ವಿಶಾಖಪಟ್ಟಣಂ:ಲಾಕ್​ಡೌನ್​ ನಡುವೆಯೂ ಘೋರ ದುರಂತವೊಂದಕ್ಕೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ. ಇಂದು(ಗುರುವಾರ) ಬೆಳಗ್ಗೆ ವಿಶಾಖಪಟ್ಟಣಂ ಜಿಲ್ಲೆಯ ಆರ್​. ಆರ್​. ವೆಂಕಟಪುರಂನ ಕೆಮಿಕಲ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ 9 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಮೂಲಗಳ ಪ್ರಕಾರ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್​ ಲೀಕ್​ ಆಗಿದೆ. ಇದರಿಂದಾಗಿಯೇ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ.
ಇದನ್ನೂ ಓದಿ:ಲಾಕ್​ಡೌನ್​ ನಡುವೆ ಘೋರ ದುರಂತ: ಏರುತ್ತಲೇ ಇದೆ ವಿಷಾನಿಲ ಸೋರಿಕೆಯಿಂದ ಮೃತರಾದವರ ಸಂಖ್ಯೆ
ಸ್ಟೈರೀನ್ ಗ್ಯಾಸ್​ ಎಂದರೇನು? ಯಾವುದಕ್ಕೆ ಬಳಸುತ್ತಾರೆ?ಸ್ಟೈರಿನ್​ ಗ್ಯಾಸ್​ ಒಂದು ಬಣ್ಣರಹಿತ ಸುಡುವ ದ್ರವವಾಗಿದ್ದು, ಇದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್​ ಪ್ಲ್ಯಾಸ್ಟಿಕ್​, ರಾಳ (ರೆಸಿನ್ಸ್​), ಫೈಬರ್​ಗ್ಲಾಸ್​, ರಬ್ಬರ್​ ಮತ್ತು ಲ್ಯಾಟೆಕ್ಸ್​ ತಯಾರಿಕೆಯಲ್ಲಿ ಬಳಸುತ್ತಾರೆ.
ಸ್ಟೈರೀನ್ ಹೊಂದಿರುವ ಗ್ರಾಹಕ ಉತ್ಪನ್ನಗಳುಪ್ಯಾಕೇಜಿಂಗ್​ ಮೆಟಿರೀಯಲ್ಸ್​, ವಿದ್ಯುತ್ ಬಳಕೆಗಾಗಿ ಇರುವ ಇನ್ಸುಲೇಶನ್​, ಮನೆ ಮತ್ತು ಇತರೆ ಕಟ್ಟಡಗಳ ಬಳಕೆಗಾಗಿ ಇರುವ ಇನ್ಸುಲೇಶನ್​, ಫೈಬರ್​, ಪ್ಲ್ಯಾಸ್ಟಿಕ್​ ಪೈಪ್ಸ್​, ಆಟೋಮೊಬೈಲ್​ ಬಿಡಿ ಭಾಗಗಳು, ಡ್ರಿಂಕಿಂಗ್​ ಕಪ್ಸ್​ ಹಾಗೂ ಇತರೆ ಆಹಾರ ಪದಾರ್ಥ ಬಳಸುವ ಸಾಮಾಗ್ರಿಗಳಲ್ಲಿ ಸ್ಟೈರಿನ್​ ಇರುತ್ತದೆ.
ಇದನ್ನೂ ಓದಿ:ವಿಷ ಅನಿಲ ಸೋರಿಕೆ ದುರಂತ; ಗೃಹಸಚಿವಾಲಯ, ಎನ್​ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ
ಸ್ಪೋಟಗೊಳ್ಳುವ ಸ್ಟೈರೀನ್ ಗ್ಯಾಸ್​ನಿಂದಾಗುವ ಪರಿಣಾಮಗಳುಸೋರಿಕೆಯಾದ ಸ್ಟೈರೀನ್ ಗ್ಯಾಸ್​ ಮಾನವನನ್ನು ಸ್ಪರ್ಶಿಸಿದರೆ, ಉಸಿರಾಟದ ತೊಂದರೆ ಎದುರಾಗುತ್ತದೆ. ಕಣ್ಣು, ಮೂಗು ಹಾಗೂ ಚರ್ಮದಲ್ಲಿ ಉರಿ ಮತ್ತು ಜಠರಗರುಳಿನ ಸಮಸ್ಯೆ ಉಂಟಾಗುತ್ತದೆ.(ಏಜೆನ್ಸೀಸ್​)
Very sad and disturbing news from Vizag. 2020 has been very harsh. Praying for the departed souls and for for a speedy recovery of those unwell.#VizagGasLeak#LGPolymerspic.twitter.com/mPMkk831zU
— Punit Agarwal 🇮🇳 (@Punitspeaks)May 7, 2020

ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
