ಬೆಂಗಳೂರು:ಚಂದ್ರನ ಮೇಲೆ ಭಾರತ ತ್ರಿವರ್ಣ ಧ್ವಜ ನೆಟ್ಟಾಯಿತು, ಇನ್ನು ಅಲ್ಲಿ ಹೋಗಿ ಕ್ರಿಕೆಟ್​ ಆಡುವುದೊಂದೇ ಬಾಕಿ! ಚಂದ್ರಯಾನ-3 ಯಶಸ್ಸಿನ ಬಳಿಕ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್​ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್​ ಒಂದು ಅಂಥ ಕನಸುಗಳಿಂದ ಕೂಡಿರುವುದು ವಿಶೇಷ.
ಚಂದ್ರನ ಮೇಲೆ ಭಾರತದ ಲ್ಯಾಂಡರ್​ (ವಿಕ್ರಮ) ಯಶಸ್ವಿಯಾಗಿ ಲ್ಯಾಂಡಿಂಗ್​ ಆದ ಬಳಿಕ ಕಳುಹಿಸಿರುವ ಚಂದ್ರನ ಮೇಲ್ಮೈನ ಚಿತ್ರವನ್ನು ಕ್ರಿಕೆಟ್​ ಪಿಚ್​ಗೆ ಹೋಲಿಸಿ ವಾಸಿಂ ಜಾಫರ್​ ಇಂಥದ್ದೊಂದು ಟ್ವೀಟ್​ ಮಾಡಿದ್ದು, ಭಾರತೀಯ ಕ್ರಿಕೆಟ್​ ಪ್ರೇಮಿಗಳ ಮನ ಗೆದ್ದಿದ್ದಾರೆ.
ಚಂದ್ರ ಮೇಲ್ಮೈಯನ್ನು ಕ್ರಿಕೆಟ್​ ಪಿಚ್​ಗೆ ಹೋಲಿಸಿ ಅದರ ಪಿಚ್​ ರಿಪೋರ್ಟ್​ ನೀಡಿರುವ ದೇಶೀಯ ಕ್ರಿಕೆಟ್​ ದಿಗ್ಗಜ ವಾಸಿಂ ಜಾಫರ್​, “ಇಂದು ಖಂಡಿತವಾಗಿಯೂ ಮೊದಲು ಬ್ಯಾಟಿಂಗ್​ ಮಾಡಬಹುದಾದ ಪಿಚ್​. ನಾನು ಮೂವರು ಸ್ಪಿನ್ನರ್​ಗಳ ಜತೆಗೆ ಓರ್ವ ವೇಗಿಯನ್ನು ಆಯ್ದುಕೊಳ್ಳುತ್ತೇನೆ. ಜತೆ ಓರ್ವ ಆಲ್ರೌಂಡರ್​ ಇರಬೇಕು’ ಎಂದು ತಮಾಷೆಯಾಗಿ ವಿಶ್ಲೇಷಿಸಿದ್ದಾರೆ. ಇದಕ್ಕೆ ಕ್ರಿಕೆಟ್​ ಪ್ರೇಮಿಗಳೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
Definitely a bat first surface. I'd go with 3 spinners, one genuine seamer along with an all rounder 😛😉📸: Chandrayaan3#Chandrayaan3Landingpic.twitter.com/mkmk5h9AW5
— Wasim Jaffer (@WasimJaffer14)August 23, 2023

ಏಷ್ಯಾಕಪ್​-ವಿಶ್ವಕಪ್​ ಪಂದ್ಯಗಳನ್ನು ಈ ಆ್ಯಪ್​ ಮೂಲಕ ಮೊಬೈಲ್​ನಲ್ಲೇ ಉಚಿತವಾಗಿ ವೀಕ್ಷಿಸಬಹುದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
