ನವದೆಹಲಿ :ಕರೊನಾದಿಂದಾಗಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲೆ ನಿರ್ಬಂಧಗಳಿರುವುದರಿಂದ ಭಾರತದಲ್ಲೇ ಇರಬೇಕಾಗಿ ಬಂದಿರುವ ವಿದೇಶೀಯರ ವೀಸಾ ವಾಲಿಡಿಟಿಯನ್ನು ಆಗಸ್ಟ್​ 31 ರವರೆಗೆ ವಿಸ್ತರಿಸಲಾಗಿದೆ. ಹಲವು ವಿದೇಶೀಯರು 2020ರ ಮಾರ್ಚ್​ನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದು, ಈವರೆಗೆ ವೀಸಾ ಅವಧಿಯಲ್ಲಿ ಮಾಸಿಕ ವಿಸ್ತರಣೆ ಪಡೆಯುತ್ತಿದ್ದರು ಎನ್ನಲಾಗಿದೆ.
“ಸಾಮಾನ್ಯ ರೀತಿಯಲ್ಲಿ ವಾಣಿಜ್ಯ ವಿಮಾನ ಹಾರಾಟವನ್ನು ಪುನರಾರಂಭಿಸದೆ ಇರುವುದರಿಂದ ಭಾರತದಲ್ಲಿ ಸಿಲುಕಿರುವಂತಹ ವಿದೇಶಿ ಪ್ರಜೆಗಳ ಭಾರತೀಯ ವೀಸಾ ಅಥವಾ ವಾಸ್ತವ್ಯದ ಅವಧಿಯನ್ನು 31.08.2021 ರವರೆಗೆ ಉಚಿತವೆಂದು ಪರಿಗಣಿಸಲಾಗುತ್ತದೆ. ಈ ಕುರಿತಾಗಿ ಯಾವುದೇ ಓವರ್‌ಸ್ಟೇ ದಂಡ ವಿಧಿಸಲಾಗುವುದಿಲ್ಲ. ಇಂಥ ವಿದೇಶಿ ಪ್ರಜೆಗಳು ಪ್ರತ್ಯೇಕವಾಗಿ ವಿಸ್ತರಣೆ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ” ಎಂದು ಕೇಂದ್ರ ಗೃಹವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಸದರಿ ವಿದೇಶಿ ಪ್ರಜೆಗಳು ಭಾರತವನ್ನು ಬಿಟ್ಟು ಹೊರಹೋಗುವ ಅವಕಾಶ ಲಭಿಸಿದಾಗ ಎಕ್ಸಿಟ್ ಪರ್ಮಿಷನ್​ಗಾಗಿ ಸಂಬಂಧಿತ ಎಫ್​ಆರ್​ಆರ್​ಒಗೆ ಅರ್ಜಿ ಸಲ್ಲಿಸಬಹುದು. ಯಾವುದೇ ದಂಡ ವಿಧಿಸದೆ ತೆರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

ಕಾರ್ಖಾನೆಯಿಂದ ಅನಿಲ ಸೋರಿಕೆ : ಸ್ಥಳೀಯರಲ್ಲಿ ಕವಿದ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
