ನವದೆಹಲಿ:ಮತದಾರರ ಡಿಜಿಟಲ್ ಗುರುತು ಚೀಟಿ (ಎಪಿಕ್ ಕಾರ್ಡ್) ಸೇರಿದಂತೆ ಮತದಾನ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ಬಗ್ಗೆ ಚುನಾವಣೆ ಆಯೋಗದ ತಜ್ಞರ ವಿವಿಧ ಸಮಿತಿಗಳು ಶಿಫಾರಸು ಮಾಡಿವೆೆೆ. ನಾಮಪತ್ರಗಳ ಸಲ್ಲಿಕೆಯನ್ನು ಕೂಡ ಡಿಜಿಟಲೀಕರಿಸಬೇಕೆನ್ನುವುದು (ಇ-ಫೈಲಿಂಗ್) ಸಮಿತಿಯ ಉದ್ದೇಶವಾಗಿದೆ.
ವಲಸೆ ಹೋದ ಮತದಾರರು ಪ್ರಜಾಪ್ರಭುತ್ವದ ಮಹತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಾತರಿಪಡಿಸಲು ಹೊಸ ರೀತಿಯ ಮತದಾನ ವಿಧಾನಗಳನ್ನು ಕಂಡುಕೊಳ್ಳುವುದು ಆಯೋಗದ ಇನ್ನೊಂದು ಮುಖ್ಯ ಆಶಯವಾಗಿದೆ. ಮತದಾನಕ್ಕೆ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮವನ್ನು ‘ಮೌನ ಅವಧಿ’ಗೆ (ಸೈಲಂಟ್ ಟೈಮ್ ಒಳಪಡಿಸುವ ಯೋಚನೆಯನ್ನೂ ಮಂಡಿಸಲಾಗಿದೆ. ಸದ್ಯ ಇದು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಮಾತ್ರ ಅನ್ವಯವಾಗುತ್ತಿದೆ.
ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಸಲಹೆ ನೀಡುವಂತೆ ಆಯೋಗ 2019ರ ಲೋಕಸಭಾ ಚುನಾವಣೆಗಳ ನಂತರ ಒಂಬತ್ತು ಸಮಿತಿಗಳನ್ನು ರಚಿಸಿತ್ತು. ಆಯೋಗದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಸಮಿತಿ ಗಳಲ್ಲಿದ್ದರು. ಈ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಆಯೋಗ 25 ಪ್ರಮುಖ ಶಿಫಾರಸುಗಳನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಮಾರ್ಚ್ 31ರವರೆಗೆ ಸಲಹೆಗೆ ಅವಕಾಶವಿದೆ. ಡಿಜಿಟಲ್ ವಾತಾವರಣದಲ್ಲಿ ಪ್ರತಿಯೊಬ್ಬ ಮತದಾರನಿಗೂ ಡಿಜಿಟಲ್ ಎಪಿಕ್ ಕಾರ್ಡ್ ನೀಡುವುದು ಅಗತ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಶಿಫಾರಸುಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nineteen =
Remember me
