ಜಿನೀವಾ:ಹೆಚ್ಚು ಹಾವಳಿ ನಡೆಸುತ್ತಿರುವ ಮೂಲ ಒಮಿಕ್ರಾನ್ ಪ್ರಭೇದದ ಉಪತಳಿ ಬಿಎ.2 ಜಾಗತಿಕವಾಗಿ ಹರಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳಿದೆ. ಆದರೆ, ಈಗಾಗಲೇ ಒಮಿಕ್ರಾನ್ ಸೋಂಕಿತರಲ್ಲಿ ಅದರಿಂದ ಮರುಸೋಂಕು ಉಂಟಾಗುತ್ತದೆಯೋ ಅಥವಾ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದೆ. ಪ್ರಸ್ತುತ ಮೇಲುಗೈ ಪಡೆದಿರುವ ಬಿಎ.1 ತಳಿಗಿಂತ ಬಿಎ.2 ಉಪರೂಪಾಂತರಿಯು ಅಧಿಕ ಸೋಂಕುಕಾರಕ ಎಂದು ಡಬ್ಲ್ಯುಎಚ್​ಒ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥೆ ಮಾರಿಯಾ ವಾನ್ ಕೆರ್​ಖೋವ್ ಮಂಗಳವಾರ ಹೇಳಿದ್ದಾರೆ. ಸದ್ಯಕ್ಕೆ ಲಭ್ಯವಾದ ಸೂಚನೆ ಪ್ರಕಾರ, ಎರಡೂ ಪ್ರಭೇದಗಳಿಂದ (ಮೂಲ ಹಾಗೂ ಉಪ-ತಳಿ) ಸೋಂಕಿನ ತೀವ್ರತೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎಂದು ವಿವರಿಸಿದ್ದಾರೆ.
ಹೊಸ ನಾಸಿಕ ಸ್ಪ್ರೇ ಮಾರುಕಟ್ಟೆಗೆ ಅನುಮತಿ:ಕರೊನಾ ವೈರಸ್ ನಾಶಕ್ಕೆಂದು ಗ್ಲೆನ್​ವಾರ್ಕ್ ಫಾರ್ವಸ್ಯೂಟಿಕಲ್ಸ್ ಅಭಿವೃದ್ಧಿ ಪಡಿಸಿದ ‘ಫಾಬಿಸ್ಪ್ರೇ’ ನಾಸಿಕಕ್ಕೆ ಸಿಂಪಡಿಸುವ ಔಷಧಕ್ಕೆ ಭಾರತ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದು, ಸೋಂಕು ನಿಯಂತ್ರಣ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಈ ಔಷಧವು ರೋಗಾಣು ವಿರುದ್ಧ ಭೌತಿಕ ಹಾಗೂ ರಾಸಾಯನಿಕ ತಡೆಯಾಗಿ ವರ್ತಿಸುತ್ತದೆ. ‘ಗಾಳಿ ಒಳಹೋಗುವ ಮಾರ್ಗದಲ್ಲಿ ಅದು ಕೋವಿಡ್ ವೈರಸ್​ಅನ್ನು ಕೊಲ್ಲುತ್ತದೆ’ ಎಂದು ಕಂಪನಿ ತಿಳಿಸಿದೆ. ಐರೋಪ್ಯ ಒಕ್ಕೂಟದಿಂದ ಇದಕ್ಕೆ ‘ಸಿಇ’ ಮಾರ್ಕ್ ಲಭ್ಯವಾಗಿದೆ. ವೈದ್ಯಕೀಯ ಸಾಧನದ ಮಾರುಕಟ್ಟೆಗೆ ನೀಡುವ ಅನುಮೋದನೆಗೆ ಅದು ಸಮಾನವಾಗಿದೆ. ಬಹರೇನ್ ಮತ್ತು ಇಸ್ರೇಲ್​ನಲ್ಲಿ ಅದನ್ನು ‘ಎನ್​ವಾಯ್್ಡ ಹೆಸರಿನಲ್ಲಿ ಮಾರಲಾಗುತ್ತಿದೆ. ವೈರಸ್ ಪ್ರಮಾಣ ಸ್ಪ್ರೇ ಹಾಕಿದ 24 ಗಂಟೆಯಲ್ಲಿ ಶೇಕಡ 94 ಹಾಗೂ 48 ಗಂಟೆಯಲ್ಲಿ ಶೇಕಡ 99ರಷ್ಟು ಕಡಿಮೆಯಾಗುತ್ತದೆ ಎಂದು ಕಂಪನಿ ವಿವರಿಸಿದೆ.
ಬುಧವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ ಪಾಸಿಟಿವಿಟಿ ದರ ಶೇ. 4.5ಕ್ಕೆ ಇಳಿಕೆ ಆಗಿದೆ. ಮಂಗಳವಾರ ಶೇ. 5.2 ಇತ್ತು. ಕಳೆದ 24 ತಾಸಿನಲ್ಲಿ 71,365 ಹೊಸ ಕೇಸ್​ಗಳು ವ್ಯಕ್ತವಾಗಿದ್ದು, ಮಂಗಳವಾರಕ್ಕಿಂತ (67,597) ನಾಲ್ಕು ಸಾವಿರಕ್ಕೂ ಅಧಿಕವಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 8,92,828 ಇದ್ದು, 24 ತಾಸಿನಲ್ಲಿ 1.74 ಲಕ್ಷ ಕೋವಿಡ್ ಪೀಡಿತರು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ ಗುಣಮುಖ ಹೊಂದಿದವರ ಪ್ರಮಾಣ 4,10,12,869ಕ್ಕೆ (ಶೇ.96.7) ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 24 ತಾಸಿನಲ್ಲಿ 1,217 ಮಂದಿ ಸಾವನ್ನಪ್ಪಿದ್ದು, ಕೇರಳದಲ್ಲಿ 824 ಮತ್ತು ಮಹಾ ರಾಷ್ಟ್ರದಲ್ಲಿ 57 ಮರಣ ಸಂಭವಿಸಿದೆ. ಇದರಿಂದ ದೇಶದಲ್ಲಿ ಒಟ್ಟಾರೆ ಮರಣಿತರ ಸಂಖ್ಯೆ 5.05 ಲಕ್ಷ ದಾಟಿದೆ.
ಅಲ್ಯೂಮಿನಿಯಂ ಬೆಲೆಯೇರಿಕೆ:ಕೋವಿಡ್ ನಿಯಂತ್ರಣಕ್ಕೆ ಹೇರಿರುವ ಲಾಕ್​ಡೌನ್​ನಿಂದಾಗಿ ಚೀನಾದ ಬೈಸ್ ನಗರದಲ್ಲಿ ಅಲ್ಯೂಮಿನಿಯಂ ಬೆಲೆ ಗಗನಕ್ಕೇರಿದ್ದು 14 ವರ್ಷಗಳಲ್ಲೇ ಅತಿ ಹೆಚ್ಚಿನ ಬೆಲೆಯೇರಿಕೆ ಯಾಗಿದೆ. ದಕ್ಷಿಣ ಚೀನಾದ ಅಲ್ಯೂಮಿನಿಯಂ ರಾಜಧಾನಿ’ ಎಂದು ಹೆಸರುವಾಸಿಯಾದ ಬೈಸ್​ನಲ್ಲಿ ವಾರ್ಷಿಕ 22 ಲಕ್ಷ ಟನ್ ಅಲ್ಯೂಮಿನಿಯಂ ಉತ್ಪಾದನೆಯಾಗುತ್ತದೆ. ಲಾಕ್​ಡೌನ್​ನಿಂದಾಗಿ ಸಾರಿಗೆ ಸಂಚಾರ ಸ್ಥಗಿತಗೊಂಡಿ ರುವುದರಿಂದ ಈ ಲೋಹದ ಸಾಗಾಟಕ್ಕೂ ಕುತ್ತು ಬಂದಿದೆ. ಹೀಗಾಗಿ ಅದರ ಬೆಲೆ ಗಗನಮುಖಿಯಾಗಿದೆ.
ಕೋಟಿ ಮಕ್ಕಳಿಗೆ ಲಸಿಕೆ:ದೇಶದಾದ್ಯಂತ 15-18 ವಯೋಗುಂಪಿನ ಒಂದು ಕೋಟಿಗೂ ಅಧಿಕ ಎಳೆಯರಿಗೆ ಕರೊನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಬುಧವಾರ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
