ನವದೆಹಲಿ:ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಿತವಾದ ಜಗತ್ತಿನ ಅತಿದೊಡ್ಡ ಕ್ರೀಡಾಂಗಣವಾದ ಮೊಟೆರಾ ಸ್ಟೇಡಿಯಂನಲ್ಲಿ ನಾಳೆ ನಮಸ್ತೆ ಟ್ರಂಪ್​ ಕಾರ್ಯಕ್ರಮ ನಡೆಯಲಿದ್ದು, ಅಲ್ಲೆಲ್ಲ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ಮೊಟೆರಾ ಕ್ರೀಡಾಂಗಣವನ್ನು ವಿವಿಐಪಿಗಳು ಅಂದರೆ ಡೊನಾಲ್ಡ್​ ಟ್ರಂಪ್, ಮೋದಿ ಮತ್ತಿತರ ವಿಶೇಷ ಗಣ್ಯರು ಪ್ರವೇಶ ಮಾಡುವುದಕ್ಕಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಪ್ರವೇಶ ದ್ವಾರ ಇಂದು ಬೆಳಗ್ಗೆ ಕುಸಿದುಬಿದ್ದಿದೆ. ಜೋರಾಗಿ ಗಾಳಿ ಬೀಸಿದ ಕಾರಣ ಈ ತಾತ್ಕಾಲಿಕ ಪ್ರವೇಶ ಗೇಟ್​ ಕೆಳಗೆ ಬಿದ್ದಿದೆ ಎಂದು ಹೇಳಲಾಗಿದೆ.
ವಿವಿಐಪಿ ಗೇಟ್​ ಗಾಳಿಯಿಂದ ಕುಸಿದಿದ್ದನ್ನು ಅಲ್ಲಿಯೇ ಇದ್ದವರೊಬ್ಬರು ವಿಡಿಯೋ ಮಾಡಿದ್ದಾರೆ. ನಂತರ ಇದನ್ನು ಸ್ಥಳೀಯ ಸುದ್ದಿ ಚಾನೆಲ್​ಗಳಲ್ಲಿ ಪ್ರಸಾರ ಮಾಡಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್​ ಯಾರೂ ಗಾಯಗೊಂಡಿಲ್ಲ.ಈ ಗೇಟ್​ನ್ನು ವೆಲ್ಡ್ ಮಾಡಿದ ಸ್ಟೀಲ್​ ರಾಡ್​ಗಳಿಂದ ನಿರ್ಮಿಸಲಾಗಿತ್ತು. ಅದನ್ನು ಬ್ಯಾನರ್​, ಫ್ಲೆಕ್ಸ್​ಗಳಿಂದ ಮುಚ್ಚಲಾಗಿತ್ತು. ಇದೊಂದು ದೊಡ್ಡ ಘಟನೆಯಲ್ಲ ಎಂದು ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದೊಂದೇ ಅಲ್ಲ, ಕ್ರೀಡಾಂಗಣದ ಮುಖ್ಯ ಪ್ರವೇಶ ದ್ವಾರವೂ ಗಾಳಿಯಿಂದ ಕುಸಿದುಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ಕೂಡ ಯಾರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ.
ಡೊನಾಲ್ಡ್​ ಟ್ರಂಪ್​ ಮತ್ತವರ ಪತ್ನಿ ಮೆಲಾನಿಯಾ ಅವರು ನಾಳೆ ಬೆಳಗ್ಗೆ 11 ಗಂಟೆಯಷ್ಟೊತ್ತಿಗೆ ಅಹಮದಾಬಾದ್​ ತಲುಪಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
