ಮುಂಬೈ:ಕರೊನಾ ಲಾಕ್​ಡೌನ್​ ಸಮಯವನ್ನು ಕುಟುಂಬಸ್ಥರೊಂದಿಗೆ ಕಳೆಯುತ್ತಿರುವ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ, ಫಿಟ್ನೆಸ್​ ಕಾಪಾಡಿಕೊಳ್ಳಲು ಮನೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ. ಆ ಬಗ್ಗೆ ಸ್ವತಃ ಅವರೇ ವಿಡಿಯೋ ಶೇರ್​ ಮಾಡಿದ್ದು, ಸಖತ್​ ವೈರಲ್​ ಆಗುತ್ತಿದೆ.
ಇದನ್ನೂ ಓದಿರಿಮತ್ತೊಮ್ಮೆ ರಾಷ್ಟ್ರ ರಾಜಕೀಯಕ್ಕೆ ದೇವೇಗೌಡ ಎಂಟ್ರಿ!
ಟ್ವಿಟರ್​ನಲ್ಲಿ ಮಂಗಳವಾರ ‘My first shot at 180 landings. Top exercise’ ಎಂದು ಬರೆದು ಅಪ್ಲೋಡ್​ ಮಾಡಿರುವ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘180 ಲ್ಯಾಂಡಿಂಗ್​ಗಳಲ್ಲಿ ಮೊದಲ ಶಾಟ್​… ಉತ್ತಮ ವ್ಯಾಯಾಮ’ ಎಂಬ ಟೆಕ್ಸ್ಟ್ ಮುಂದೆ ಸೂಪರ್​ ಇಮೋಜಿ ಹಾಕಿದ್ದಾರೆ.
ಕಾಲುಗಳನ್ನು 180 ಡಿಗ್ರಿಯಷ್ಟು ಮೇಲಕ್ಕೆತ್ತಿ ಹಿಮ್ಮುಖದಿಂದ ಮುಂದಕ್ಕೆ ತಿರುಗುವ ಕೊಹ್ಲಿ ಕಸರತ್ತನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ‘ವಿರಾಟ್ ಭಾಯ್​ಗೆ ಸ್ಫೂರ್ತಿ ನೀಡಿ.. ನೀವು ದಂತಕಥೆ’. “ಓ ಮೈ ಕಿಂಗ್.. ನೀವು ಏನೇ ಮಾಡಿದರೂ ಅದೆಲ್ಲವೂ ಐಕಾನಿಕ್’… ಹೀಗೆ ಸಾವಿರಾರು ಕಮೆಂಟ್​ಗಳು ಬರುತ್ತಿವೆ.
ವಿಡಿಯೋ ನೋಡಿ
https://www.facebook.com/VVani4U/videos/2621684414769127/


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twenty =
Remember me
