ಲಖನೌ:ನನ್ನ ಮಗ ತುಂಬ ದೊಡ್ಡ ತಪ್ಪು ಮಾಡಿದ್ದಾನೆ..ಆತ ಶರಣಾಗದಿದ್ದರೆ ಕೊಂದು ಬಿಡಿ ಎಂದು ಹೇಳಿದ್ದರು ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯ ತಾಯಿ ಸರಳಾದೇವಿ. 8 ಪೊಲೀಸರನ್ನು ಹತ್ಯೆಗೈದ ವಿಕಾಸ್​ ದುಬೆ ಶರಣಾಗದಿದ್ದರೆ ಮುಲಾಜಿಲ್ಲದೆ ಕೊಲ್ಲಿ ಎಂದಿದ್ದ ಅವರ ತಾಯಿ ಇದೀಗ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರನ್ನು ಹತ್ಯೆ ಮಾಡಿದ ಬಳಿಕ ನಾಪತ್ತೆಯಾಗಿರುವ ವಿಕಸ್ ದುಬೆಯ ಬಿಕ್ರು ಗ್ರಾಮದಲ್ಲಿರುವ ಮನೆಯನ್ನು ನಿನ್ನೆ ಕಾನ್ಪುರ ಜಿಲ್ಲಾಡಳಿತ, ಪೊಲೀಸರ ಸಹಯೋಗದೊಂದಿಗೆ ನೆಲಸಮ ಮಾಡಿತ್ತು. ಜೆಸಿಬಿ ಮೂಲಕ ಮನೆ, ಕಾರುಗಳನ್ನೆಲ್ಲ ಧ್ವಂಸ ಮಾಡಲಾಗಿತ್ತು.ಇದನ್ನೂ ಓದಿ:ರಾಮ್​ಚರಣ್​ಗೂ ಅಂಟಿದ ವೆಬ್​ ಸೀರೀಸ್​ ಮೋಹ … ಮಗನ ಜತೆ ನಿಲ್ತಾರಾ ಚಿರಂಜೀವಿ?
ಇದೀಗ ಮನೆ ಕೆಡವಿದ್ದರ ಬಗ್ಗೆ ಸರಳಾ ದೇವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದು ವಿಕಾಸ್​ ದುಬೆ ಕಟ್ಟಿಸಿದ ಮನೆಯಲ್ಲ. ನನ್ನ ಪತಿ ಕಟ್ಟಿಸಿದ್ದು ಎಂದು ಹೇಳಿದ್ದಾರೆ.
ಹೀಗೆ ಮನೆಯನ್ನು ನೆಲಸಮ ಮಾಡಿದ್ದಕ್ಕೆ ನನಗೆ ತುಂಬ ನೋವಾಗಿದೆ. ಇದನ್ನು ಕಟ್ಟಿದ್ದು ನನ್ನ ಪತಿ ಮತ್ತು ಮಾವ. ಬಹಳ ಹಿಂದಿನಿಂದಲೂ ಇದ್ದ ಮನೆಯನ್ನು ನೆಲಸಮ ಮಾಡಬಾರದಿತ್ತು. ನನ್ನ ಮಗ ವಿಕಾಸ್​ ದುಬೆ ಮಾಡಿದ ತಪ್ಪಿಗೆ ಆ ಮನೆಯನ್ನು ಕೆಡವಬಾರದಿತ್ತು. ಜಿಲ್ಲಾಡಳಿತವಾಗಲೀ, ಪೊಲೀಸರಾಗಲಿ ವಿಕಾಸ್​ ದುಬೆಗೆ ಸಂಬಂಧಪಟ್ಟ ಯಾವುದೇ ಆಸ್ತಿಯನ್ನು ಬೇಕಾದರೂ ವಶಪಡಿಸಿಕೊಳ್ಳಲಿ, ಹಾಳು ಮಾಡಲಿ. ಆದರೆ ಈ ಮನೆಯನ್ನು ಕೆಡವಿದ್ದು ತಪ್ಪು ಎಂದಿದ್ದಾರೆ.ಇದನ್ನೂ ಓದಿ:VIDEO| ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ: ಬದುಕು ಇಷ್ಟೇನಾ ಎನಿಸುವಂತಹ ದೃಶ್ಯವಿದು
ಕಳೆದ 4 ತಿಂಗಳುಗಳಿಂದ ನಾನು ನನ್ನ ಪತಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಲಖನೌದಲ್ಲಿ ನನ್ನ ಕಿರಿಯ ಮಗನೊಂದಿಗೆ ವಾಸವಾಗಿದ್ದೇನೆ. ವಿಕಾಸ್​​ನಿಂದಾಗಿ ನಾವೆಲ್ಲರೂ ಕಷ್ಟಪಡುತ್ತಿದ್ದೇವೆ. ಆತ ಕೂಡಲೇ ಶರಣಾಗಬೇಕು. ಅವನು ಮಾಡಿದ ತಪ್ಪಿಗೆ ಪೊಲೀಸರು ನಮ್ಮನ್ನು, ನಮ್ಮ ಬಂಧುಗಳನ್ನೆಲ್ಲ ವಿಚಾರಣೆಗೆ ಮಾಡುತ್ತಿದ್ದಾರೆ. ಇದರಿಂದ ಬೇಸರವಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)
ವಿಕಾಸ್​ ದುಬೆ ಸಹಚರ ಅರೆಸ್ಟ್​; ಕೊನೆಗೂ ನಿಜವಾಗಿಯೇ ಹೋಯ್ತು ಪೊಲೀಸರ ಅನುಮಾನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
