ನಟಿ-ರಾಜಕಾರಣಿ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಮೋಕ್ಷ ಮಾಡಿರುವುದು ವ್ಯಾಪಕ ಗಮನ ಸೆಳೆದಿದೆ. ಘಟನೆ ಬಳಿಕ ಕಂಗನಾ ರಣಾವತ್ ತಾನು ಸೇಫ್ ಆಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಈ ಘಟನೆ ಬಳಿಕ ಸಿಐಎಸ್​ಎಫ್​ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಇದನ್ನು ಓದಿ:ಭಾರತ-ತೈವಾನ್​ ಉಭಯ ನಾಯಕರ ಮಾತುಕತೆ : ವಿರೋಧ ವ್ಯಕ್ತಪಡಿಸಿದ ಚೀನಾಕ್ಕೆ ತೈವಾನ್​ ಉತ್ತರಿಸಿದ್ದು ಹೀಗೆ
ಈ ಮಧ್ಯೆ ವಿವಾದದ ಬಗ್ಗೆ ಪ್ರಸಿದ್ಧ ಸಂಗೀತ ಸಂಯೋಜಕ ಮತ್ತು ಗಾಯಕ ವಿಶಾಲ್ ದಾದ್ಲಾನಿ ಪ್ರತಿಕ್ರಿಯಸಿದ್ದು, ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್​ಎಫ್​​​ ಸಿಬ್ಬಂದಿ ಬೆಂಬಲ ನೀಡಿರುವುದು ಕಂಡುಬಂದಿದೆ.
“ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ನಾನು ಈ ಸಿಐಎಸ್‌ಎಫ್‌ನ ಸಿಬ್ಬಂದಿ ಕೋಪದ ಅಗತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಸಿಬ್ಬಂದಿ ವಿರುದ್ಧ ಯಾವುದೇ ಕ್ರಮಕೈಗೊಂಡರೆ. ಅವರು ಅದನ್ನು ಸ್ವೀಕರಿಸಲು ಬಯಸಿದರೆ ಅವರಿಗೆ ಕೆಲಸ ಕಾಯುತ್ತಿದೆ ಎಂದು ನಾನು ಹೇಳಲು ಬಯಸುತ್ತೇನೆ. ಜೈಹಿಂದ್​.. ಜೈ ಜವಾನ್​.. ಜೈ ಕಿಸಾನ್​​..” ಎಂದು ವಿಶಾಲ್​ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​​)‘
ಕೆಲವರು ಮತ ಹಾಕಿದರೆ ಕೆಲವರು ಕಪಾಳಮೋಕ್ಷ ಮಾಡುತ್ತಾರೆ : ಸಂಜಯ್​ ರಾವತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
