ನವದೆಹಲಿ:ಕೆಂಪುಕೋಟೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪ್ರಸ್ತಾಪಿಸಿದ್ದ ಪಿಎಂ ವಿಶ್ವಕರ್ಮ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕುಶಲಕರ್ವಿುಗಳ ಬದುಕು ಉಜ್ವಲಗೊಳಿಸುವ ಉದ್ದೇಶದ 13 ಸಾವಿರ ಕೋಟಿ ರೂ. ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆ, ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ 57,613 ಕೋಟಿ ರೂ. ವೆಚ್ಚದ ಪಿಎಂ ಇ-ಬಸ್ ಸೇವೆ, ರೈಲ್ವೆ ಜಾಲ ಬಲಪಡಿಸುವ 35 ಸಾವಿರ ಕೋಟಿ ರೂ. ವೆಚ್ಚದ ಹೊಸ ರೈಲ್ವೆ ಯೋಜನೆ, 14,903 ಕೋಟಿ ರೂ. ವೆಚ್ಚದ
ಡಿಜಿಟಲ್ ಇಂಡಿಯಾ ವಿಸ್ತರಣೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಗುರು ಶಿಷ್ಯ ಪರಂಪರೆ ಮತ್ತು ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ, ಕುಶಲಕರ್ವಿುಗಳ ಕೆಲಸ ಪೋ›ತ್ಸಾಹಿಸಿ ಅವರನ್ನು ಬಲಪಡಿಸುವುದು ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ (2023-24ರಿಂದ 2027-28) ಅನ್ವಯವಾಗುವಂತೆ 13,000 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಈ ಯೋಜನೆ ಕುಶಲಕರ್ವಿುಗಳ ಉತ್ಪನ್ನಗಳು, ಅವರ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಹಾಗೂ ವಿಶ್ವಕರ್ಮರನ್ನು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಬೆಸೆಯಲಿದೆ. ಈ ಯೋಜನೆಯಡಿ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುವುದು. ಮೊದಲ ಹಂತದಲ್ಲಿ ಗರಿಷ್ಠ 1 ಲಕ್ಷ ರೂ., ಎರಡನೇ ಹಂತದಲ್ಲಿ 2 ಲಕ್ಷ ರೂ.ಗಳನ್ನು ಶೇ. 5 ಬಡ್ಡಿದರದೊಂದಿಗೆ ನೀಡಲಾಗುತ್ತದೆ.
ಯೋಜನೆಯಡಿ ಕೌಶಲವರ್ಧನೆ, ಉಪಕರಣ ಸಾಧನಗಳ ಕಿಟ್ ಪಡೆಯಲು ಸಹಾಯಧನ, ಡಿಜಿಟಲ್ ವಹಿವಾಟಿಗೆ ನೆರವು ಮತ್ತು ಮಾರುಕಟ್ಟೆ ಬೆಂಬಲವೂ ದೊರೆಯಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರಕುಶಲ ಮತ್ತು ಕುಶಲಕರ್ವಿುಗಳನ್ನು ಗುರಿಯಾಗಿಸಿ ಯೋಜನೆ ರೂಪಿಸಲಾಗಿದ್ದು, 18 ಸಾಂಪ್ರದಾಯಿಕ ಕುಲಕಸುಬುಗಳನ್ನು ಮಾಡುವವರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ನಗರಗಳಲ್ಲಿ ವಿದ್ಯುತ್​ಚಾಲಿತ ಬಸ್​ಗಳನ್ನು ಪಿಎಂ-ಇ-ಬಸ್ ಸೇವೆ ಹೆಚ್ಚಿಸಲಿದೆ. ಸಂಘಟಿತ ಬಸ್ ಸೇವೆಯನ್ನು ಹೊಂದಿರದ ನಗರಗಳಿಗೆ ಯೋಜನೆ ತಲುಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. 169 ನಗರಗಳಲ್ಲಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 10,000 ಇ-ಬಸ್​ಗಳನ್ನು ನಿಯೋಜಿಸಲಾಗುವುದು. ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ಸ್ ಯೋಜನೆ ಅಡಿಯಲ್ಲಿ 181 ನಗರಗಳಲ್ಲಿ ಮೂಲಸೌಕರ್ಯ ನವೀಕರಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಯೋಜನೆಯ ಒಟ್ಟು ವೆಚ್ಚ 57,613 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಕೇಂದ್ರ ಸರ್ಕಾರ 20,000 ಕೋಟಿ ರೂ. ನೀಡಲಿದೆ. ಈ ಮೂಲಕ 55,000ವರೆಗೆ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. 3 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಿಗೆ ಯೋಜನೆ ಅನ್ವಯವಾಗಲಿದೆ.
ಬಡಗಿಗಳು, ದೋಣಿ ತಯಾರಕರು, ಕಮ್ಮಾರರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಚಮ್ಮಾರರು, ರ್ದಜಿಗಳು, ಹೂ ಕಟ್ಟುವವರು, ದೋಬಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು ಹಾಗೂ ಕಲ್ಲುಕುಟಿಗರು, ಕ್ಷೌರಿಕರು, ಮೀನು ಬಲೆ ತಯಾರಕರು, ಪೊರಕೆ ತಯಾರಿಸುವವರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಾಲದ ನೆರವಿನೊಂದಿಗೆ ಫಲಾನುಭವಿ ಗಳಿಗೆ ಇತ್ತೀಚಿನ ತಂತ್ರಜ್ಞಾನದ ಸವಲತ್ತು ದೊರಕಲಿದ್ದು, ಕರಕುಶಲ ವಸ್ತುಗಳಿಗೆ ಇದರಿಂದ ಜಾಗತಿಕ ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಪ್ರವೇಶ ಸಿಗಲಿದೆ. ಕೌಶಲ ತರಬೇತಿಗೆ ಪ್ರತಿದಿನ 500 ರೂ. ಸ್ಟೈಪೆಂಡ್ ಪಡೆಯುವ ಅವಕಾಶವಿದೆ. ಹಾಗೆಯೇ ಆಧುನಿಕ ಸಾಧನಗಳ ಖರೀದಿಗೆ 15,000 ರೂ ನೀಡಲಾಗುತ್ತದೆ. ಈ ಯೋಜನೆಗೆ ಹಳ್ಳಿಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ನೋಂದಾಯಿಸಿಕೊಳ್ಳಬಹುದು.
ಡಿಜಿಟಲ್ ಇಂಡಿಯಾ ವಿಸ್ತರಣೆ:ಜನರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ಸೇವೆಗಳನ್ನು ತಲುಪಿಸುವ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಒಟ್ಟು 14,903 ಕೋಟಿ ರೂ ಮೀಸಲಿಡಲಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − thirteen =
Remember me
