ಚೆನ್ನೈ: ಬರೋಬ್ಬರಿ 40 ವರ್ಷದ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಬಳಸಿದ್ದ ಸುಜುಕಿ ಬೈಕ್ ಮೇಲೆ ಮತ್ತೆ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೋಟೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ..
ಇದನ್ನೂ ಓದಿ:ಚಿರತೆ ಅಟ್ಯಾಕ್​ನಿಂದ ಬೈಕ್​ ಸವಾರ ಗ್ರೇಟ್​ ಎಸ್ಕೇಪ್..ವೀಡಿಯೋ ವೈರಲ್
ತಮಿಳು ಚಿತ್ರರಂಗದಲ್ಲಿ 90 ವರ್ಷಗಳಿಂದ ಪಯಣ ನಡೆಸುತ್ತಿರುವ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಎವಿಎಂ,ಕಂಪನಿ ತನ್ನ ನಿರ್ಮಾಣದ ಸಿನಿಮಾಗಳಲ್ಲಿ ಬಳಸಿದ ವಾಹನಗಳನ್ನು ಮತ್ತೆ ಪ್ರದರ್ಶಿಸುತ್ತಿದೆ. ಇದರ ಭಾಗವಾಗಿ ರಜನಿಕಾಂತ್‌ ಬಳಸಿದ್ದ ಸುಜುಕಿ ಬೈಕ್‌ನಲ್ಲಿಯೇ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದರು
ಎವಿಎಂ ಪ್ರೊಡಕ್ಷನ್ ಕಂಪನಿಯು 1935ರಿಂದ ದಕ್ಷಿಣ ಭಾರತದ ಅತಿದೊಡ್ಡ ನಿರ್ಮಾಣ ಕಂಪನಿಯಾಗಿ ಹೊರಹೊಮ್ಮಿದೆ. ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ 175 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಣ ಸಂಸ್ಥೆಯಾಗಿ ಮುಂದುವರೆದಿದೆ.
ಇನ್ನು ಈ ಸಂಸ್ಥೆಯು ತಮಿಳು ಚಿತ್ರರಂಗದಲ್ಲಿ ಬಿಡುಗಡೆಯಾದ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ ಪ್ರಸ್ತುತಪಡಿಸಿದ್ದು.. 1983 ರಲ್ಲಿ ಬಿಡುಗಡೆಯಾದ ಎವಿಎಂ ನ 126 ನೇ ಚಿತ್ರ “ಪಾಯುಂ ಪುಲಿ”.. ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತು ರಾಧಾ ನಟಿಸಿದ್ದಾರೆ. ಎಸ್ ಪಿ ಮುತ್ತುರಾಮನ್ ನಿರ್ದೇಶನದ ಈ ಚಿತ್ರ ಭರ್ಜರಿ ಹಿಟ್‌ ಆಗಿತ್ತು. ವಿಶೇಷವೆಂದರೇ ಈ ಚಿತ್ರದಲ್ಲಿ ರಜನಿ ಸುಜುಕಿ ಬೈಕ್ ಅನ್ನು ಬಳಸಿದ್ದರು. 40 ವರ್ಷಗಳ ಹಿಂದಿನ ಈ ಬೈಕ್‌ನ್ನು ಎವಿಎಂ ಕಂಪನಿ ಇಂದಿಗೂ ಹಾಗೆಯೇ ಜೋಪಾನ ಮಾಡಿಕೊಂಡಿದೆ.
ಈ 40 ವರ್ಷಗಳ ಹಿಂದಿನ ಸುಜುಕಿ ಬೈಕ್ ಸದ್ಯ ಚೆನ್ನೈನಲ್ಲಿ ಕಂಪನಿ ನಡೆಸಿದ ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ. ಅಲ್ಲಿಗೆ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್ ಅವರು 40 ವರ್ಷಗಳ ಹಿಂದೆ ಪಾಯುಂ ಪುಲಿಯಲ್ಲಿ ತಾವು ಬಳಸಿದ್ದ ಬೈಕ್‌ನಲ್ಲಿಯೇ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದರು. ಇದೀಗ ಆ ಫೋಟೋವನ್ನು ಎವಿಎಂ ಕಂಪನಿ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದೆ.
ಗೂಗಲ್ ಮಹತ್ವದ ನಿರ್ಧಾರ: ಈ ಮ್ಯಾಟ್ರಿಮೋನಿ ಆ್ಯಪ್​ಗಳಿನ್ನು ಕಾರ್ಯನಿರ್ವಹಿಸುವುದಿಲ್ಲ..!​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
