ಮುಂಬೈ:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಜೈಲಿನಿಂದಲೇ ತನ್ನ ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್​ಗೆ ಪತ್ರ ಬರೆಯುತ್ತಿದ್ದ ಸುಕೇಶ್​​ ಇದೀಗ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಸುಕೇಶ್‌ ಚಂದ್ರಶೇಖರ್‌ ಅವರು, ಒಡಿಶಾ ರೈಲು ಅಪಘಾತದಲ್ಲಿನ ಸಂತ್ರಸ್ತರಿಗೆ 10 ಕೋಟಿ ರೂ. ದೇಣಿಗೆ ನೀಡಲು ಬಯಸುತ್ತೇನೆ. ಅನುಮತಿ ನೀಡಿ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:ನಾನು ನೀಡುತ್ತಿರುವ ಈ ಹಣ ನನ್ನ ವೈಯಕ್ತಿಕ ನಿಧಿಯಿಂದ ಬಂದಿದೆ. ಇದು ನನ್ನ ಕಾನೂನುಬದ್ಧವಾಗಿ ಗಳಿಕೆ ಮಾಡಿರುವ ಹಣವಾಗಿದೆ. ಈ ಹಣಕ್ಕೆ ಸಂಪೂರ್ಣವಾಗಿ ತೆರಿಗೆ ಕಟ್ಟಲಾಗಿದೆ. ನಮ್ಮ ಸರ್ಕಾರವು ಈಗಾಗಲೇ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲವನ್ನು ಒದಗಿಸುತ್ತಿದೆ. ನಾನು ಜವಾಬ್ದಾರಿಯುತ ಮತ್ತು ಉತ್ತಮ ನಾಗರಿಕನಾಗಿ ಈ 10 ಕೋಟಿ ರೂ.ಗಳ ನಿಧಿಯನ್ನು ಆ ಕುಟುಂಬಗಳಿಗೆ / ಮಕ್ಕಳಿಗೆ, ನಮ್ಮ ಭವಿಷ್ಯದ ಯುವಕರಿಗೆ ವಿಶೇಷವಾಗಿ ಬಳಸಲು ನಿಧಿಯಾಗಿ ನೀಡುತ್ತಿದ್ದೇನೆ. ಯಾರು ತಮ್ಮ ಪ್ರೀತಿಪಾತ್ರರನ್ನು/ತಮ್ಮ ಕುಟುಂಬದ ಅನ್ನದಾತರನ್ನು ಕಳೆದುಕೊಂಡಿದ್ದಾರೆ. ಮೃತರ ಪ್ರತಿ ಮಗುವಿನ ಶಿಕ್ಷಣದ ವೆಚ್ಚಗಳಿಗಾಗಿ ನಿರ್ದಿಷ್ಟವಾಗಿ ಬಳಸಬೇಕಾದ ಕೊಡುಗೆ, ಶಾಲೆ, ಪ್ರೌಢಶಾಲೆ, ಕಾಲೇಜು ಶಿಕ್ಷಣಕ್ಕೆ ಬಳಸಲು ದೇಣಿಗೆ ನೀಡುತ್ತೇನೆ, ”ಎಂದು ಅವರ ಪತ್ರದಲ್ಲಿ ಬರೆಯಲಾಗಿದೆ.
ಪ್ರಧಾನಿಯವರ ನೇತೃತ್ವದ ನಮ್ಮ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಿ, ಜತೆಯಾಗಿ ನಿಂತಿರುವುದನ್ನು ನೋಡುವುದು ತುಂಬಾ ಹೆಮ್ಮೆಯಾಗಿದೆ. ಈ ಅಪಘಾತವಾಗಲು ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ನಮ್ಮ ಸಂಸ್ಥೆಯಾದ ಶಾರದಾ ಫೌಂಡೇಶನ್, ಚಂದ್ರಶೇಖರ್ ಕ್ಯಾನ್ಸರ್ ಫೌಂಡೇಶನ್, ಎಲ್ಎಸ್ ಎಜುಕೇಶನ್, ದೇಶದ ದಕ್ಷಿಣ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ಟ್ರಿಪಲ್ ರೈಲು ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ ಮತ್ತು 1,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಅಪಘಾತದ ತನಿಖೆಯನ್ನು ಪ್ರಾರಂಭಿಸಿದೆ.
ಬುದ್ಧಿವಂತರಿಗೆ ಮಾತ್ರ; ಈ ಚಿತ್ರದಲ್ಲಿರುವ 13 ಪ್ರಾಣಿಗಳನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
