ಚೆನ್ನೈ:ಇತ್ತೀಚೆಗಷ್ಟೇ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪವಿತ್ರ ಕ್ಷೇತ್ರ ಕಾಶಿಗೆ ಭೇಟಿ ನೀಡಿದ ಕಾಲಿವುಡ್​ ಸೂಪರ್​ಸ್ಟಾರ್​ ವಿಶಾಲ್​, ಅಲ್ಲಿನ ವ್ಯವಸ್ಥೆ ನೋಡಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.
ಟ್ವೀಟ್​ ಮಾಡಿರುವ ವಿಶಾಲ್​, ಆತ್ಮೀಯ ಮೋದಿಜಿ ನಾನು ಇತ್ತೀಚಿಗಷ್ಟೇ ಕಾಶಿಗೆ ಭೇಟಿ ನೀಡಿದ್ದೆ. ಒಳ್ಳೆಯ ದರ್ಶ ಮತ್ತು ಪೂಜೆ ಆಯಿತು. ಗಂಗಾನದಿಯ ಪವಿತ್ರ ನೀರಿನ ಸ್ಪರ್ಶವಾಯಿತು. ನೀವು ದೇವಾಲಯವನ್ನು ನವೀಕರಿಸಿ ಮತ್ತು ಅದನ್ನು ಇನ್ನಷ್ಟು ಅದ್ಭುತವಾಗಿ ಕಾಣುವಂತೆ ಮಾಡಿರುವ ನಿಮ್ಮ ಬದಲಾವಣೆಗಾಗಿ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ. ಯಾರೇ ಆಗಲಿ ಇಂದು ಕಾಶಿಗೆ ಸುಲಭವಾಗಿ ಭೇಟಿ ನೀಡಬಹುದು. ಇಷ್ಟೆಲ್ಲ ಬದಲಾವಣೆ ಮಾಡಿದ ನಿಮಗೆ ನನ್ನ ಹ್ಯಾಟ್ಸ್ ಆಫ್ ಮತ್ತು ಸೆಲ್ಯೂಟ್ ಎಂದು ವಿಶಾಲ್​ ಹೇಳಿದ್ದಾರೆ.
ಕಾಶಿ ಭೇಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ವಿಶಾಲ್​ ಶೇರ್​ ಮಾಡಿಕೊಂಡಿದ್ದು, ಬನಾರಸ್‌ನ ಬೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ನಂದಾ ಮತ್ತು ಕುಟುಂಬದೊಂದಿಗೆ ಚಹಾ ಕುಡಿಯುವುದು, ಕಾಶಿಗೆ ಆಧ್ಯಾತ್ಮಿಕ ಪ್ರವಾಸ ಮತ್ತು ನವ್ಯ ಕ್ಷಣಗಳು ಎಂದು ವಿಶಾಲ್​ ಬರೆದುಕೊಂಡಿದ್ದಾರೆ.
ವಿಶಾಲ್ ಅವರ ಆತ್ಮೀಯ ಸ್ನೇಹಿತ ಮತ್ತು ಅವರ ಮುಂಬರುವ ಚಿತ್ರಗಳ ನಿರ್ಮಾಪಕರಲ್ಲಿ ಒಬ್ಬರಾಗಿರುವ ನಟ ನಂದಾ ಅವರು ಪ್ರವಾಸದಲ್ಲಿ ನಟನ ಜೊತೆಯಲ್ಲಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ “ಲಾಠಿ” ಸೇರಿದಂತೆ ವಿಶಾಲ್​ ನಟನೆಯ ಅನೇಕ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಲಾಠಿ ಸಿನಿಮಾದಲ್ಲಿ ವಿಶಾಲ್​ ಪೊಲೀಸ್​ ಕಾನ್ಸ್​ಟೇಬಲ್​ ಪಾತ್ರದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಕುರಿಗಳ ಹಿಂಡಿನ ಮಧ್ಯೆ ಇರುವ ತೋಳವನ್ನು ಪತ್ತೆ ಹಚ್ಚುವಿರಾ?

ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸರ್ಕಾರಿ ಉದ್ಯೋಗ: ಸಿಎಂ ಬೊಮ್ಮಾಯಿ‌

ಕೊಹ್ಲಿಗೆ ಬಾಬರ್ ಮಾಡಿದ್ದ​ ಟ್ವೀಟ್​ ಕಾಪಿ ಮಾಡಿ ತಿರುಗೇಟು: ಅಮಿತ್​ ಮಿಶ್ರಾ ಮೇಲೆ ಅಫ್ರಿದಿಗೆ ಯಾಕಿಷ್ಟು ಕೋಪ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
