ವಾರಂಗಲ್​:ತೆಲಂಗಾಣದ ದಮೇರಾ ಮಂಡಲದಲ್ಲಿರುವ ಪೇಸರಗೊಂಡ ರಸ್ತೆಯಲ್ಲಿ ಬುಧವಾರ ಕಾರು ಮತ್ತು ಮರಳಿನ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಮರಳಿನ ಲಾರಿ ಕಲೆಶ್ವರಂನಿಂದ ವಾರಂಗಲ್​ ಕಡೆಗೆ ತೆರಳುತ್ತಿತ್ತು. ಕಾರು ವಾರಂಗಲ್​ನಿಂದ ಪರ್ಕಲ್​ಗೆ ಪ್ರಯಾಣ ಬೆಳೆಸಿತ್ತು. ವಾರಂಗಲ್​ನಲ್ಲಿ ಬರ್ತಡೇ ಪಾರ್ಟಿಯನ್ನು ಮುಗಿಸಿದ ಯುವಕರು ಪರ್ಕಲ್​ಗೆ ಮರಳುವಾಗ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!
ಪ್ರಾಥಮಿಕ ತನಿಖೆಯ ಪ್ರಕಾರ ಕಾರು ಬೇರೊಂದು ವಾಹನವನ್ನು ಓವರ್​ಟೇಕ್​ ಮಾಡಲು ಹೋಗಿ ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಮೃತರಾದ ಐವರು ಯುವಕರನ್ನು ಪವನ್​, ರಾಕೇಶ್​, ಚಂದು, ರೋಹಿತ್​ ಮತ್ತು ಸಬೀರ್​ ಎಂದು ಗುರುತಿಸಲಾಗಿದೆ.
ಕಾರಿನ ಬಾನೆಟ್ ಸಂಪೂರ್ಣ​ ನುಜ್ಜುಗುಜ್ಜಾಗಿರುವುದರಿಂದ ಅಪಾಯದಿಂದ ಯುವಕರು ಪಾರಾಗುವ ಯಾವುದೇ ಅವಕಾಶವೂ ದೊರೆತಿಲ್ಲ. ಬುಧವಾರ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಮೃತ ಯುವಕರೆಲ್ಲ ಬೇರೆ ಬೇರೆ ಕುಟುಂಬದವರು. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.(ಏಜೆನ್ಸೀಸ್​)
ನವಭಾರತಕ್ಕಾಗಿ ಮಿಷನ್​ ಕರ್ಮಯೋಗಿ; ನಾಗರಿಕ ಸೇವಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + four =
Remember me
