ಚೆನ್ನೈ:ನಿನ್ನೆ (ಜೂ. 17) ಚೆನ್ನೈನ ನೀಲಂಕರೈನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಸೃಷ್ಟಿ ಮಾಡಿದೆ. ವಿಜಯ್​ ಅವರು ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿವೆ.
ವಿಜಯ್​ ರಾಜಕೀಯ ಎಂಟ್ರಿಯ ಚರ್ಚೆ ಬೆನ್ನಲ್ಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ವಿಜಯ್​ಗೆ ಬೆಂಬಲ ಸೂಚಿಸಿದ್ದಾರೆ.​ ಇದೇ ಸಂದರ್ಭದಲ್ಲಿ ಡಿಎಂಕೆ ವಿರುದ್ಧ ಗುಡುಗಿದ ಅಣ್ಣಾಮಲೈ, ನಟ ವಿಜಯ್​ರಂತಹವರು ರಾಜಕೀಯಕ್ಕೆ ಬರುವುದನ್ನು ಡಿಎಂಕೆಯಂತಹ ಪಕ್ಷಗಳು ಬಯಸುವುದಿಲ್ಲ ಎಂದು ಆರೋಪಿಸಿದ್ದು, ಅಣ್ಣಾಮಲೈ ಹೇಳಿಕೆ ತಮಿಳುನಾಡು ರಾಜಕೀಯ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ:ಬಸ್​ಗಳಲ್ಲಿ ನಾರಿಮಣಿಯರ ಶಕ್ತಿ: ರಾಜ್ಯದಲ್ಲಿ ಯೋಜನೆ ಜಾರಿ ಬಳಿಕ ಹೆಚ್ಚಿದ ಮಹಿಳಾ ಪ್ರಯಾಣಿಕರ ಸಂಖ್ಯೆ
ವಿಜಯ್​ರಂತಹ ಆತ್ಮಸಾಕ್ಷಿಯುಳ್ಳ ವ್ಯಕ್ತಿಯನ್ನು ನಾನು ರಾಜಕೀಯಕ್ಕೆ ಸ್ವಾಗತಿಸುತ್ತೇನೆ. ಅವರು ಬಹಳ ಮುಖ್ಯ ವ್ಯಕ್ತಿಯಾಗಿದ್ದಾರೆ ಮತ್ತು ಜನರು ಅವರನ್ನು ಅನುಸರಿಸುತ್ತಾರೆ. ರಾಜ್ಯ ರಾಜಕೀಯದಲ್ಲಿ ಅವರ ಧ್ವನಿ ತುಂಬಾ ಮುಖ್ಯವಾಗಿದೆ. ಆದರೆ, ತಮಿಳುನಾಡಿನಂತಹ ರಾಜ್ಯಗಳಲ್ಲಿ ವಿಜಯ್​ರಂತಹವರಿಗೆ ರಾಜಕೀಯ ಪ್ರವೇಶಿಸಲು ದೊಡ್ಡ ಶಕ್ತಿಗಳು ಅವಕಾಶ ನೀಡುವುದಿಲ್ಲ. ಅವರಿಗೆ ಆಸಕ್ತಿ ಇದ್ದರೆ ಖಂಡಿತ ರಾಜಕೀಯ ಸೇರಬೇಕು. ಅವರಂತಹವರನ್ನು ರಾಜಕೀಯಕ್ಕೆ ಬರದಂತೆ ತಡೆಯಲು ಡಿಎಂಕೆಯಂತಹ ಪಕ್ಷಗಳು ತಮ್ಮೆಲ್ಲ ಪ್ರಯತ್ನ ನಡೆಸಲಿವೆ ಎಂದು ಅಣ್ಣಾಮಲೈ ಹೇಳಿದರು.
ನಟ ವಿಜಯ್ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ರಾಜಕೀಯದ ವಿಷಯ ಬಗ್ಗೆ ಮಾತನಾಡಿದರು. ಲಂಚ ಪಡೆದು ಮತ ಚಲಾಯಿಸದಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ನೀವು ನಾಳಿನ ಮತದಾರರು. ನೀವು ಉತ್ತಮ ನಾಯಕರನ್ನು ಆಯ್ಕೆ ಮಾಡಲಿದ್ದೀರಿ. ನಾವು ನಮ್ಮ ಬೆರಳಿನಿಂದ ಏಕೆ ಮತ ಚಲಾಯಿಸುತ್ತೇವೆ? ಹಾಗೇ ನಾವು ಮತಕ್ಕಾಗಿ ಹಣವನ್ನು ಸ್ವೀಕರಿಸುವಾಗ ಅದೇ ಬೆರಳಿನಿಂದ ನಮ್ಮ ಕಣ್ಣುಗಳನ್ನು ಚುಚ್ಚುಕೊಳ್ಳುತ್ತೇವೆ. ಮತಕ್ಕಾಗಿ ಲಂಚ ಪಡೆಯಬೇಡಿ ಎಂದು ನಿಮ್ಮ ಪೋಷಕರಿಗೆ ಹೇಳಿ. ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಪೂರ್ಣತೆ ಬರುತ್ತದೆ ಎಂದು ವಿಜಯ್​ ಹೇಳಿದರು.
ಇದನ್ನೂ ಓದಿ:ಉಚಿತ ಪ್ರಯಾಣಕ್ಕಾಗಿ ಪುರುಷ ಅಂಗವಿಕಲರ ಕೂಗು
ಅಂದಹಾಗೆ ವಿಜಯ್​ ಅವರು ವಿಜಯ್ ಮಕ್ಕಳ್ ಇಯಕ್ಕಂ ಸಂಘಟನೆ ವತಿಯಿಂದ ಮಕ್ಕಳಿಗಾಗಿ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಚೆನ್ನೈನ ನೀಲಂಕರೈನಲ್ಲಿರುವ ಖಾಸಗಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಆಡಿದ ಮಾತುಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ವಿಜಯ್​ ರಾಜಕೀಯಕ್ಕೆ ಬರುವುದು ಖಚಿತ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ವಿಜಯ್​ ಖಚಿತಪಡಿಸಿಲ್ಲ. ಅವರು ರಾಜಕೀಯಕ್ಕೆ ಬರುತ್ತಾರೋ? ಇಲ್ಲವೋ? ಮುಂದಿನ ದಿನಗಳಲ್ಲಿ ತಿಳಿಯಲಿದೆ.(ಏಜೆನ್ಸೀಸ್​)
ಮರಳು ದಂಧೆಕೋರರಿಂದ ಹೆಡ್​ ಕಾನ್​ಸ್ಟೆಬಲ್ ಹತ್ಯೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್​

ಜಮ್ಮು-ಕಾಶ್ಮೀರ ಬಳಿಕ ಲಡಾಕ್, ಕಾರ್ಗಿಲ್​ನಲ್ಲೂ ವಿಆರ್​ಎಲ್: ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್-ಸಾರಿಗೆ ಕಂಪನಿ; ಡಾ. ವಿಜಯ ಸಂಕೇಶ್ವರ ಅವರಿಗೆ ವಿವಿಧ ಸಂಸ್ಥೆಗಳಿಂದ ಸನ್ಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eight =
Remember me
