ಗುರುವಾಯೂರು:ಆನೆಯ ಮುಂದೆ ನಿಂತು ವೆಡ್ಡಿಂಗ್​ ಫೋಟೋಶೂಟ್​ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೆರಳಿದ ಆನೆ ಮಾವುತನ ಮೇಲೆ ಅಟ್ಟಹಾಸ ಮೆರೆದ ಘಟನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ನವೆಂಬರ್​ 10ರಂದು ಬೆಳಗ್ಗೆ ದೇವಸ್ಥಾನ ದಕ್ಷಿಣ ದ್ವಾರದ ಬಳಿ ನಡೆದಿದೆ. ಆನೆಯ ಹೆಸರು ದಾಮೋದರ್​ ದಾಸ್​. ದೇವಸ್ಥಾನದ ಮೆರವಣಿಗೆಯ ಬಳಿಕ ಆನೆಯನ್ನು ಮರಳಿ ಕರೆತರಲಾಗುತ್ತಿತ್ತು. ಈ ವೇಳೆ ಅನೇಕ ಭಕ್ತರು ಸಹ ಅಲ್ಲಿಯೇ ಇದ್ದರು. ಕ್ಯಾಮೆರಾಮೆನ್​ ನವವಿವಾಹಿತರ ಫೋಟೋಶೂಟ್​ ನಡೆಸುತ್ತಿದ್ದರು.
ಇದ್ದಕ್ಕಿದ್ದಂತೆ ಕೆರಳಿದ ಆನೆ ಮೊದಲು ಮಾವುತನನ್ನು ಕೆಳಗೆ ಕೆಡವಿ, ದಂತದಿಂದ ಆತನನ್ನು ಮೇಲಕ್ಕೆ ಎತ್ತಿ ಬೀಸಾಡಿತು. ಮಾವುತನ ಅದೃಷ್ಟ ಚೆನ್ನಾಗಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾನೆ. ಆನೆಯ ಮೇಲೆ ಕುಳಿತ ಮತ್ತೊಬ್ಬ ಮಾವುತ ಆನೆಯನ್ನು ಸಮಾಧಾನಪಡಿಸಿದನು.
ಮೊದಲ ಮಾವುತ ಎ.ವಿ.ರಾಧಾಕೃಷ್ಣನ್ ಬಚಾವ್​ ಆಗಿದ್ದು ಪವಾಡವೇ ಸರಿ ಎಂದು ನೋಡುಗರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಆನೆಯನ್ನು ಹತೋಟಿಗೆ ತಂದು ದೇವಸ್ಥಾನದ ಆವರಣದಲ್ಲಿರುವ ಮರಕ್ಕೆ ಕಟ್ಟಿ ಹಾಕಲಾಯಿತು.(ಏಜೆನ್ಸೀಸ್​)
ವಿಡಿಯೋ ಕೃಪೆ: ಮಾತೃಭೂಮಿ ಯೂಟ್ಯೂಬ್​ ಚಾನೆಲ್​



ಬೀಡಿ ಹಚ್ಚಿಕೊಳ್ಳಲು ಬೆಂಕಿ ಕಡ್ಡಿ ಕೊಡದಿದ್ದಕ್ಕೆ ವೃದ್ಧನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ದುಷ್ಟ

ಆಡಿಯೋ ಕೇಳಿ ನನ್ನ ಮಗಳು ಶಾಕ್​ನಲ್ಲಿದ್ದು, ರೂಂ‌ಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು

ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:six + eighteen =
Remember me
