ಭುವನೇಶ್ವರ್​:ರಸ್ತೆಯಲ್ಲಿ ಹೋಗುವಾಗ ಸರಗಳ್ಳರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಹೇಳುತ್ತಾರೆ. ಆದರೆ, ಮನೆಯಲ್ಲಿದ್ದರೂ ಕೆಲವೊಮ್ಮೆ ಚಿನ್ನದ ಸರವನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂಬುದಕ್ಕೆ ಒಡಿಶಾದಲ್ಲಿ ನಡೆದಿರುವ ಘಟನೆ ತಾಜಾ ಉದಾಹರಣೆಯಾಗಿದೆ.
ಖತರ್ನಾಕ್​ ಸರಗಳ್ಳನೊಬ್ಬ ಮನೆಯ ಆವರಣದ ಒಳಗೆ ನಿಂತಿದ್ದ ಮಹಿಳೆಯ ಕುತ್ತಿಗೆಯಿಂದಲೇ ಚಿನ್ನದ ಸರವನ್ನು ಎಗರಿಸಿರುವ ಆತಂಕಕಾರಿ ಘಟನೆ ಒಡಿಶಾ ರಾಜಧಾನಿ ಭುವನೇಶ್ವರದ ನಾಯಪಲ್ಲಿ ಏರಿಯಾದ ಎನ್​-4 ಬ್ಲಾಕ್​ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸರ ಎಗರಿಸುವ ದೃಶ್ಯ ಸೆರೆಯಾಗಿದೆ.
ವಿಡಿಯೋದಲ್ಲಿ ಏನಿದೆ?ಮಹಿಳೆಯೊಬ್ಬಳು ತನ್ನ ಮನೆಯ ಆವರಣದಲ್ಲಿ ಅಡ್ಡಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹೊರಗಡೆ ರಸ್ತೆಯ ಮೇಲೆ ನಿಂತು ತನ್ನನ್ನೇ ಗಮನಿಸುತ್ತಿರುವ ವ್ಯಕ್ತಿಯೊಬ್ಬನ ಅರಿವೇ ಇಲ್ಲದೆ, ಸಂತ್ರಸ್ತ ಮಹಿಳೆ ತನ್ನ ಪಾಡಿಗೆ ಮನೆಯ ಆವರಣದಲ್ಲಿ ವಾಕಿಂಗ್​ ಮಾಡುತ್ತಿರುತ್ತಾಳೆ. ಸರಿಯಾದ ಸಮಯಕ್ಕೆ ಕಾಯುವ ಖದೀಮ, ಹೊಂಚು ಹಾಕಿಕೊಂಡು, ಲಾಕ್​ ಮಾಡಿದ್ದ ಮನೆಯ ಗೇಟಿನ ಬಳಿ ಬಂದು ಎರಡು ಕೈಗಳನ್ನು ಮುಂದೆ ಚಾಚಿ, ಮಹಿಳೆಯ ಕುತ್ತಿಗೆಗೆ ಹಾಕಿ, ಚಿನ್ನದ ಸರವನ್ನು ಕದ್ದು, ಅಲ್ಲಿಂದ ಪರಾರಿಯಾಗುತ್ತಾನೆ.
(ವಿಡಿಯೋ ಕೃಪೆ: ಕಳಿಂಗ ಟಿವಿ ಇನ್​ಸ್ಟಾಗ್ರಾಂ)
A post shared by Kalinga TV (@kalingatv24x7)
ಭುವನೇಶ್ವರದ ನಯಾಪಲ್ಲಿ ಪ್ರದೇಶದಲ್ಲಿ ಸರಗಳ್ಳರು ಮತ್ತೆ ಸಕ್ರಿಯರಾಗಿರುವುದನ್ನು ಈ ವಿಡಿಯೋ ಸಾಬೀತು ಮಾಡಿದೆ. ಸರ ಕಳೆದುಕೊಂಡ ಸಂತ್ರಸ್ತೆ ಸ್ಥಳೀಯ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾಳೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ, ಆದರೆ ಸಿಸಿಟಿವಿ ದೃಶ್ಯಾವಳಿಗಳು ಕೃತ್ಯವನ್ನು ಸ್ಪಷ್ಟವಾಗಿ ತೋರಿಸಿವೆ.(ಏಜೆನ್ಸೀಸ್​)
ಧೋನಿ ನಿರ್ಮಾಣದ ಮೊದಲ ಸಿನಿಮಾದಲ್ಲಿ ನಟಿಸಲಿರುವ ಹೀರೋ-ಹೀರೋಯಿನ್​ ಇವರೇ ನೋಡಿ…

ಹೊಸ ನೋಟುಗಳಲ್ಲಿ ಲಕ್ಷ್ಮೀ ಮತ್ತು ಗಣೇಶನ ಫೋಟೋ ಮುದ್ರಿಸುವಂತೆ ಪ್ರಧಾನಿ ಮೋದಿಗೆ ಕೇಜ್ರಿವಾಲ್​ ಮನವಿ!

ಎಚ್​​ಡಿಕೆ ಫೋಟೋ ಇರಿಸಿ ಲಕ್ಷ್ಮೀ ಪೂಜೆ ಮಾಡಿದ ಅಭಿಮಾನಿ; 2023ರಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
