ನವದೆಹಲಿ:ದೇಶೀಯ ಕರೊನಾ ನಿಗ್ರಹ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ (ಮಾನವರ ಮೇಲೆ ಪ್ರಯೋಗ) ಪ್ರಕ್ರಿಯೆ ಶುರುವಾಗಿದೆ. ಇದಕ್ಕಾಗಿ ಆರೋಗ್ಯವಂತ ವ್ಯಕ್ತಿಗಳ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.
ಮೊದಲ ಹಂತದಲ್ಲಿ ಒಟ್ಟಾರೆ 375 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗುತ್ತದೆ. ಈ ಪೈಕಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞನ ಸಂಸ್ಥೆ (ಏಮ್ಸ್​) ಗರಿಷ್ಠ ನೂರು ಜನರನ್ನು ನೋಂದಾಯಿಸಿಕೊಳ್ಳಲಿದೆ.
ಭಾರತೀಯ ಬೆಳಗಾವಿ ಸೇರಿ ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಈ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ. ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಕಂಪನಿ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​​) ಸಹಯೋಗದಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.
ಇದನ್ನೂ ಓದಿ;ಕರೊನಾಕ್ಕೆ ನಾವೇಕೆ ಹೆದರಬೇಕಿಲ್ಲ; ಸೆಪ್ಟಂಬರ್​ವರೆಗೆ ಹೇಗಿರಲಿದೆ ಪರಿಸ್ಥಿತಿ?
ಸೋಮವಾರ (ಜು.20) ನೋಂದಣಿಗೆ ಚಾಲನೆ ನೀಡಲಾಗುತ್ತದೆ. ಯಾವುದೇ ಆರೋಗ್ಯ ಸಂಬಂಧಿ ತೊಂದರೆ ಇಲ್ಲದ ನೂರು ಜನರನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಎಂದು ಏಮ್ಸ್​ ಪ್ರಾಧ್ಯಾಪಕ ಡಾ. ಸಂಜಯ್​ ರೈ ಹೇಳಿದ್ದಾರೆ.
ನೋಂದಾಯಿಸಿಕೊಳ್ಳಲು ಇಚ್ಛೆಯುಳ್ಳವರು 7428847499 ಕರೆ ಮಾಡಬಹುದು ಇಲ್ಲವೇ ಎಸ್​ಎಂಎಸ್​ ಕಳುಹಿಸಬಹುದು.[email protected]ಗೆ ಮೇಲ್​ ಕೂಡ ಕಳುಹಿಸಬಹುದು. ಅಭ್ಯರ್ಥಿಗಳು 18-55 ವರ್ಷದೊಳಗಿನವರಾಗಿರಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ
ಈಗಾಗಲೇ ಪಟನಾ ಏಮ್ಸ್​ನಲ್ಲಿ ಕ್ಲಿನಿಕಲ್​ ಟ್ರಯಲ್​ ಆರಂಭವಾಗಿದೆ. ಜತೆಗೆ, ಮೊಲದ ಹಾಗೂ ಎರಡನೇ ಹಂತ ಸೇರಿ ಒಟ್ಟಾರೆ 1,125 ಜನರನ್ನು ಆಯ್ಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಕಂಟೇನರ್​ನಲ್ಲಿ ಕೊಡ್ತಾರಾ ಕರೊನಾ ರೋಗಿಗಳಿಗೆ ಚಿಕಿತ್ಸೆ? ಹೇಗಿರುತ್ತೆ ಮಾಡ್ಯೂಲರ್​ ಐಸಿಯು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
