ವಿಶಾಖಪಟ್ಟಣಂ:ನಾನು ನಕ್ಸಲೈಟ್​ ಆಗಲು ಬಯಸಿದ್ದೆ ಎಂದು ವಿಶಾಖಪಟ್ಟಣಂ ಡಿಐಜಿ ಎಲ್​ಕೆವಿ ರಂಗಾ ರಾವ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಮಾಜ ಹೋಗುತ್ತಿರುವ ಮಾರ್ಗವನ್ನು ತಡೆದು, ಅದಕ್ಕೊಂದು ಆಕಾರ ನೀಡಲು ನಕ್ಸಲಿಸಂ ಒಂದೇ ಮಾರ್ಗ ಎಂದು ಅಂದುಕೊಂಡಿದ್ದೆ ಎಂದು ವಿಜಯನಗರಂ ಜಿಲ್ಲೆಯ ಕೊಟ್ಟವಲಸ ಮಂಡಲದ ಮಂಗಳಪಾಳೇಮ್​ ಗ್ರಾಮದಲ್ಲಿ ಶನಿವಾರ ಶ್ರೀ ಗುರುದೇವ ಚಾರಿಟಬಲ್ ಟ್ರಸ್ಟ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಂಗಾ ರಾವ್​ ಮಾತನಾಡಿದರು. ​ಜಾತಿ, ಹಣ ಮತ್ತು ಭ್ರಷ್ಟಾಚಾರದಂತಹ ಭೂತಗಳು ಭಾರತದಲ್ಲಿ ಹೆಚ್ಚಾಗಿವೆ. ಇಡೀ ದೇಶವನ್ನು ನಿರ್ಗತಿಕ ಹಾದಿಗೆ ಕೊಂಡೊಯ್ಯುತ್ತಿವೆ ಎಂದಿರುವ ಅವರು ತಮ್ಮ ಹಿಂದಿನ ಘಟನೆಯನ್ನು ಮೆಲಕು ಹಾಕಿದ್ದಾರೆ. ಕೃಷ್ಣ ಜಿಲ್ಲೆಯ ಒಂದು ಸಣ್ಣ ಹಳ್ಳಿಯವರಾಗಿರುವ ರಂಗಾ ರಾವ್​, ತಮ್ಮ ಇಂಟರ್ನ್‌ಶಿಪ್ ದಿನಗಳಲ್ಲಿ ವೈದ್ಯರನ್ನು ಭೇಟಿಯಾಗಿ ನಕ್ಸಲರನ್ನು ಸೇರಲು ಕೇಳಿಕೊಂಡಿದ್ದರಂತೆ. ಆದರೆ, ತಮ್ಮ ನಿರ್ಧಾರ ತಪ್ಪು ಎಂಬುದು ವೈದ್ಯರ ಹೇಳಿದ ಮಾತಿನಿಂದಲೇ ಗೊತ್ತಾಗಿತ್ತಂತೆ.
ಇದನ್ನೂ ಓದಿ:7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…
ಬಳಿಕ ತಂದೆಯ ಆಸೆಯಂತೆ ಸಿವಿಲ್​ ಪರೀಕ್ಷೆಗೆ ತಯಾರಿ ನಡೆಸಿ 1993ರ ಬ್ಯಾಚ್​ನಲ್ಲಿ ಆಯ್ಕೆಯಾಗಿದ್ದಾಗಿ ರಂಗಾ ರಾವ್​ ಹೇಳಿದ್ದಾರೆ. ಯಾವ ಇಲಾಖೆ ಎಂಬುದು ಮುಖ್ಯವಲ್ಲ. ನಾನು ಕೆಲಸ ಮಾಡುತ್ತಿರುವ ಪೊಲೀಸ್​ ಇಲಾಖೆಯಲ್ಲೂ ನ್ಯಾಯ ಒದಗಿಸುವ ಗುರಿಯೊಂದಿಗೆ ನಡೆಯುತ್ತಿದ್ದೇನೆ. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ಅಂಬೇಡ್ಕರ್​ ಕನಸಾದ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದೇನೆಂದರು.
ಇದೇ ವೇಳೆ ಎಲ್ಲರೂ ತಮ್ಮ ಗುರಿಯಡೆಗೆ ಕೆಲಸ ಮಾಡಲು ಕರೆ ನೀಡಿದರು. ಆಂಧ್ರ ಪ್ರದೇಶದ ಹಲವು ಇಲಾಖೆಗಳಲ್ಲಿ ಕೆಲಸ ಮಾಡಿರುವ ರಂಗಾ ರಾವ್​ ಅವರು ಹಿಂದೊಮ್ಮೆ ನಕ್ಸಲ್​ ವಿರೋಧಿ ಕಾರ್ಯ ಪಡೆಯ ಮುಖ್ಯಸ್ಥರು ಆಗಿದ್ದರು.(ಏಜೆನ್ಸೀಸ್​)
ಪತ್ನಿಯದ್ದೇ ತಪ್ಪಿದ್ದರೂ ಡಿವೋರ್ಸ್​ ಕೊಟ್ಟರೆ ಲಕ್ಷಾಂತರ ರೂಪಾಯಿ ಜೀವನಾಂಶ ಕೊಡಬೇಕೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twenty =
Remember me
