ಬೆಂಗಳೂರು:ಅಂತಾರಾಷ್ಟ್ರೀಯ ಮಟ್ಟದ ಪವರ್​ಲಿಫ್ಟರ್​ ವಿಶ್ವನಾಥ್ ಭಾಸ್ಕರ ಗಾಣಿಗ ಸತತ ಮೂರನೇ ಸಲ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​ಷಿಪ್​ಗೆ ಆಯ್ಕೆ ಆಗಿದ್ದಾರೆ.
ಈ ಸಲ ನ್ಯೂಜಿಲೆಂಡ್​​ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​ಷಿಪ್​ನಲ್ಲಿ ವಿಶ್ವನಾಥ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2020 ಮತ್ತು 2021ರಲ್ಲಿ ನಡೆದ ರಾಷ್ಟ್ರಮಟ್ಟದ ಪವರ್​​ಲಿಫ್ಟಿಂಗ್​​ ಚಾಂಪಿಯನ್​ಷಿಪ್​​ನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅವರು ಈ ಅರ್ಹತೆ ಪಡೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕದಲ್ಲಿ 2017ರಲ್ಲಿ ನಡೆದ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​ಷಿಪ್​ನಲ್ಲಿ ವಿಶ್ವನಾಥ್ ಚಿನ್ನದ ಪದಕ ಗಳಿಸಿದ್ದರು. ಕೆನಡದಲ್ಲಿ 2019ರಲ್ಲಿ ನಡೆದ ಕಾಮನ್ವೆಲ್ತ್ ಪವರ್​​ಲಿಫ್ಟಿಂಗ್​ ಚಾಂಪಿಯನ್​​ಷಿಪ್​​ನಲ್ಲೂ ಅವರು ಚಿನ್ನದ ಪದಕ ಗಳಿಸಿದ್ದರು. ಮಾತ್ರವಲ್ಲ, ಇದೇ ಚಾಂಪಿಯನ್​ಷಿಪ್​ನಲ್ಲಿ 327.5 ಕೆ.ಜಿ. ಭಾರ ಎತ್ತುವ ಮೂಲಕ 8 ವರ್ಷದ ಹಳೇ ದಾಖಲೆ ಮುರಿದು ಭಾರತಕ್ಕೆ ಹೆಮ್ಮೆ ತಂದಿದ್ದರು.
ಈಗ ಆ ದಾಖಲೆ ಮುರಿದು ಹೊಸ ದಾಖಲೆ ಬರೆಯುವ ಗುರಿ ಇರಿಸಿಕೊಂಡಿರುವ ವಿಶ್ವನಾಥ್​ ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಅದಕ್ಕೆಂದೇ ಬೆಂಗಳೂರಿನ ಬಾಲರ್ಕ ಫಿಟ್​​ನೆಸ್​​ ಸೆಂಟರ್​ನಲ್ಲಿ ವಿಶೇಷವಾದ ತರಬೇತಿ ಪಡೆಯುತ್ತ ಅಭ್ಯಾಸ ನಡೆಸುತ್ತಿದ್ದಾರೆ.


ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + eleven =
Remember me
