ಪಟನಾ:ಬಿಹಾರ ವಿಧಾನಸಭೆಯ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಶುರುವಾಗಿದೆ. 78 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, 1,204 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 2.35 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ರಾಜ್ಯದ 15 ಜಿಲ್ಲೆಗಳಲ್ಲಿರುವ ಈ ವಿಧಾನಸಭಾ ಕ್ಷೇತ್ರಗಳ 33,782 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಎಲ್ಲ ಕಡೆ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಯಾವುದೇ ಅಡ್ಡಿ ಆತಂಕ ಎದುರಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಇದಕ್ಕೆ ಹೊರತಾಗಿ, ನಲಂದಾ ಜಿಲ್ಲೆಯ ಹಿಸುವಾ ಕ್ಷೇತ್ರದಲ್ಲಿನ ಎರಡು ಮತಗಟ್ಟೆಗಳಲ್ಲಿ ಮರುಮತದಾನ ಏರ್ಪಡಿಸಲಾಗಿದೆ. ನವೆಂಬರ್ 3ರಂದು ಎರಡನೇ ಹಂತದ ಮತದಾನವಾದ ಸಂದರ್ಭದಲ್ಲಿ ಇಲ್ಲಿ ಮತದಾನ ನಡೆದಿತ್ತು. ಆದರೆ, ಇವಿಎಂ ಕೊಂಡೊಯ್ಯುತ್ತಿದ್ದ ವಾಹನ ರಸ್ತೆ ಅಪಘಾತಕ್ಕೀಡಾದ ಕಾರಣ ಇವಿಎಂ ಹಾನಿಗೀಡಾಗಿತ್ತು. ಇದೇ ಕಾರಣಕ್ಕೆ ಇಲ್ಲಿ ಮರುಮತದಾನ ನಡೆಯುತ್ತಿದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ:Web Exclusive | ಗಣ್ಯರ ಹೆಸರಲ್ಲಿ ನಕಲಿ ಅಕೌಂಟ್ ಓಪನ್: ತುರ್ತು ನೆಪ ಹೇಳಿ ಹಣ ಕೀಳುವ ದಂಧೆಗಿಳಿದ ದುರುಳರು
ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್​ ಬಿಹಾರಿ ಗಂಜ್​ ಕ್ಷೇತ್ರದಿಂದ ಇದೇ ಮೊದಲ ಬಾರಿ ಸ್ಪರ್ಧಿಸಿದ್ದು, ರಾಜಕೀಯ ಭವಿಷ್ಯದ ಅದೃಷ್ಟ ಪರಿಶೀಲಿಸಲು ಮುಂದಾಗಿದ್ದಾರೆ. ಈ ಹಂತದಲ್ಲಿ ಜೆಡಿಯುವಿನ 37 ಅಭ್ಯರ್ಥಿಗಳು, ಬಿಜೆಪಿಯ 35, ವಿಕಾಸ್​ಶೀಲ್ ಇನ್ಸಾನ್ ಪಾರ್ಟಿಯ 5, ಹಿಂದುಸ್ತಾನಿ ಅವಾಂ ಮೋರ್ಚಾದ ಒಬ್ಬ ಅಭ್ಯರ್ಥಿ, ಲೋಕ ಜನಶಕ್ತಿ ಪಾರ್ಟಿಯ 42 ಅಭ್ಯರ್ಥಿಗಳು ಕಣದಲ್ಲಿದ್ದಾರೆ. (ಏಜೆನ್ಸೀಸ್)
ಗೆಲುವಿನ ಸನಿಹದಲ್ಲಿ ಬಿಡೆನ್ ಛಲ ಬಿಡದ ಟ್ರಂಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
