ಮುಂಬೈ:ನಟ, ನಟಿಯರು ತಮ್ಮ ಫಿಟ್ ದೇಹಕ್ಕೆ ಹೆಸರುವಾಸಿಯಾಗಿದ್ದಾರೆ. ವರ್ಕ್‌ಔಟ್ ಮಾಡುವುದು, ತಮ್ಮ ಆಹಾರಕ್ರಮದ ಬಗ್ಗೆ ಕಾಳಜಿ ವಹಿಸುವುದು ಮುಂತಾದ ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
ಜನಪ್ರಿಯ ನಟರಲ್ಲಿ ಒಬ್ಬರಾದ ಪಾಕಿಸ್ತಾನದ ನಟ ಫವಾದ್ ಖಾನ್, ತಮ್ಮ ಫಿಟ್‌ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹದಿಹರೆಯದವನಾಗಿದ್ದಾಗ ಅನುಭವಿಸಿದ ಅನಾರೋಗ್ಯದ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.
17 ನೇ ವಯಸ್ಸಿನಲ್ಲಿ, ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ತೀವ್ರ ಜ್ವರ ಅನುಭವಿಸಿದೆ, ಅದು ಕೇವಲ ಎಂಟು ದಿನಗಳಲ್ಲಿ 10 ಕಿಲೋಗಳಷ್ಟು ದೇಹದ ತೂಕವನ್ನು ಕಳೆದುಕೊಳ್ಳುವಂತೆ ಮಾಡಿತು. 17 ನೇ ವಯಸ್ಸಿನಲ್ಲಿ, ನಾನು 65 ಕೆಜಿಯಿಂದ 55 ಕೆಜಿಗೆ ಇಳಿದೆ. ಆರೋಗ್ಯಕರ ಜೀವನಶೈಲಿಯನ್ನು ಸ್ವತಃ ನಿರ್ವಹಿಸುವುದು ಒಂದು ಸವಾಲಾಗಿತ್ತು.
ಇದನ್ನೂ ಓದಿ:ಬಡ ಮಹಿಳೆಗೆ ಸ್ವತಃ ಶಸ್ತ್ರಚಿಕಿತ್ಸೆ ಮಾಡಿ, ಮಾನವೀಯತೆ ಮೆರೆದ ಕುಣಿಗಲ್ ಶಾಸಕ ಡಾ.ರಂಗನಾಥ್
ಈ ರೋಗ ನನ್ನ ಶಾಲಾ ಜೀವನದ ಮೇಲೆ ಪರಿಣಾಮ ಬೀರಿತು. “ನಾನು ಶಾಲೆಯಲ್ಲಿ ಸಾಕಷ್ಟು ಸಕ್ರಿಯನಾಗಿದ್ದೆ, ಪ್ರತಿಯೊಂದು ಕ್ರೀಡೆಯನ್ನು ಆಡುತ್ತಿದ್ದೆ ಮತ್ತು ಮಧುಮೇಹದ ನಂತರ ನನ್ನಿಂದ ಇದ್ಯಾವುದೂ ಸಾಧ್ಯವಾಗಲಿಲ್ಲ. ನನಗೆ ಕ್ರೀಡೆಯ ಮೇಲೆ ಇದ್ದ ಉತ್ಸಾಹವನ್ನು ಸಂಪೂರ್ಣವಾಗಿ ಕ್ಷೀಣಿಸಿತು” ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮೊಮ್ಮಗನ ಮೃತದೇಹದೊಂದಿಗೆ 10 ದಿನಗಳಿಂದ ವಾಸವಾಗಿದ್ದ ಅಜ್ಜಿ..!
“ಮಧುಮೇಹದೊಂದಿಗಿನ ಹೋರಾಟವು ಮನರಂಜನಾ ಉದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಅಡ್ಡಿಪಡಿಸಲು ಎಂದಿಗೂ ಬಿಡಲಿಲ್ಲ. ನಾನು 24 ವರ್ಷಗಳಿಂದ ಮಧುಮೇಹದ ಜತೆಗೆ ವೃತ್ತಿಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ. ನಾನು 17 ವರ್ಷ ವಯಸ್ಸಿನಿಂದಲೂ ಇನ್ಸುಲಿನ್ ಅನ್ನು ಬಳಸುತ್ತಿದ್ದೇನೆ ಮತ್ತು ಈಗ ನನಗೆ 41 ವರ್ಷ ವಯಸ್ಸಾಗಿದೆ” ಎಂದಿದ್ದಾರೆ.
ಇನ್ಸುಲಿನ್ ಎಂದರೆನು?:ಸಕ್ಕರೆ ಕಾಯಿಲೆ ಇರುವವರಿಗೆ ತಾವು ತೆಗೆದುಕೊಳ್ಳುತ್ತಾರೆ.ಇನ್ಸುಲಿನ್ ರಕ್ತದಿಂದ ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಸಾಗಿಸಲು ಮೇದೋಜ್ಜೀರಕ ಗ್ರಂಥಿಯಿಂದ ಬಿಡುಗಡೆ ಮಾಡಲಾದ ಪ್ರಬಲವಾದ ಹಾರ್ಮೋನ್ ಆಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ.
ಕಾಡಂಚಿನ ಗ್ರಾಮಗಳ ಜನರ ಜೀವಕ್ಕಿಲ್ಲ ಗ್ಯಾರಂಟಿ; ಮೊಬೈಲ್​​​ನಲ್ಲಿ ಗೇಮ್ ಆಡುತ್ತಾ ಕುಳಿತ್ತಿದ್ದ ಬಾಲಕಿ ಮೇಲೆ ವನ್ಯಪ್ರಾಣಿಗಳ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
