ ಒಂದಾಗಿದೆ’ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಮತ್ತೊಂದೆಡೆ, ಅನುಷ್ಕಾ ಗ್ರೂಪ್ ಫೋಟೋವನ್ನು ಮರು-ಶೇರ್ ಮಾಡಿದ್ದಾರೆ. ಈ ಫೋಟೋಗೆ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸ್ಸಿಸ್ ಪ್ರತಿಕ್ರಿಯಿಸಿದ್ದು, “ಒಳ್ಳೆಯ ಜನರೊಂದಿಗೆ ಉತ್ತಮ ರಾತ್ರಿ ಕಳೆಯಿರಿ…” ಎಂದಿದ್ದಾರೆ.
“ನಾನು ನಿನ್ನನ್ನು ನೋಡದಿದ್ದರೆ ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಜನ್ಮದಿನದ ಶುಭಾಶಯಗಳು, ಪ್ರಿಯೆ ನೀನು ನನ್ನ ಈ ಜಗತ್ತಿನಲ್ಲಿ ಬೆಳಕು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ.” ಎಂದು ವಿರಾಟ್ ತನ್ನ ಪತ್ನಿಯ ಮೇಲಿನ ಪ್ರೀತಿಯನ್ನು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಮೊದಲ ಬಾರಿಗೆ 2013 ರಲ್ಲಿ ಶಾಂಪೂ ಬ್ರ್ಯಾಂಡ್‌ನ ಜಾಹೀರಾತಿನ ಚಿತ್ರೀಕರಣದಲ್ಲಿ ಭೇಟಿಯಾದರು. 2017 ರಲ್ಲಿ ಅವರು ಇಟಲಿಯಲ್ಲಿ ವಿವಾಹವಾದರು. ಅವರ ಮೊದಲ ಮಗು, ವಮಿಕಾ 2021 ರಲ್ಲಿ ಜನಿಸಿತು. ಅವರು ಈ ವರ್ಷದ ಆರಂಭದಲ್ಲಿ ತಮ್ಮ ಎರಡನೇ ಮಗುವಿನ ಜನನವನ್ನು ಘೋಷಿಸಿದರು .
ಅನುಷ್ಕಾ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ. ಈ ಚಿತ್ರವು ಸುಮಾರು ನಾಲ್ಕು ವರ್ಷದ ನಂತರ ಚಿತ್ರೀಕರಣ ನಡೆಯುತ್ತಿದೆ. ಈ ನಟಿ ಇತ್ತೀಚೆಗೆ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಚೀನಾದಲ್ಲಿ ಭಾರಿ ಮಳೆ..ಹೆದ್ದಾರಿ ಕುಸಿದು 48 ಜನರು ಮೃತ್ಯು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen − nine =
Remember me
