ವಿಶಾಖಪಟ್ಟಣಂ:ಈ ಯುವತಿ ಚಲಿಸುತ್ತಿದ್ದ ಬೈಕ್​ನ ಫ್ಯುಯೆಲ್​ ಟ್ಯಾಂಕ್​ ಮೇಲೆ ಕುಳಿತು ತನ್ನ ಬಾಯ್​ಫ್ರೆಂಡ್​ನ ತಬ್ಬಿಕೊಂಡಿದ್ದಳು. ಆದರೆ ಇದನ್ನು ಯಾರೋ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ನಂತರ ಈ ವಿಡಿಯೋ ವೈರಲ್​ ಕೂಡ ಆಗಿತ್ತು.
ಇದನ್ನು ಗಮನಿಸಿದ ಪೊಲೀಸರು ದೂರು ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಮಹಿಳೆಯನ್ನು ಕೆ ಶೈಲಜಾ (19) ಎಂದು ಗುರುತಿಸಲಾಗಿದ್ದು, ಪುರುಷನನ್ನು ಅಜಯ್ ಕುಮಾರ್ (22) ಎಂದು ಗುರುತಿಸಲಾಗಿದೆ.
ಇವರಿಬ್ಬರ ವಿರುದ್ಧ ನಿರ್ಲಕ್ಷ್ಯದ ಚಾಲನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸ್ಟೀಲ್ ಪ್ಲಾಂಟ್ ಪೊಲೀಸರು, ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸೆಕ್ಷನ್ 336, 279, 132 ಮತ್ತು 129 ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಹೆದ್ದಾರಿಯಲ್ಲಿ ನಿರ್ಲಕ್ಷ್ಯದಿಂದ ವಾಹ ಚಾಲನೆ ಮಾಡಿದ್ದಕ್ಕಾಗಿ ಮತ್ತು ಟ್ರಾಫಿಕ್‌ಗೆ ಅಡ್ಡಿಪಡಿಸಿದ ಇಬ್ಬರನ್ನೂ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಇಬ್ಬರ ಪೋಷಕರನ್ನು ಕರೆಸಿ ಕೌನ್ಸೆಲಿಂಗ್ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸಿ.ಎಚ್.ಶ್ರೀಕಾಂತ್ ‘ನಾಗರಿಕರು ಮತ್ತು ಅವರ ಕುಟುಂಬದವರು ಸಂಚಾರ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ವಾಹನಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
