ವಿಶಾಖಪಟ್ಟಣ:ವಿಷಾನಿಲಕ್ಕೆ ಬಲಿಯಾದವರು 11 ಜನ. ಸಂಕಷ್ಟಕ್ಕೆ ಗುರಿಯಾದವರು ಐದಕ್ಕೂ ಹೆಚ್ಚು ಹಳ್ಳಿಗಳ ಎರಡು ಸಾವಿರಕ್ಕೂ ಅಧಿಕ ಜನರು. 800ಕ್ಕೂ ಅಧಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆದು ಸಾವಿನ ಕುಣಿಕೆಯಿಂದ ಪಾರಾಗಿ ಬಂದಿದ್ದಾರೆ.
ಇದಷ್ಟೇ ಅಲ್ಲ, ಐದು ಹಳ್ಳಿಗಳಲ್ಲಿ ಮನೆಯಲ್ಲಿದ್ದವರನ್ನೆಲ್ಲ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇಂಥದ್ದೊಂದು ಕಾರ್ಖಾನೆಯೇ ನಮ್ಮೂರಲ್ಲಿ ಬೇಡ ಎಂದು ಮೃತದೇಹಗಳೊಂದಿಗೆ ಜನರು ಆರ್​.ಆರ್​. ವೆಂಕಟಾಪುರಂ ಗ್ರಾಮದಲ್ಲಿರುವ ಎಲ್​.ಜಿ. ಪಾಲಿಮರ್ಸ್​ ಎದುರು ಪ್ರತಿಭಟನೆಯನ್ನು ನಡೆಸಿದ್ದಾಗಿದೆ. ಇದಾಗಿ ಎಂಟು ದಿನಗಳೇ ಕಳೆದಿವೆ. ಆಂಧ್ರಪ್ರದೇಶ ಸರ್ಕಾರ ಈ ಘಟನೆಯ ತನಿಖೆಗೆ ಉನ್ನತಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ.
ಈ ನಡುವೆ, ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ಗೋಪಾಲಪಟ್ಟಣಂ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ ಪ್ರಕಾರ ದುರಂತಕ್ಕೆ ಯಾರೂ ಕಾರಣರಲ್ಲ… ಏಕೆಂದರೆ ಎಫ್​ಐಆರ್​ನಲ್ಲಿ ಕಂಪನಿಗೆ ಸಂಬಂಧಿಸಿದ ಯಾರ ಹೆಸರನ್ನು ಉಲ್ಲೇಖಿಸಲಾಗಿಲ್ಲ.ಇನ್ನೂ ವಿಚಿತ್ರವೆಂದರೆ, ದುರಂತಕ್ಕೆ ಸ್ಟೈರೀನ್​ ಅನಿಲ ಸೋರಿಕೆಯೇ ಕಾರಣವೆಂದು ಅಂದು ಹಿರಿಯ ಪೊಲೀಸ್​ ಅಧಿಕಾರಿಗಳು, ಜನಪ್ರತಿನಿಧಿಗಳು, ತಜ್ಞರಾದಿಯಾಗಿ ಎಲ್ಲರೂ ಹೇಳಿದ್ದರು. ಈ ಬಗ್ಗೆಯೂ ಎಫ್​ಐಆರ್​ನಲ್ಲಿ ಯಾವ ಮಾಹಿತಿ ಇಲ್ಲವಾಗಿದೆ.
ಪೊಲೀಸ್​ ದಾಖಲೆಗಳ ಪ್ರಕಾರ ಹೇಳುವುದಾರೆ, ಮೇ 7ರಂದು ಬೆಳಗಿನ ಜಾವ 3.30ರಲ್ಲಿ ಎಲ್​.ಜಿ. ಪಾಲಿಮರ್ಸ್​ ಕಾರ್ಖಾನೆಯಿಂದ ಹೊಗೆ ಬರುತ್ತಿತ್ತು. ಅದು ಭಾರಿ ದುರ್ವಾಸನೆಯಿಂದ ಕೂಡಿತ್ತು. ಅಕ್ಕಪಕ್ಕದ ಹಳ್ಳಿಗಳಿಗೂ ಇದು ವ್ಯಾಪಿಸಿತು. ಅಲ್ಲದೇ, ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತು. ಜನರು ಭಯದಿಂದ ಮನೆ ಬಿಟ್ಟು ಓಡಲಾರಂಭಿಸಿದರು. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನುತ್ತದೆ.
ಇದನ್ನೂ ಓದಿ;ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ
ಎಫ್​ಐಆರ್​ ದಾಖಲಿಸುವ ವೇಳೆಗಾಗಲೇ ಹತ್ತು ಜನರ ಸಾವು ಖಚಿತವಾಗಿದ್ದರೂ, 5 ಜನರ ಸಾವು ಎಂದು ಉಲ್ಲೇಖಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾರ್ಖಾನೆ ಆಡಳಿತ ಮಂಡಳಿಯ ಯಾರ ಹೆಸರನ್ನು ನಮೂದಿಸದೇ ಇರುವುದು ಇನ್ನಷ್ಟು ಶಂಕೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 3 =
Remember me
