ಮುಂಬೈ:ಮಹಾರಾಷ್ಟ್ರ ಸಚಿವರಾದ ನವಾಬ್​ ಮಲಿಕ್​ ಮತ್ತೆ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. ಜನರನ್ನು ನಕಲಿ ಕೇಸುಗಳಲ್ಲಿ ಸಿಕ್ಕಿಹಾಕಿಸುವುದಕ್ಕಾಗಿ ಅವರ ಮನೆಗಳಲ್ಲಿ ಡ್ರಗ್ಸ್​ ಪ್ಲಾಂಟ್​ ಮಾಡಲು ಅವರದ್ದೇ ಆದ ಖಾಸಗಿ ಪಡೆಯನ್ನು ವಾಂಖೆಡೆ ಹೊಂದಿದ್ದಾರೆ ಎಂದಿದ್ದಾರೆ.
ಫ್ಲೆಚ್ಚರ್ ಪಟೇಲ್, ಕೆ.ಪಿ.ಗೋಸಾವಿ, ಆದಿಲ್ ಉಸ್ಮಾನಿ ಈ ‘ವಾಂಖೆಡೆ ಗ್ಯಾಂಗ್​’ನ ಭಾಗವಾಗಿದ್ದಾರೆ ಎಂದಿರುವ ಮಲಿಕ್​, ಶಾರುಖ್ ಪುತ್ರ ಆರ್ಯನ್​ ಖಾನ್​ ಆರೋಪಿಯಾಗಿರುವ ಕ್ರೂಸ್​ ಶಿಪ್​ ದಾಳಿಯಲ್ಲಿ ಯಾವುದೇ ಡ್ರಗ್ಸ್​ ಸಿಕ್ಕಿರಲಿಲ್ಲ. ನಂತರದಲ್ಲಿ ವಾಂಖೆಡೆ ಕಚೇರಿಯಲ್ಲಿ ಡ್ರಗ್ಸ್​ ಚಿತ್ರಗಳನ್ನು ತೆಗೆದು ಸೇರಿಸಲಾಗಿದೆ ಎಂದು ಆಪಾದಿಸಿದ್ದಾರೆ. ಕ್ರೂಸ್​ ಶಿಪ್​​ಗೆ ರೆಸ್ಟೊರೆಂಟ್​ ಒಂದರ ಕೇಟರಿಂಗ್​ ಸರ್ವೀಸ್​ ಮೂಲಕ ಡ್ರಗ್ಸ್​ ಕಳುಹಿಸಲಾಗಿತ್ತು ಎಂದು ಆರೋಪಿಸಿರುವ ಮಲಿಕ್​​, ವಾಂಖೆಡೆ ವಿರುದ್ಧದ ತಮ್ಮ ಹೇಳಿಕೆಗಳನ್ನು ಸಮರ್ಥಿಸಲು ಶೀಘ್ರವೇ ಪುರಾವೆಗಳನ್ನು ಒದಗಿಸಿ, ಅವರನ್ನು ಎಕ್ಸ್​ಪೋಸ್​ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಎನ್​​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಜಾತಿ ತನಿಖೆಗೆ ಸಿದ್ಧ ಎಂದ ಮಹಾ ಸರ್ಕಾರ
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ, ಡ್ರಗ್​ ಪೆಡ್ಲರ್​ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾಂಖೆಡೆಯನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದಿದೆ. ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ(ಎನ್​ಸಿಪಿ)ಯ ನಾಯಕರೂ ಆದ ಮಲಿಕ್​ರ ಅಳಿಯ ಸಮೀರ್​ ಖಾನ್​ರ ಮೇಲೂ ಮುಂಬೈ ಎನ್​ಸಿಬಿ ಜನವರಿಯಲ್ಲಿ ಡ್ರಗ್​ ಪೆಡ್ಲಿಂಗ್ ಕೇಸು ದಾಖಲಿಸಿತ್ತು ಎನ್ನಲಾಗಿದೆ.(ಏಜೆನ್ಸೀಸ್)
VIDEO| ಪವರ್​ ಸ್ಟಾರ್​ ಪುನೀತ್​ ನಿಧನಕ್ಕೆ ಪುಟಾಣಿ ಅಭಿಮಾನಿ ಕಣ್ಣೀರು
ವರದಕ್ಷಿಣೆ ಕೇಸು ಹಾಕಿದ ಮಹಿಳೆಯನ್ನು ಹಾಡುಹಗಲೇ ಗುಂಡಿಕ್ಕಿ ಕೊಂದರು


ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 × one =
Remember me
