ವಾಷಿಂಗ್ಟನ್:ಕ್ವಾರಂಟೈನ್ ಅವಧಿಗಿಂತಲೂ ಹೆಚ್ಚು ದೀರ್ಘ ಕಾಲ ವೈರಸ್ ಮಾನವನ ದೇಹದಲ್ಲಿ ಸಕ್ರಿಯವಾಗಿ ಇರಬಲ್ಲದು ಎಂದು ‘ಫ್ರಂಟಿಯರ್ಸ್ ಇನ್ ಮೆಡಿಸಿನ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ಹೇಳಿದೆ.
ಸೋಂಕಿನ ಅಂತಿಮ ಘಟ್ಟದಲ್ಲಿ ಯಾವುದೇ ಲಕ್ಷಣ ಇಲ್ಲದೇ ಅದು ಹರಡುವ ಸಾಧ್ಯತೆಯಿದೆ. ಬ್ರೆಜಿಲ್​ನ 38 ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. 2020ರ ಏಪ್ರಿಲ್​ನಿಂದ ನವೆಂಬರ್​ವರೆಗೆ ಪ್ರತಿ ವಾರ ಈ ರೋಗಿಗಳ ಸ್ಥಿತಿಗತಿಯನ್ನು ಸಂಶೋಧಕರು ಅವಲೋಕಿಸಿದ್ದರು. ಸತತವಾಗಿ ಎರಡು-ಮೂರು ಬಾರಿ ಆರ್​ಟಿ-ಪಿಸಿಆರ್ ಪರೀಕ್ಷೆ ಫಲಿತಾಂಶ ನೆಗೆಟಿವ್ ಬರುವವರೆಗೂ ರೋಗಿಗಳನ್ನು ಗಮನಿಸಲಾಗಿತ್ತು. ಫ್ರಾನ್ಸ್​ನ ಪ್ಯಾಶ್ಚರ್ ಇನ್ಸ್ ಟಿಟ್ಯೂಟ್, ಯುನಿವರ್ಸಿಟಿ ಆಫ್ ಸಾವೋ ಪೌಲೋ ಮತ್ತು ಬ್ರೆಜಿಲ್​ನ ಓಸ್ವಾಲ್ಡೊ ಕ್ರೂಝå್ ಫೌಂಡೇಷನ್ ಒಳಗೊಂಡ ಸಂಶೋಧಕರು ಈ ಅಧ್ಯಯನ ನಡೆಸಿದ್ದರು. ಪರೀಕ್ಷಾ ಫಲಿತಾಂಶ ನೆಗೆಟಿವ್ ಬರಲು ಸರಾಸರಿ ಒಂದು ತಿಂಗಳು ತೆಗೆದುಕೊಂಡಿದೆ. 38 ರೋಗಿಗಳ ಪೈಕಿ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರಲ್ಲಿ 70 ದಿನಕ್ಕಿಂತ ಹೆಚ್ಚು ಕಾಲ ವೈರಸ್ ಸಕ್ರಿಯಾಗಿದ್ದುದು ಪತ್ತೆಯಾಗಿದೆ.
ಭಾರತದಲ್ಲಿ 2 ಲಕ್ಷ ಹೊಸ ಕೇಸ್:ಭಾರತದಲ್ಲಿ ಕರೊನಾ ಸಂಖ್ಯೆ ಇಳಿಯುತ್ತಿದ್ದು ಸೋಮವಾರ 2,09,918 ಕೇಸ್ ದೃಢಪಟ್ಟಿವೆ. ಸೋಂಕಿತರ ಒಟ್ಟು ಸಂಖ್ಯೆ 4,13,02,440 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 959 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 4,95,050ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 53,669ರಷ್ಟು ಇಳಿದಿದ್ದು ಒಟ್ಟು 18,31,268 ಸಕ್ರಿಯ ಕೇಸ್​ಗಳಿವೆ. ರಾಷ್ಟ್ರೀಯ ಚೇತರಿಕೆ ದರ ಶೇಕಡ 94.37 ಆಗಿದೆ. ದೇಶದಾದ್ಯಂತ ಇದುವರೆಗೆ 166.03 ಕೋಟಿ ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ.
ಲಸಿಕೆ ಕಡ್ಡಾಯದಿಂದ ನಷ್ಟವಿಲ್ಲ:ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯ ಗೊಳಿಸಿರುವುದರಿಂದ ಯಾರೂ ಉದ್ಯೋಗ ಅಥವಾ ಪಡಿತರ ಕಳೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ವಿವಿಧ ರಾಜ್ಯಗಳ ಲಸಿಕೆ ಕಡ್ಡಾಯ ನಿಯಮದಿಂದ ಯಾರಿಗೂ ಯಾವುದೇ ನಷ್ಟವಾಗುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯ್ ಇದ್ದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಬಾಲಕನಲ್ಲಿ 3 ತಳಿ ಸೋಂಕು:ಇಸ್ರೇಲ್​ನ ಒಬ್ಬ ಬಾಲಕನಲ್ಲಿ ಒಂದು ವರ್ಷದ ಅವಧಿಯಲ್ಲಿ ಸೋಂಕಿನ ಮೂರು ಪ್ರಭೇದಗಳು ಕಂಡುಬಂದಿವೆ. ಖಪಾರ್ ಸಬಾ ಪಟ್ಟಣದ ಅಲಾನ್ ಹಾಫ್​ಗಾಟ್ ಎಂಬ 11 ವರ್ಷದ ಬಾಲಕ ಒಂದು ವರ್ಷದಲ್ಲಿ ಮೂರು ತಳಿಯ ಸೋಂಕಿನಿಂದ ಬಳಲಿದ್ದು ಆತನನ್ನು ಮೂರು ಬಾರಿ ಕ್ವಾರಂಟೈನ್ ಮಾಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: ‘ಅದೂ ಅಲ್ಲ, ಇದೂ ಅಲ್ಲ’ ಎಂದು ‘ಆರ್​ಆರ್​ಆರ್’​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

ಉಡುಪಿಯಲ್ಲಿ ಸದ್ದಡಗಿಸಿದ ಪೊಲೀಸರು: ಸಾಲಾಗಿಟ್ಟ ಸೈಲೆನ್ಸರ್​ಗಳು ರಸ್ತೆಯಲ್ಲೇ ಧ್ವಂಸ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 2 =
Remember me
