ಕೊಚ್ಚಿ:ಆರ್ಯ ಬಾಬು ಅಥವಾ ಬಡಾಯಿ ಬಂಗ್ಲೋ ಆರ್ಯ ಈ ಹೆಸರು ಕೇರಳದಲ್ಲಿ ತುಂಬಾ ಚಿರಪರಿಚಿತವಾಗಿರುವ ಹೆಸರು. ತನ್ನ ಆ್ಯಂಕರಿಂಗ್​ ಮತ್ತು ಕಾಮಿಡಿ ಶೋಗಳ ಮೂಲಕವೇ ಮಲಯಾಳಿಗಳ ಮನಗೆದ್ದಿರುವ ಆರ್ಯ, ಬಿಗ್​ಬಾಸ್​ ಶೋನಲ್ಲಿ ಭಾಗವಹಿಸಿದ ಬಳಿಕ ತನ್ನದೇಯಾದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಆರ್ಯ, ಅಭಿಮಾನಿಗಳ ಜತೆ ಆಗಾಗ ಮಾತುಕತೆ ಸಹ ನಡೆಸುತ್ತಾರೆ. ಕಾಂಜೀವರಂ ಎಂದು ಕರೆಯುವ ತನ್ನದೇ ಸ್ವತಂ ಸೀರೆ ಬ್ರ್ಯಾಂಡ್​ ಹೊಂದಿರುವ ಆರ್ಯ ಕೇರಳದಲ್ಲಿ ಸಿಕ್ಕಾಪಟ್ಟೆ ಫೇಮಸ್​. ಇದೀಗ ತಾನು ಎದುರಿಸಿದ ಕಹಿ ಘಟನೆಯೊಂದನ್ನು ಆರ್ಯ ಬಹಿರಂಗಪಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಮತ್ತು ಯೂಟ್ಯೂಬ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಕಂಪನಿಯ ನಂಬರ್​ಗೆ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡಿರುವ ಸಂಗತಿಯನ್ನು ಪ್ರಸ್ತಾಪ ಮಾಡಿದ್ದಾಳೆ.
ಆರೋಪಿಯು ಕಂಪನಿಯ ಅಧಿಕೃತ ಸಂಖ್ಯೆಗೆ ಕರೆ ಮಾಡುತ್ತಾನೆ. ಈ ವೇಳೆ ಮಹಿಳಾ ಉದ್ಯೋಗಿಯೊಬ್ಬರು ಕರೆ ಸ್ವೀಕರಿಸುತ್ತಾರೆ. ಬಳಿಕ ಮೊದಲು ಆರ್ಯ ಜತೆ ಮಾತನಾಡಬಹುದೇ ಎಂದು ಕೇಳುತ್ತಾನೆ. ಒಂದು ಪ್ರಾಜೆಕ್ಟ್​ ಬಗ್ಗೆ ಚರ್ಚಿಸಬೇಕಿತ್ತು ಎಂದು ಆರಂಭದಲ್ಲಿ ಹೇಳುತ್ತಾನೆ. ಆದರೆ, ಆತನ ಸಂಭಾಷಣೆ ಇದ್ದಕ್ಕಿದ್ದಂತೆ ಅಶ್ಲೀಲತೆಗೆ ತಿರುಗುತ್ತದೆ. ನೀವು ತಿರುವನಂತಪುರದಲ್ಲಿದ್ದೀರಾ ಎಂದು ಕೇಳುತ್ತಾನೆ. ಇಲ್ಲ ಕಾಸರಗೋಡಿನಲ್ಲಿದ್ದೇನೆ ಎಂದು ಮಹಿಳೆ ಹೇಳಿದಾಗ, ತಿರುವನಂತಪುರಕ್ಕೆ ಬಂದಾಗ ಭೇಟಿಯಾಗ್ತೀರಾ ಎಂದು ಕೇಳುತ್ತಾನೆ. ಉದ್ಯೋಗಿಯು ವ್ಯಕ್ತಿಯ ವಿಳಾಸವನ್ನು ಕೇಳುತ್ತಿರುವುದನ್ನು ವಿಡಿಯೋದಲ್ಲಿ. ಅಶ್ಲೀಲ ಸಂಭಾಷಣೆಯನ್ನು ಮುಂದುವರಿಸುವ ಕಾಮುಕ ತಾನು ನಿನ್ನೊಂದಿಗೆ ಮಾತನಾಡುತ್ತಾ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾನೆ. ಇದರಿಂದ ಮಹಿಳಾ ಉದ್ಯೋಗಿ ಒಂದು ಕ್ಷಣ ಗಾಬರಿಯಾಗಿಬಿಡುತ್ತಾಳೆ ಮತ್ತು ಫೋನ್​ ಸಂಭಾಷಣೆ ಅಲ್ಲಿಗೆ ಮುಗಿಯುತ್ತದೆ.
ಈ ಬಗ್ಗೆ ಮಾತನಾಡಿರುವ ಆರ್ಯ, ಈ ವಿಡಿಯೋವನ್ನು ಕಾಮುಕನ ಫೋನ್ ನಂಬರ್‌ ಸಮೇತ ಪೊಲೀಸರಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ತೃಕ್ಕಾಕರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಇಂಟರ್‌ನೆಟ್ ಕರೆ ಮಾಡಿರುವುದಾಗಿ ತಿಳಿದುಬಂದಿದೆ. ಆತ ಸಿಕ್ಕಿಬೀಳಬಹುದು ಎಂಬ ಭರವಸೆ ಇದೆ ಎಂದು ಆರ್ಯ ವಿಡಿಯೋದಲ್ಲಿ ವಿವರಿಸಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 14 =
Remember me
