ನವದೆಹಲಿ:‘ಅಬ್ ಕಿ ಬಾರ್ 400 ಪಾರ್’ ಘೋಷಣೆಯೊಂದಿಗೆ ಲೋಕಸಭೆ ಚುನಾವಣೆಗೆ ಧುಮುಕಿದ್ದ ಬಿಜೆಪಿಗೆ ಬಿಗ್ ಶಾಕ್ ಎದುರಾಯಿತು. ಜನ ಪಕ್ಷದ ನಿರೀಕ್ಷೆಗಿಂತ ವಿಭಿನ್ನವಾಗಿ ನಿರ್ಣಯಿರುವುದು ಕಂಡುಬಂದಿದೆ.
ಇದನ್ನೂ ಓದಿ:ಮೋದಿಗೆ ಎನ್​ಡಿಎ ಸರ್ವಾನುಮತದ ಬೆಂಬಲ.. ರಾಷ್ಟ್ರಪತಿ ಭೇಟಿಗೆ ನಾಯಕರು – ಪ್ರಮಾಣ ವಚನ ಸ್ವೀಕರ ದಿನವೂ ಫಿಕ್ಸ್​!
2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಭದ್ರಪಡಿಸಿಕೊಂಡಿದ್ದರು. ಆದರೆ ಈ ಬಾರಿ ‘ಹೆಚ್ಚು’ ಸ್ಥಾನ ಪಡೆಯುವುದು ಖಚಿತ ಎಂದು ಪಕ್ಷ ಭಾವಿಸಿತ್ತಾದರೂ ನಿರೀಕ್ಷೆ ಹುಸಿಯಾಯಿತು. ಈ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಾಗಿತ್ತು.
ಕಳೆದ ಎರಡು ಚುನಾವಣೆಗಳಲ್ಲಿ ಅಂದರೆ 2014ರಲ್ಲಿ 44, 2019ರಲ್ಲಿ 52 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಶತಕದ ಗಡಿ (99) ತಲುಪಿದೆ. ಹಿಂದಿನದಕ್ಕೆ ಹೋಲಿಸಿದರೆ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕ ಶೇಕಡವಾರು ಮತದಾನ ಎಷ್ಟು? ವ್ಯತ್ಯಾಸ ಎಷ್ಟು? ಇದು ಈಗ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ.
ಹೆಚ್ಚಿದ ಕಾಂಗ್ರೆಸ್ ಮತಗಳಿಕೆ:ಚುನಾವಣಾ ಆಯೋಗದ ಪ್ರಕಾರ, ಈ ಬಾರಿ ಬಿಜೆಪಿ 36.6 ಶೇಕಡಾ ಮತಗಳನ್ನು ಪಡೆದಿದೆ. 2019ರಲ್ಲಿ ದಾಖಲಾದ ಶೇ.37.3ಕ್ಕೆ ಹೋಲಿಸಿದರೆ, ಈ ಬಾರಿ ಶೇ.0.70ರಷ್ಟು ಮಾತ್ರ ಮತದಾನದ ಪ್ರಮಾಣ ಕಡಿಮೆಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ದೊಡ್ಡ ಕುಸಿತವಲ್ಲ. ಆದರೆ, ಸೀಟುಗಳ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ನಷ್ಟವಾಗಿದೆ ಎನ್ನಬಹುದು.
ಇನ್ನು 2019 ರಲ್ಲಿ 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2024 ರಲ್ಲಿ 240 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಹಿಂದಿನ ಸ್ಥಾನಗಳಿಗೆ ಹೋಲಿಸಿದರೆ 63 ಸ್ಥಾನಗಳನ್ನು ಕಳೆದುಕೊಂಡಿದೆ. ಮ್ಯಾಜಿಕ್ ನಂಬರ್​ಗಿಂತ 32 ಸ್ಥಾನಗಳು ಕಡಿಮೆ ಬಂದಿದ್ದರಿಂದ ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಮಿತ್ರಪಕ್ಷಗಳ ಬೆಂಬಲ ಅನಿವಾರ್ಯವಾಯಿತು.
ಶೇ.1.7ರಷ್ಟು ಮತ ಹೆಚ್ಚಳ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.21.2ರಷ್ಟು ಮತಗಳು ಬಂದಿವೆ. 2019ರಲ್ಲಿ ದಾಖಲಾದ ಶೇ.19.5ಕ್ಕೆ ಹೋಲಿಸಿದರೆ ಈ ಬಾರಿ ಶೇ.1.7ರಷ್ಟು ಮತಗಳು ಹೆಚ್ಚಿವೆ. ಈ ಮತದಾನದ ಪ್ರಮಾಣ ಸ್ವಲ್ಪ ಹೆಚ್ಚಿದ್ದರೂ, ಸ್ಥಾನಗಳು ದ್ವಿಗುಣಗೊಂಡಿದೆ. 2019 ರಲ್ಲಿ ಕೇವಲ 52 ಸ್ಥಾನಗಳಿಗೆ ಸೀಮಿತವಾಗಿದ್ದ ಕಾಂಗ್ರೆಸ್ ಈಗ 99 ಸ್ಥಾನಗಳ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಕೆಲವು ಮಿತ್ರ ಪಕ್ಷಗಳಿಗೆ ಸೀಟುಗಳ ಹೆಚ್ಚಳದಿಂದ ಆಯಾ ರಾಜ್ಯಗಳಲ್ಲಿ ಬಿಜೆಪಿಗೆ ಸ್ಥಾನಗಳ ಸಂಖ್ಯೆಯಲ್ಲಿ ಸಾಕಷ್ಟು ಕಡಿಮೆಯಾಗಿದೆ. ಇದರಿಂದಾಗಿ ಎನ್‌ಡಿಎಯಲ್ಲಿನ ಮಿತ್ರಪಕ್ಷಗಳು ಸರ್ಕಾರ ರಚನೆಗೆ ಅತ್ಯಂತ ನಿರ್ಣಾಯಕ ಎನಿಸಿಕೊಂಡಿವೆ.
ಕೆಂಪುನೆಲದಲ್ಲಿ ಅರಳಿದ್ದೇಗೆ ಕಮಲ? ದೇವರನಾಡಿನ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − six =
Remember me
