ಲಖನೌ:ಸಾಧಿಸುವ ಹಂಬಲದೊಂದಿಗೆ ಗುರಿಯತ್ತ ಮುನ್ನಡೆದರೆ ಬತಡನ ಕೂಡ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ 16 ವರ್ಷದ ದೀಪಾಲಿ ಕನೌಜಿಯಾ ತಾಜಾ ಉದಾಹರಣೆಯಾಗಿದ್ದಾರೆ. ಅಗಸನ ಮಗಳಾಗಿರುವ ದೀಪಾಲಿ, ಪ್ರತಿಷ್ಠಿತ ಅಮೆರಿಕ ಸ್ಕಾಲರ್​ಶಿಪ್​ ಗೌರವಕ್ಕೆ ಭಾಜನರಾಗಿದ್ದಾರೆ.
ದೀಪಾಲಿ ಅವರು ತಮ್ಮ ತಾಯಿಯೊಂದಿಗೆ ಒಂದು ಕೋಣೆಯ ಮನೆಯಲ್ಲಿ ವಾಸವಿದ್ದಾರೆ. ತಾಯಿ ವೃತ್ತಿಯಲ್ಲಿ ಅಗಸಗಿತ್ತಿಯಾಗಿದ್ದಾರೆ. ಒಂದೆಡೆ ಕುಟುಂಬ, ಬಡತನ ಬೇಗೆಯಲ್ಲಿ ಬೇಯುತ್ತಿದ್ದು, ತಾಯಿಗೆ ನೆರವಾಗಲು ದೀಪಾಲಿ ಮಕ್ಕಳಿಗೆ ಟ್ಯೂಷನ್​ ಹೇಳಿಕೊಡುತ್ತಾಳೆ. ಸದ್ಯ ದೀಪಾಲಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಯುಎಸ್​ ಸ್ಕಾಲರ್​ಶಿಪ್​ ಸಿಕ್ಕಿದ್ದಕ್ಕೆ ಭಾರಿ ಸಂತಸ ವ್ಯಕ್ತಪಡಿಸಿದ್ದಾಳೆ.
ಅಮೆರಿಕದ ಕೆನಡಿ-ಲುಗರ್ ಯೂತ್ ಎಕ್ಸ್‌ಚೇಂಜ್ ಮತ್ತು ಸ್ಟಡಿ ಕಾರ್ಯಕ್ರಮದ ವಿಭಾಗವು ಪ್ರಮುಖ ದೇಶಗಳ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಯುಎಸ್‌ಗೆ ಶೈಕ್ಷಣಿಕ ವರ್ಷಕ್ಕೆ ಆಹ್ವಾನಿಸುತ್ತದೆ. ಇದರಲ್ಲಿ ದೀಪಾಲಿ ಸಹ ಆಯ್ಕೆಯಾಗಿರುವುದು ಆಕೆಯ ಕನಸನ್ನು ನನಸು ಮಾಡಿಕೊಳ್ಳಲು ಒಂದು ಸುವರ್ಣಾವಕಾಶ ಸಿಕ್ಕಿದಂತಾಗಿದೆ.
ಈ ಬಗ್ಗೆ ಮಾತನಾಡಿರುವ ದೀಪಾಲಿ, ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಭಾರತದಾದ್ಯಂತ ಆಯ್ಕೆಯಾಗಿರುವ 30 ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬಳು. ನಾನು ವಿಭಿನ್ನ ಸಂಸ್ಕೃತಿಗಳ ಬಗ್ಗೆ ಕಲಿಯಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಅಂದಹಾಗೆ, ನಾಲ್ವರು ಮಕ್ಕಳಲ್ಲಿ ದೀಪಾಲಿ ಕಿರಿಯಳು. ಆಕೆಯ ತಂದೆ ಅಗಸನಾಗಿದ್ದು, ಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ.
ಮಗಳು ಯುಎಸ್​ ಸ್ಕಾಲರ್​ಶಿಪ್​ಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ದೀಪಾಲಿ ಅವರ ತಾಯಿ ಸುಮನ್​, ನಾನು ತುಂಬಾ ಉತ್ಸುಕಳಾಗಿದ್ದೇನೆ. ಆದರೂ, ಮಗಳನ್ನು ಮೊದಲ ಬಾರಿಗೆ ಅಮೆರಿಕಕ್ಕೆ ಸ್ವಲ್ಪ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
ದೀಪಾಲಿಯನ್ನು ಪ್ರೇರಣಾ ಬಾಲಕಿಯರ ಶಾಲೆಗೆ ಸೇರಿಸಲಾಗಿದೆ. ಈ ಶಾಲೆಯು ಸ್ಟಡಿ ಹಾಲ್ ಎಜುಕೇಶನಲ್ ಫೌಂಡೇಶನ್‌ನ ಘಟಕವಾಗಿದ್ದು ಅದು ಕಡಿಮೆ-ಆದಾಯ ಮತ್ತು ಅಂಚಿನಲ್ಲಿರುವ ಸಮುದಾಯಗಳ ಹುಡುಗಿಯರಿಗೆ ಶಿಕ್ಷಣವನ್ನು ನೀಡುತ್ತದೆ. ನಾನು ನನ್ನ ಶಿಕ್ಷಕರಿಂದ ಯುಎಸ್ ಬಗ್ಗೆ ಕೇಳಿದ್ದೆ ಆದರೆ, ನಾನು ಅಧ್ಯಯನಕ್ಕಾಗಿ ಅಲ್ಲಿಗೆ ಹೋಗುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಇದು ನನಗೆ ಉತ್ತಮ ಅವಕಾಶ ಎಂದು ದೀಪಾಲಿ ಹೇಳಿದ್ದಾರೆ. ಅಂದಹಾಗೆ ದೀಪಾಲಿ ಅವರು ಆಗಸ್ಟ್ 19 ರಂದು ಯುಎಸ್​ಗೆ ಹಾರಲಿದ್ದಾರೆ.(ಏಜೆನ್ಸೀಸ್​)
ಗಂಡನಿಂದ ವಿಚ್ಛೇದನ ಪಡೆದಿದ್ದಕ್ಕೆ ಸ್ನೇಹಿತರಿಗೆ ಪಾರ್ಟಿ ಕೊಟ್ಟು ಕುಣಿದು ಕುಪ್ಪಳಿಸಿದ ಮಹಿಳೆ! ವಿಡಿಯೋ ವೈರಲ್​

Paris Olympic 2024: ಮೊದಲ ದಿನವೇ ಭಾರತಕ್ಕೆ ನಿರಾಸೆ, ಏರ್​ ರೈಫಲ್ ವಿಭಾಗದಲ್ಲಿ ಶೂಟರ್​ಗಳು ಫೇಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eleven =
Remember me
